ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಮಾನವಧರ್ಮ ಧರಿಸಿನಿಂತ ರಾಮಕೃಷ್ಣ ಮಿಷನ್!

Mainashree
Updated On : 23 Dec 2013, 6:04 am

ಸ್ವಾಮೀಜಿಯು 'ಸರಿಯಾದ ಸಂಘಟನೆಯಿಲ್ಲದೆ ನಾವು ಯಾವುದೇ ಘನವಾದ ಹಾಗೂ ಶಾಶ್ವತವಾದ ಕಾರ್ಯವನ್ನು ಸಾಧಿಸಲಾರೆವು. ಆದ್ದರಿಂದ ನಾವು ನಮ್ಮ ಗುರುಗಳ ಹೆಸರಲ್ಲಿ ಸಂಘ ನಿರ್ಮಿಸೋಣ. ಅದಕ್ಕೆ 'ರಾಮಕೃಷ್ಣ ಮಿಷನ್‌' ಎಂಬ ಹೆಸರಿರಲಿ. ನಾನು ಆ ಪ್ರಭುವಿನ ಸೇವಕರು ಮಾತ್ರ. ಈ ಉದ್ದೇಶದತ್ತ ನಿಮ್ಮೆಲ್ಲರ ನಲ್ಮೆಯ ಸಹಕಾರ ಹರಿದುಬರಲಿ' ಎಂದರು. ಈ ಸಭೆಯ ನಿರ್ಣಯದಂತೆ 1897ರ ಮೇ 1ರಂದು ರಾಮಕೃಷ್ಣ ಮಿಷನ್ ಜನ್ಮತಾಳಿತು. ನಂತರ ಅನೇಕ ಸಭೆಗಳಲ್ಲಿ ಸ್ವಾಮೀಜಿ ಸಂಘದ ಉದ್ದೇಶಗಳು, ಕರ್ತವ್ಯಗಳು, ಕಾರ್ಯವಿಧಾನಗಳನ್ನು ರೂಪಿಸಿದರು. ಹೀಗೆ ಸ್ವಾಮೀಜಿಯ ಅವಿರತ ಪರಿಶ್ರಮದಿಂದ ಸಂಸ್ಥೆಯು ಮೊದಲ ಹಂತದಲ್ಲಿ ಸ್ಪಷ್ಟರೂಪ ತಾಳಿತು. ರಾಮಕೃಷ್ಣ ಮಿಷನ್ ಸ್ಥಾಪನೆಯ ಮೂಲಕ ತ್ಯಾಗ ಮತ್ತು ಸೇವೆ ಎಂಬ ಅವಳಿ ಆದರ್ಶಗಳಿಗೆ ಒಂದು ಮೂರ್ತಸ್ವರೂಪವನ್ನು ಕೊಟ್ಟ ಸಾಧನೆ ಸ್ವಾಮಿ ವಿವೇಕಾನಂದರದು!
ಸರ್ವಧರ್ಮಗಳ ಸಾರವನ್ನು ಮೈಗೂಡಿಸಿಕೊಂಡು ಮಾನವ ಸೇವೆಗಾಗಿ ಸಂಸ್ಥೆಯೊಂದು ಜನ್ಮತಾಳಿದ್ದು ಇದೇ ಮೊದಲು. ಸುಧಾರಣೆಗಿಂತ ಬದಲಾವಣೆಯಲ್ಲಿ ಹೆಚ್ಚು ಭರವಸೆ ಹೊಂದಿದ್ದ ವಿವೇಕಾನಂದರು ಸನಾತನ ಪರಂಪರೆಯನ್ನು ಭಾರತದಲ್ಲಿ ಈ ಸಂಸ್ಥೆಯ ಮೂಲಕ ಮತ್ತೆ ಪುನರುಜ್ಜೀವನಗೊಳಿಸಲು ಪಣತೊಟ್ಟರು. ಜಾತಿ, ಧರ್ಮ, ಮತ, ಪಂಥ, ಲಿಂಗಗಳ ಭೇದವಿಲ್ಲದೆ ಮಾನವಜೀವನ ಮತ್ತು ದೇಶನಿರ್ಮಾಣಕ್ಕಾಗಿ ಸಂಸ್ಥೆ ಕಟ್ಟಿ ಸೇವಕ ಕಟ್ಟಾಳುಗಳನ್ನು ಸಂಘಟಿಸಿದ ಮೊದಲ ವಿಶ್ವಮಾನವರಾಗಿ ನಿಲ್ಲುವವರು ಸ್ವಾಮಿ ವಿವೇಕಾನಂದರು!

- ಆನಂದ ಎಸ್.ಎನ್.
anandsn193@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement