ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ನಿಂದೆ, ಅಡಚಣೆ ಅನಂತರ ಸ್ವೀಕಾರ!

Mainashree
Updated On : 24 Dec 2013, 6:23 am

'ಪ್ರತಿಯೊಂದು ಕೆಲಸವೂ ಈ ಮೂರು ಅವಸ್ಥೆಗಳ ಮೂಲಕ ಸಾಗಿ ಹೋಗಬೇಕು- ನಿಂದೆ, ಅಡಚಣೆ, ಅನಂತರ ಸ್ವೀಕಾರ. ಯಾವ ಮನುಷ್ಯನು ತನ್ನ ಕಾಲಕ್ಕಿಂತ ಬಹಳ ಮುಂದಾದ ಭಾವನೆಗಳನ್ನು ಹೊಂದಿರುವನೋ ಅವನನ್ನು ಅಪಾರ್ಥ ಮಾಡಿಕೊಳ್ಳುವುದರಲ್ಲಿ ಸಂದೇಹವೇ ಇಲ್ಲ. ಆದ್ದರಿಂದ ವಿರೋಧ ಮತ್ತು ಕಿರುಕುಳಗಳನ್ನು ಸ್ವಾಗತಿಸಿ. ತಮ್ಮ ಕೆಲಸದಲ್ಲಿ ಪರಿಶುದ್ಧರಾಗಿ, ತೀವ್ರವಾದ ಶ್ರದ್ಧೆ ಹೊಂದಿ. ಹಿತವಾದ ಸಾಮಾಜಿಕ ಬದಲಾವಣೆಗಳೆಲ್ಲ ನಮ್ಮ ಆಂತರ್ಯದಲ್ಲಿ ಕೆಲಸ ಮಾಡುತ್ತಿರುವ ಆಧ್ಯಾತ್ಮಿಕ ಪ್ರವೃತ್ತಿಗಳ ಅಭಿವ್ಯಕ್ತಿಯೇ ಆಗಿವೆ. ಅವು ಬಲಶಾಲಿಯಾಗಿದ್ದರೆ, ಹೊಂದಿಕೊಂಡಿದ್ದರೆ, ಸಮಾಜ ಅದಕ್ಕೆ ಸರಿಯಾಗಿ ಅಣಿ ಯಾಗುವುದು, ಸ್ವೀಕರಿಸುವುದು.' ಎಂದು ಸ್ವಾಮೀಜಿ ಭಕ್ತರಿಗೆ ತಿಳಿಹೇಳಿದರು.
ಒಮ್ಮೆ ಯೋಗಾನಂದರು ಸ್ವಾಮೀಜಿಗೆ 'ನೀನು ಇದನ್ನೆಲ್ಲ ನಿನ್ನ ಪಾಶ್ಚಾತ್ಯ ರೀತಿ ನೀತಿಗೆ ಅನುಸಾರವಾಗಿ ಮಾಡುತ್ತಿದ್ದೀಯೆ. ಇದನ್ನೆಲ್ಲ ಹೀಗೇ ಮಾಡಬೇಕೆಂದು ಶ್ರೀರಾಮಕೃಷ್ಣರು ಹೇಳಿಹೋಗಿದ್ದಾರೆಯೇ?' ಎಂದು ಕೇಳಿದರು. ಆಗ ಸ್ವಾಮೀಜಿ 'ರಾಮಕೃಷ್ಣರು ಅನಂತ ಭಾವಗಳ ಸಾಕಾರಮೂರ್ತಿ. ನೀವು ಅವರನ್ನು ನಿನ್ನ ಪರಿಮಿತಿಯೊಳಗೆ ಬಂಧಿಸಿಡುವ ಪ್ರಯತ್ನ ಮಾಡುತ್ತಿರುವೆ! ನಾನು ಆ ಎಲ್ಲ ಪರಿಮಿತಿಗಳನ್ನು ಹರಿದೊಗೆದು ಅವರ ದಿವ್ಯ ಭಾವನೆಗಳನ್ನು ಜಗತ್ತಿನಾದ್ಯಂತ ಪ್ರಸಾರಗೈಯುವವನಿದ್ದೇನೆ. ಹೀಗೇ ಮಾಡಬೇಕು ಅಂತ ಅವರೇನೂ ನನಗೆ ಹೇಳಲಿಲ್ಲ. ಆದರೆ ಅವರ ದಿವ್ಯ ಸಂದೇಶಗಳನ್ನು ಇಡೀ ಜಗತ್ತಿಗೆ ಕೊಡಬೇಕಾದ್ದು ನಮ್ಮ ಧರ್ಮ. ಅನಂತ ಬಗೆಗಳಲ್ಲಿ ವ್ಯಕ್ತವಾಗಬಲ್ಲ ಆಧ್ಯಾತ್ಮಿಕ ಭಾವಗಳ ಸಾಕಾರಮೂರ್ತಿ ಅವರು. ಅವರ ಒಂದೇ ಒಂದು ಕೃಪಾಕಟಾಕ್ಷವು ಈ ಕ್ಷಣದಲ್ಲಿ ಸಹಸ್ರಾರು ವಿವೇಕಾನಂದರನ್ನು ಸೃಷ್ಟಿಸಬಲ್ಲದು'ಎಂದರು.

- ಆನಂದ .ಎಸ್.ಎನ್.
anandsn193@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement