ಭರತನಾಟ್ಯ ರಂಗಪ್ರವೇಶ
ಭಾವನಾ ವೆಂಕಟೇಶ್ವರ ಅವರ ಭರತನಾಟ್ಯ ರಂಗಪ್ರವೇಶವನ್ನು ಡಿಸೆಂಬರ್ 25ರಂದು ಬೆಂಗಳೂರಿನಲ್ಲಿ ಏರ್ಪಡಿಸಲಾಗಿದೆ.
ಅಂದು ನಡೆಯುವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಹಿರಿಯ ಸಂಗೀತ ತಜ್ಞೆ ಪ್ರೊ. ಮೈಸೂರು ವಿ. ಸುಬ್ರಹ್ಮಣ್ಯ, ನೂಪುರ ಭರತನಾಟ್ಯ ಶಾಲೆಯ ನಿರ್ದೇಶಕರು ಲಲಿತಾ ಶ್ರೀನಿವಾಸನ್ ಭಾಗವಹಿಸಲಿದ್ದಾರೆ.
ಭಾವನಾ ಅವರು ಕಳೆದ 10 ವರ್ಷಗಳಿಂದ ಶ್ರೀಧರ್ ಮತ್ತು ಅನುರಾಧ ಶ್ರೀಧರ್ ಅವರ ಬಳಿ ಭರತನಾಟ್ಯ ಅಭ್ಯಾಸಿಸುತ್ತಿದ್ದು, ಅವರ ಅಕಾಡೆಮಿಯ ಎಲ್ಲ ಕಾರ್ಯಕ್ರಮಗಳಲ್ಲೂ ಮುಖ್ಯ ಪಾತ್ರ ವಹಿಸಿ ಕಲಾರಸಿಕರ ಪ್ರಶಂಸೆ ಗಳಿಸಿದ್ದಾರೆ.
ಸ್ಥಳ: ಜೆ.ಎಸ್.ಎಸ್. ಸಭಾಂಗಣ, ಜಯನಗರ 8ನೇ ಬ್ಲಾಕ್, ಬೆಂಗಳೂರು.
ದಿನಾಂಕ: 25-12-13
ಸಮಯ: ಸಂಜೆ 6.15ಕ್ಕೆ ವಿವರಗಳಿಗೆ : 080- 26851133 ಸಂಪರ್ಕಿಸಬಹುದು.