ವಾಟೆಕಾಯಿ
ವಾಟೆಕಾಯಿ ಮೊರೇಸಿ ಕುಟುಂಬಕ್ಕೆ ಸೇರಿದ್ದು. ಇದರ ವೈಜ್ಞಾನಿಕ ಹೆಸರು ಆರ್ಟೊಕಾರ್ಪಸ್ ಲಾಕೂಚಾ. ಭಾರತ, ನೇಪಾಳ, ಮಲೇಷಿಯಾ, ಥಾಯ್ಲೆಂಡ್ಗಳಲ್ಲೂ ಬೆಳೆಯುತ್ತದೆ.
ಉಷ್ಣವಲಯದ ನಿತ್ಯಹರಿದ್ವರ್ಣದ ವಾಟೆಮರ ತೇಗದ ಮರದಂತೆ ಅತ್ಯಂತ ಗಟ್ಟಿಯಾದುದು. ಹಾಗಾಗಿ ಇದನ್ನು ಪೀಠೋಪಕರಣಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ.
ಉಷ್ಣವಲಯದ ನಿತ್ಯಹರಿದ್ವರ್ಣದ ವಾಟೆಮರ ತೇಗದ ಮರದಂತೆ ಅತ್ಯಂತ ಗಟ್ಟಿಯಾದುದು. ಹಾಗಾಗಿ ಇದನ್ನು ಪೀಠೋಪಕರಣಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ.
ವಾಟೆಕಾಯಿಯನ್ನು ಒಣಗಿಸಿ (ಹುಳಿಪುಡಿ) ಪುಡಿಮಾಡಿಟ್ಟುಕೊಂಡು ಅಡುಗೆಯಲ್ಲಿ ಬಳಸುತ್ತಾರೆ. ಹುಳಿರುಚಿ ಇರುವುದರಿಂದ ಹುಣಸೆಹಣ್ಣಿಗೆ ಬದಲಾಗಿ ಉಪಯೋಗಿಸುತ್ತಾರೆ.
ಸಮೃದ್ಧವಾಗಿ ಬೆಳೆದ ಒಂದು ವಾಟೆಮರದಿಂದ ಸುಮಾರು 3-4 ಕ್ವಿಂಟಲ್ ಕಾಯಿ ಪಡೆಯಬಹುದು. ಹಾಗಾಗಿ ಮನೆಗೆ ಒಂದು ಮರವಿದ್ದರೆ ಸಾಕು, ಬೇಕಾದಷ್ಟು ವಾಟೆಹುಳಿ ಪಡೆದುಕೊಳ್ಳಬಹುದು.
ಹಸಿರುಬಣ್ಣದಲ್ಲಿರುವ ಕಾಯಿ, ಹಣ್ಣಾದಾಗ ತಿಳಿಹಳದಿ ಬಣ್ಣಕ್ಕೆ ತಿರುಗುತ್ತದೆ. 25-30 ಕಾಯಿಗಳಿಂದ ವರ್ಷವಿಡೀ ಅಡುಗೆಗೆ ಸಾಕಾಗುವಷ್ಟು ಪುಡಿ ತಯಾರಿಸಬಹುದು.
ವಾಟೆ ಮರ ಸಾಮಾನ್ಯವಾಗಿ 100-150 ಅಡಿ ಎತ್ತರಕ್ಕೆ ಬೆಳೆಯುವ ಮರ. ಸಾಮಾನ್ಯವಾಗಿ ಡಿಸೆಂಬರ್-ಜನವರಿಯಲ್ಲಿ ಕಾಯಿ ಕೊಯ್ಲಿಗೆ ಬರುತ್ತದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.