ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಲೋಕನಿಂದೆಗೆ ಸಮಾಧಾನಿಯಾಗಿರಬೇಕು!

Vishwanath S
Updated On : 25 Dec 2013, 6:45 am

ಒಂದು ಮಹಾಕಾರ್ಯವನ್ನು ಹೊಸದಾಗಿ ಕೈಗೊಂಡಾಗ ಅದನ್ನು ವಿರೋಧಿಸುವವರು ಇದ್ದೇ ಇರುತ್ತಾರೆ. ಅದಕ್ಕೆ ವಿವೇಕಾನಂದರೂ ಹೊರತಾಗಿರಲಿಲ್ಲ. ಸ್ವಾಮೀಜಿಯು ಭಾರತದಲ್ಲಿ ಕೆಲ ವ್ಯಕ್ತಿಗಳ, ಪತ್ರಿಕೆಗಳ ಕಟುಟೀಕೆಗೆ, ಅ್ಯಂತ ನಿರ್ದಯವಾದ ನೀಚಬುದ್ಧಿಪ್ರೇರಿತ ನಿಂದನೆ ಗಳಿಗೆ ಒಳಗಾಗಬೇಕಾಯಿತು. ಅದರಲ್ಲಿ ಕೋಲ್ಕತಾದ ಪ್ರಮುಖನಾದವನು ವಂಗವಾಸಿ ಪತ್ರಿಕೆ ಸಂಪಾದಕ. ಈತ ಸ್ವಾಮೀಜಿಯ ಬಾಲ್ಯಸ್ನೇಹಿತ. ತಮ್ಮ ಮಧ್ಯದಲ್ಲೇ ಬೆಳೆದವ ಜಗದ್ವಿಖ್ಯಾತನಾದುದು ಆತನಿಗೆ ನುಂಗಲಾರದ ತುತ್ತಾಯಿತು. ಸ್ವಾಮೀಜಿಯ ಪ್ರತಿ ನಡೆನುಡಿಯನ್ನೂ ವಿರೋಧಿಸುವ, ಅಲ್ಲಗಳೆಯುವ ಕೆಲಸದಲ್ಲಿ ಆತ ಮುಳುಗಿದ.
ಆದರೆ ಇವೆಲ್ಲಕ್ಕಿಂತ ತುಚ್ಛವಾದ, ಅಪಮಾನಕರವಾದ ವಿಷಯವನ್ನು ಪತ್ರಿಕೆ ಪ್ರಕಟಿಸಿತು. 'ವಿವೇಕಾನಂದರ ಪ್ರವೇಶ ದಿಂದಾಗಿ ಅಪವಿತ್ರಗೊಂಡಿದ್ದ ಕಾಳಿ ವಿಗ್ರಹವನ್ನು ಪುನಃ ಅಭಿಷೇಕ ಮಾಡಿ ತೊಳೆದು ಪರಿಶುದ್ಧಗೊಳಿಸಲಾಯಿತು.'
ಇಂತಹ ಅನೇಕ ವಿಚಾರಗಳಿಗೆ, ದುರಾಚಾರಗಳಿಗೆ ಸ್ವಾಮೀಜಿ ಪ್ರತಿಕ್ರಿಯೆ ಒಂದೇ, ಅದು ಸಂಪೂರ್ಣ ನಿರ್ಲಕ್ಷ್ಯ!  ನಿರ್ಲಿಪ್ತತೆ! ಅಂಥವರ ಬಗ್ಗೆ ಸ್ವಾಮೀಜಿ ನಕ್ಕು ಸುಮ್ಮನಾಗುತ್ತಿದ್ದರು. ಶ್ರೀರಾಮಕೃಷ್ಣರು ತಮ್ಮನ್ನು ಸಮಗ್ರ ಭಾರತದ ಹಾಗೂ ವಿಶಾಲ ವಿಶ್ವದ ಹಿತಸಾಧನೆಯ ಸತ್ಪಥದಲ್ಲಿ ನಡೆಸಿದರೆ, ಇಲ್ಲವೆ? ಎಂಬುದನ್ನು ನಿಶ್ಚಯಿಸುವ ಹೊಣೆ ಮುಂದಿನ ಪೀಳಿಗೆಗೆ ಸೇರಿದ್ದು! ಸ್ವಾಮೀಜಿಯ ನಿಲುವಿನಂತೆ ಅವರ ಜೀವಿತಾವಧಿಯಲ್ಲೇ ಈ ವಿರೋಧವೆಲ್ಲ ನಿರ್ನಾಮವಾಯಿತು. ವಿಚಿತ್ರವೆಂದರೆ ಸ್ವಾಮೀಜಿಯ ನಿಧನದ ಕಾಲಕ್ಕೆ ವಂಗವಾಸಿ ಪತ್ರಿಕೆ ಸಂಪಾದಕ ಬದಲಾಗಿದ್ದ. ಪ್ರವಾಹಿನಿ ಎಂಬ ಪತ್ರಿಕೆಯಲ್ಲಿ ವಿವೇಕಾನಂದರ ಬಗ್ಗೆ ಬರೆದ ಸ್ಮೃತಿಚಿತ್ರಣವು ಬಂಗಾಳೀ ಸಾಹಿತ್ಯದಲ್ಲೇ ಅದ್ವಿತೀಯವಾದುದು.

- ಆನಂದ ಎಸ್.ಎನ್.
anandsn193@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement