ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ನಿಮ್ಮೊಳಗಿನ ಸನ್ಯಾಸಿಯನ್ನು ಜಾಗೃತಗೊಳಿಸಿ!

Mainashree
Updated On : 23 Dec 2013, 12:26 pm

ವಿವೇಕಾನಂದರು ಅಮೆರಿಕದಲ್ಲಿದ್ದಾಗಲೇ ನಾಲ್ವರು ಬ್ರಹ್ಮಚಾರಿಗಳು ಮಠಕ್ಕೆ ಸೇರಿಕೊಂಡು ಹಿರಿಯ ಸನ್ಯಾಸಿಗಳಿಂದ ಆಧ್ಯಾತ್ಮಿಕ ಶಿಕ್ಷಣ ಪಡೆಯುತ್ತಿದ್ದರು. ಈ ಬ್ರಹ್ಮಚಾರಿಗಳು ವಿವೇಕಾನಂದರಿಂದಲೇ ಸನ್ಯಾಸ ಸ್ವೀಕರಿಸಬೇಕೆಂದು ಬಯಸಿದ್ದರು. ಅದರಂತೆ ಸನ್ಯಾಸ ಸ್ವೀಕರಿಸಲು ಇವರು ಅರ್ಹರು ಎಂದು ಮನಗಂಡ ಸ್ವಾಮೀಜಿ ದೀಕ್ಷಾ ದಿನವನ್ನು ಗೊತ್ತುಪಡಿಸಿದರು.
ಆ ದಿನ ದೀಕ್ಷಾರ್ಥಿಗಳಿಗೆ ವಿಧಿವತ್ತಾಗಿ ದೀಕ್ಷೆ ನೀಡಿ ತ್ಯಾಗ ಜೀವನದ ವೈಭವವನ್ನು ಉಜ್ವಲವಾಗಿ ವರ್ಣಿಸಿದರು. 'ಸನ್ಯಾಸಿಗಳ ಜೀವನವೆಂಬುದು ಕೇವಲ ತಮ್ಮ ಸ್ವಂತ ಮುಕ್ತಿಗಲ್ಲದೆ ಇತರರ ಶ್ರೇಯಸ್ಸಿಗಾಗಿಯೇ ಮುಡಿಪಾಗಿಡಬೇಕು. ಸನ್ಯಾಸಿಯ ಜನ್ಮವೇ ಜಗತ್ತಿನ ಹಿತಕ್ಕಾಗಿ. ಸನ್ಯಾಸಿಯ ತ್ಯಾಗಜೀವನ ನಿರ್ಭಾಗ್ಯರ ದುಃಖವನ್ನು ದೂರಗೊಳಿಸುವುದಕ್ಕಾಗಿ, ಪ್ರಲಾಪಿಸುತ್ತಿರುವ ಹೃದಯಗಳಿಗೆ ಸಾಂತ್ವನ ನೀಡುವುದಕ್ಕಾಗಿ, ಅಜ್ಞಾನಿಗಳಿಗೆ, ದೀನದಲಿತ ಅಸಹಾಯಕರಿಗೆ ಜೀವನೋಪಾಯವನ್ನು ಕಲ್ಪಿಸಿ ಅವರನ್ನು ಸ್ವಾವಲಂಬಿಗಳನ್ನಾಗಿಸುವುದಕ್ಕಾಗಿ, ಮೇಲು-ಕೀಳು, ಬಡವ-ಬಲ್ಲಿದ ಎಂಬ ತಾರತಮ್ಯವಿಲ್ಲದೆ ಶಾಸ್ತ್ರಗಳ ಬೋಧನೆಯನ್ನು ಪ್ರಸಾರ ಮಾಡುವುದಕ್ಕಾಗಿ ಹಾಗೂ ಸಕಲ ಜೀವರಲ್ಲಿ ಪರಬ್ರಹ್ಮವೆಂಬ ಸಿಂಹವನ್ನು ಜಾಗೃತಗೊಳಿಸುವುದಕ್ಕಾಗಿ! ಸನ್ಯಾಸಿಯು ಈ ಜಗತ್ತಿನಲ್ಲಿ ಜನ್ಮವೆತ್ತಿರುವುದು' ಎಂದರು.
ಸ್ವಾಮೀಜಿ ಸಾರಿದ ಸನ್ಯಾಸ ಜೀವನವನ್ನು ಪ್ರತಿಯೊಬ್ಬ ಭಾರತೀಯನೂ ಅಳವಡಿಸಿಕೊಂಡಿದ್ದೇ ಆದರೆ ಪ್ರತಿಯೊಬ್ಬರೂ ಪುರುಷಸಿಂಹರೇ ಸೈ! ಸ್ವಾಮೀಜಿ ಬಯಸುವುದು ತ್ಯಾಗ, ಸೇವೆಗಳ ಆದರ್ಶಗಳನ್ನು ಹೊತ್ತ ಧೀರರನ್ನಲ್ಲದೆ, ಹಾರ ತುರಾಯಿಗಳನ್ನು ಹಾಕುವ, ಚಪ್ಪಾಳೆ ತಟ್ಟುವ, ಭಾಷಣ ಬಿಗಿದು ಬೆನ್ನು ತಿರುಗಿಸಿ ಹೊರಟುಹೋಗುವವರನ್ನಲ್ಲ!

- ಆನಂದ ಎಸ್.ಎನ್.
anandsn193@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement