ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಸಮಯ ಇಲ್ಲವೆ?

Lingaraj Badiger
Updated On : 18 Dec 2013, 6:19 am

ಕೆಲವು ಮಂದಿಯಲ್ಲಿ ಎಂಥ ಶಕ್ತಿ ನಿಹಿತವಾಗಿರುತ್ತದೆ ಅನ್ನುವುದನ್ನು ನೋಡಿದರೆ ಸೋಜಿಗವಾಗುತ್ತದೆ. ಉದಾಹರಣೆಗೆ, ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು. ಅವರು ಬೆಳ್ಳಂಬೆಳಗ್ಗೆ ನಾಲ್ಕು ಗಂಟೆಗೆ ಏಳುತ್ತಾರೆ. ರಾತ್ರಿ ಹನ್ನೆರಡು, ಒಂದು ಗಂಟೆಯವರೆಗೂ ದುಡಿಯುತ್ತಲೇ ಇರುತ್ತಾರೆ. ಬಿಡುವಿಲ್ಲದ ಕಾರ್ಯಕ್ರಮಗಳು. ಈಗಲೂ ಅವರು ಬಿಡುವಿಲ್ಲದ ಸೆಲೆಬ್ರಿಟಿ. ಅದರ ನಡುವೆಯೂ ಅವರು ಸ್ವಂತದ ಅಧ್ಯಯನಕ್ಕೆ ಸಮಯ ಕಾದಿರಿಸಿಕೊಂಡಿರುತ್ತಾರೆ. ಅವರ ದುಡಿಮೆಯಲ್ಲಿ ಸ್ವಂತ, ಪರಾರ್ಥಗಳೆಲ್ಲವೂ ಸಂಗಮಿಸಿರುತ್ತವೆ. ಇದೇ ಕೆಟಗರಿಗೆ ಅನೇಕ ರಾಜಕಾರಣಿಗಳನ್ನೂ, ಉದ್ಯಮಿಗಳನ್ನೂ ಸೇರಿಸಬಹುದು.

ನಮ್ಮಲ್ಲಿ ಕೆಲವರನ್ನು ಸಮಯದ ಬಗ್ಗೆ ವಿಚಾರಿಸಿ ನೋಡಿ. ಸಮಯವೇ ಸಾಕಾಗೊಲ್ಲ ಎಂಬ ಗೊಣಗಾಟ ಇದ್ದದ್ದೇ. ಯಾವ ಕೆಲಸಕ್ಕೆ ಸಮಯ ಸಾಕಾಗುವುದಿಲ್ಲ? ಇಂಥವರಿಗೆ ಹರಟೆ ಹೊಡೆಯಲು, ಗಾಸಿಪ್ ಮಾಡಲು ಸಮಯ ಇದ್ದೆ ಇರುತ್ತದೆ. ಇನ್ನು ಕೆಲವರಿಗೆ ಸಮಯ ಕಳೆಯುವುದು ಹೇಗೆಂಬ ಚಿಂತೆ. ಅದಕ್ಕಾಗಿ ನೂರಾರು ಚಟಗಳು, ವ್ಯಸನಗಳು. ಈ ಸಮಯವನ್ನು ಸೃಜನಶೀಲವಾಗಿ ಉಪಯೋಗಿಸಲು ಅವರು ಮುಂದಾಗರು. ಸಮಯವನ್ನು ನಾವು ಕಳೆದರೆ, ಸಮಯವೂ ನಮ್ಮನ್ನು ಕಳೆದುಬಿಡುತ್ತದೆ ಎಂಬುದು ಅರ್ಥವಾಗದವರಿವರು.
ಅದಿರಲಿ, ಕಲಾಂ ಅವರಿಗೆ ಅಷ್ಟೊಂದು ಸಮಯ ಹೇಗೆ ಸಿಗುತ್ತದೆ? ಅವರ ಗಡಿಯಾರದಲ್ಲೂ ಇರುವುದು ಹನ್ನೆರಡು ಪ್ಲಸ್ ಹನ್ನೆರಡು ಗಂಟೆಗಳೇ ತಾನೆ? ಅದಕ್ಕೆ ಕಾರಣ ಅವರ ವಿಜ್ಞಾನಿಯ ಖಚಿತತೆಯಲ್ಲಿದೆ. ಅವರ ವಿಜ್ಞಾನ ಪ್ರಯೋಗಗಳು ಅವರಿಂದ ಒಂದು ಮಿಲಿಮೀಟರ್ ವ್ಯತ್ಯಾಸವಾಗದ, ಒಂದು ಸೆಕೆಂಡ್ ಅತ್ತಿತ್ತ ಆಗದ ಖಚಿತತೆಯನ್ನು ಅಪೇಕ್ಷಿಸುತ್ತದೆ. ಹೀಗೆ ದಿನದ ಬದುಕಿನಲ್ಲೂ ಪಳಗಿದವರು ಕಲಾಂ. ಮಾಜಿ ಯೋಧರಲ್ಲೂ ನಾವು ಈ ಶಿಸ್ತನ್ನು ಕಾಣಬಹುದು. ಸಮಯವನ್ನು ಉಪಯೋಗಿಸಿಕೊಳ್ಳಲಾರದ ನಮ್ಮ ಅಸಾಮರ್ಥ್ಯಕ್ಕೆ ಕಾರಣ ಈ ಪಳಗದಿರುವಿಕೆಯೇ. ಒಂದು ನಿಗದಿತ ವೇಳಾಪಟ್ಟಿ ಇಟ್ಟುಕೊಂಡು, ಅದನ್ನು ಪರಿಪಾಲಿಸುತ್ತಾ, ಅದರಲ್ಲಿ ಪಳಗಿದರೆ ಅಂಥ ಶಕ್ತಿ ನಮ್ಮಲ್ಲೂ ಬಂದು ಸೇರುವುದನ್ನು ನಾವು ನೋಡಬಹುದು. ಇದು ಯಶಸ್ಸಿನ ಮೊದಲ ಹಂತವೇ ಸರಿ.

- ಸಹನೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments