ಪುಸ್ತಕ ಬಿಡುಗಡೆ
ಅಲಕಾ ಕಟ್ಟೆಮನೆಯವರ 'ಶಾಲ್ಮಲೆಯ ಹೊನಲಲ್ಲಿ' ಕಥಾ ಸಂಕಲನ ಬಿಡುಗಡೆ ಸಮಾರಂಭ ಮೈಸೂರಿನ ಕಲಾಮಂದಿರದ ಮನೆಯಂಗಳದಲ್ಲಿ ನಡೆಯಲಿದೆ. ಹೇಮಂತ ಸಾಹಿತ್ಯ, ಬೆಂಗಳೂರು ಈ ಕಥಾ ಸಂಕಲನವನ್ನು ಹೊರತಂದಿದೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಲೇಖಕ ಕುಂ. ವೀರಭದ್ರಪ್ಪ ಅವರು ಕೃತಿ ಬಿಡುಗಡೆ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಡಾ. ಸಿ. ನಾಗಣ್ಣ (ನಿರ್ದೇಶಕರು, ಪ್ರಸಾರಾಂಗ, ಮೈಸೂರು ವಿ.ವಿ.) ವಹಿಸಲಿದ್ದಾರೆ. ಕೃತಿ ಕುರಿತು ಡಾ. ಪೃಥ್ವಿ ದತ್ತ ಚಂದ್ರ ಶೋಭಿ ಮಾತನಾಡಲಿದ್ದಾರೆ.
ಸ್ಥಳ: ಮೈಸೂರಿನ ಕಲಾಮಂದಿರದ ಮನೆಯಂಗಳದಲ್ಲಿ
ದಿನಾಂಕ: 22.12.2013
ಸಮಯ: ಬೆಳಗ್ಗೆ 10 ಗಂಟೆ.