ಖಚಿತ ಸೇವಾ ಭಧ್ರತೆಯಿಲ್ಲ
ಇತ್ತೀಚಿನ ದಿನಗಳಲ್ಲಿ ಪ್ರಯಾಣ ಎಂದರೆ ಜನ ಭಯ ಬೀಳುವಂತಾಗಿದೆ. ಕಾರಣ ಬಸ್ ದುರಂತಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಪ್ರಯಾಣದ ವಿಷಯದಲ್ಲಿ ಖಾಸಗಿಗಿಂತ ಸರ್ಕಾರಿ ಬಸ್ ಪ್ರಯಾಣವೇ ಹೆಚ್ಚು ಸೂಕ್ತ. ಏಕೆಂದರೆ ಅಧಿಕ ಹಣದ ಆಸೆಯಿಂದ ಹೆಚ್ಚು ಜನರನ್ನು ತುಂಬುವ ಹಾಗೂ ಬೇಜವಾಬ್ದಾರಿಯಿಂದ ವಾಹನ ಚಲಾಯಿಸುವ ಪ್ರವೃತ್ತಿ ಸರ್ಕಾರಿ ಬಸ್ಗಿಂತ ಖಾಸಗಿಯಲ್ಲೇ ಹೆಚ್ಚಾಗಿರುತ್ತದೆ. ಜತೆಗೆ ಡ್ರೈವಿಂಗ್ ಲೈಸೆನ್ಸ್ ಪಡೆಯದ ಅದೆಷ್ಟೋ ಮಂದಿ ಖಾಸಗಿ ಬಸ್ನ ಚಾಲಕರಾಗಿದ್ದಾರೆ. ಇದರಿಂದ ಅಪಘಾತಗಳು ಸಂಭವಿಸಿ ಪ್ರಾಣಾಪಾಯಕ್ಕೆ ಸಿಲುಕುವ ಸಂದರ್ಭಗಳೇ ಹೆಚ್ಚು. ಅಲ್ಲದೇ ಖಾಸಗಿ ವಾಹನ ಚಾಲಕರಿಗೆ ಖಚಿತ ಸೇವಾ ಭಧ್ರತೆಯಿಲ್ಲದಿರುವುದರಿಂದ ಅವರಿಂದ ಜವಾಬ್ದಾರಿಯುತ ಕೆಲಸ ನಿರೀಕ್ಷಿಸುವುದು ಕಷ್ಟ ಸಾಧ್ಯ. ಖಾಸಗಿಯವರು ಲಾಭದ ಕಡೆಗೆ ಹೆಚ್ಚು ಗಮವ. ಬಸ್ನ ಗುಣಮಟ್ಟದೆಡೆಗೆ ತುಂಬಾ ಕಡಿಮೆ. ಇವೇ ಮೊದಲಾದ ಕಾರಣಗಳಿಂದ ಖಾಸಗಿ ಬಸ್ ಪ್ರಯಾಣ ಅಷ್ಟಾಗಿ ಸುರಕ್ಷಿತ ಅಲ್ಲ.
- ಹರಳಹಳ್ಳಿಪುಟ್ಟರಾಜು, ಪಾಂಡವಪುರ
ಸರ್ಕಾರದ ಮೇಲ್ವಿಚಾರಣೆ ಬೇಕು
ಖಾಸಗಿ ಬಸ್ಸುಗಳಲ್ಲಿ ಹಿರಿಯ ನಾಗರೀಕರಿಗೆ, ವಿಕಲ ಚೇತನರಿಗೆ, ಮಹಿಳೆಯರಿಗೆ ಕಾಯ್ದಿರಿಸಿದ ಆಸನಗಳು ಇರುವುದಿಲ್ಲ. ಹೆಚ್ಚು ಜನರನ್ನು ತುಂಬಿ ಸುರಕ್ಷತೆಯ ಕಡೆ ಗಮನ ಹರಿಸುವುದಿಲ್ಲ. ಖಾಸಗಿ ಸಾರಿಗೆಯ ನಿಯಮದಲ್ಲಿ ಬದಲಾವಣೆ ತರಬೇಕು. ಉತ್ತಮ ಸಿಬ್ಬಂದಿ ನೇಮಿಸಿಕೊಂಡು ಸಮಯ ಪಾಲನೆ ಮಾಡಿದರೆ ಈ ಬಸ್ ಪ್ರಯಾಣ ನಂಬಿಕೊಂಡವರಿಗೆ ಅನುಕೂಲವಾಗುತ್ತದೆ. ಪ್ರಯಾಣ ಸುಗಮವಾಗಲು ಪ್ರಯಾಣಿರಿಗೆ ಬೇಕಾದ ಸೌಕರ್ಯಗಳನ್ನು ಒದಗಿಸಿಬೇಕು. ಸುರಕ್ಷತೆಯ ಕಡೆಗೆ ಗಮನಹರಿಸದಿದ್ದಲ್ಲಿ ಸಾವು-ನೋವು ಹೆಚ್ಚಾಗುತ್ತವೆ. ಖಾಸಗಿಯವರ ಮೇಲೆ ಸರ್ಕಾರದವರು ಮೇಲ್ವಿಚಾರಣೆ ನಡೆಸುತ್ತಾ ತಪ್ಪಾದಲ್ಲಿ ಕ್ರಮ ಕೈಗೊಳ್ಳಬೇಕು.
- ನಾಗೇಶ್ ಎಸ್, ಬೆಂಗಳೂರು
ಸರಕಾರಿ ಬಸ್ಸುಗಳು ಹಳ್ಳಿಗಳಿಗೂ ಬರಲಿ
ಸರಕಾರಿ ಬಸ್ಸುಗಳಲ್ಲಿ ಕೆಲಮೊಂದು ಲೋಪಗಳಿಂದಾಗಿ ತಮ್ಮ ಪ್ರಾಮುಖ್ಯತೆ ಕಳೆದುಕೊಂಡಿದೆ. ಸರಕಾರ ಈ ಬಗ್ಗೆ ಗಮನ ಹರಿಸಬೇಕೆಂಬುದು ನಮ್ಮ ಆಶಯ. ಸರಕಾರಿ ಬಸ್ಸುಗಳು ನಿಗದಿತ ಸಮಯಕ್ಕೆ ಇಲ್ಲದಿರುವುದು ಹಾಗೂ ಸಮಯದ ಪರಿಪಾಲನೆ ಸರಿಯಿಲ್ಲ ಹಾಗಾಗಿ ಸಮಯದ ಹಿಂದೆ ಓಡುವ ಜನರ ಮನವೊಲಿಸುವಲ್ಲಿ ಸಾರಿಗೆ ಇಲಾಖೆ ವಿಫಲವಾಗಿದೆ. ಮುಖ್ಯವಾಗಿ ಈ ಬಸ್ಸುಗಳು ಹೆದ್ದಾರಿಗಳಲ್ಲಿ ಮಾತ್ರ ಓಡಾಡುವುದರಿಂದ ಹಳ್ಳಿಯಿಂದ ಬರುವ ಅಸಂಖ್ಯಾತ ಜನರಿಗೆ ತುಂಬ ತೊಂದರೆಯಾಗುತ್ತಿದೆ. ಕೆಲಸಕ್ಕಾಗಿ ಜನರು ಹಳ್ಳಿಗಳಿಂದ ಸಿಟಿಗೆ ಬರುತ್ತಾರೆ. ಆದರೆ, ಸರಕಾರಿ ಬಸ್ಸುಗಳೇ ಇಲ್ಲ. ಬರುವ ಒಂದೋ ಎರಡೊ ಖಾಸಗಿ ಬಸ್ಸುಗಳು ಜನರನ್ನು ಕುರಿಮಂದೆಗಳಂತೆ ತುಂಬಿಕೊಂಡು ಬರುತ್ತವೆ. ನಿಲ್ಲಲಿಕ್ಕೂ ಸಾಧ್ಯವಿರುವುದಿಲ್ಲ. ಹೀಗಾಗಿ ಸರ್ಕಾರಿ ಬಸ್ಸುಗಳ ಓಡಾಟ ನಗರದಿಂದ ಹಳ್ಳಿಗಳಿಗೂ ಬರಲಿ. ಜನರಿಗೆ ಉಪಯೋಗವಾಗುವಂತೆ ಸೌಲಭ್ಯ ದೊರಕಿಸಿ ಕೊಡಲಿ. ಹೆದ್ದಾರಿಗಳಲ್ಲಿ ಖಾಲಿ ಬಸ್ಸುಗಳನ್ನು ಓಡಿಸುವುದಕ್ಕಿಂತ ಹಳ್ಳಿಗಳಿಗೆ ಬಂದು ಜನರಿಗೆ ಸಹಕಾರ ನೀಡಲಿ.
- ಸುನಿಲ್, ಆರೂರು
'ಜಗುಲಿ'ಯಲ್ಲಿ ಈ ಸಲದ ವಿಷಯ 'ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿವೆಯೇ?'. ವಿಷಯದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಬರವಣಿಗೆ 100 ಪದಗಳ ಮಿತಿಯಲ್ಲಿರಲಿ. ಜತೆಗೆ ನಿಮ್ಮದೊಂದು ಪಾಸ್ಪೋರ್ಟ್ ಅಳತೆಯ ಭಾವಚಿತ್ರ ಇರಲಿ. ಕೈ ಬರಹದಲ್ಲಿ ಕಳಿಸುವುದಿದ್ದರೆ ಬರಹ ಸ್ಪಷ್ಟವಾಗಿರಲಿ. ಇ-ಮೇಲ್ ಮೂಲಕ ಕಳಿಸುವವರು ನುಡಿಯಲ್ಲಿ ಟೈಪ್ ಮಾಡಿರಬೇಕು. ನಮ್ಮ ವಿಳಾಸ: ಬೈಟು ಕಾಫಿ (ಅನೇಕ ವಿಭಾಗ), ಕನ್ನಡಪ್ರಭ, ನಂ.1, ಎಕ್ಸ್ಪ್ರೆಸ್ ಕಟ್ಟಡ, ಕ್ವೀನ್ಸ್ ರಸ್ತೆ, ಬೆಂಗಳೂರು- 560001, ಇ-ಮೇಲ್: anekaby2@gmail.com