ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಕೃತಿಗಳ ಬಿಡುಗಡೆ

Vishwanath S
Updated On : 27 Dec 2013, 7:12 am

ಲೇಖಕ ಡಾ. ನಾ.ದಾಮೋದರ ಶೆಟ್ಟಿ ಅನುವಾದಿಸಿರುವ (ಮೂಲ: ತುಳು, ರಚನೆ: ಡಾ. ಡಿ.ಕೆ. ಚೌಟ) 'ಮೂರು ಹೆಜ್ಜೆ ಮೂರು ಲೋಕ' ನಾಟಕ ಕೃತಿ ಹಾಗೂ ಪತ್ರಕರ್ತ ಲಕ್ಷ್ಮಣ ಕೊಡಸೆ ಅವರ 'ಕಾಮಾಕ್ಷಿ ಸಂಸಾರ ನೌಕೆ' ಕಾದಂಬರಿ ಡಿ.28 ರಂದು ಬಿಡುಗಡೆಗೊಳ್ಳಲಿವೆ.
ಕನ್ನಡ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರೊ. ಕೆ. ಮರುಳಸಿದ್ದಪ್ಪ ಕೃತಿಗಳನ್ನು ಲೋಕಾರ್ಪಣೆಗೊಳಿಸುವರು. ಸಮಾರಂಭದ ಅಧ್ಯಕ್ಷತೆಯನ್ನು ಪ್ರೊ. ಎಸ್.ಜಿ. ಸಿದ್ದರಾಮಯ್ಯ ವಹಿಸುವರು. ಹಿರಿಯ ಪತ್ರಕರ್ತ ಜಿ.ಎನ್. ಮೋಹನ್ ಹಾಗೂ ಡಾ. ಕೆ. ರಾಜೇಶ್ವರಿ ಉಪಸ್ಥಿತ ರಿದ್ದರು. ಬೆಂಗಳೂರಿನ ಸಿರಿವರ ಪ್ರಕಾಶನ ಈ ಕೃತಿಗಳನ್ನು ಹೊರತರುತ್ತಿದೆ.
ಸ್ಥಳ: 'ಚಾವಡಿ' (ಕರ್ನಾಟಕ ನಾಟಕ ಆಕಾಡೆಮಿ) ಕನ್ನಡ ಭವನ, ಬೆಂಗಳೂರು. ದಿನಾಂಕ: 28ನೇ ಡಿಸೆಂಬರ್, ಸಮಯ: ಸಂಜೆ 6ಕ್ಕೆ. ಮಾಸದ ಸಿನಿಮ
ಕಲಾನಿಕೇತಲ ಟ್ರಸ್ಟ್ ಆಯೋ ಜಿಸಿರುವ'ಮಾಸದ ಸಿನಿಮ' ಕಾರ್ಯಕ್ರದಡಿಯಲ್ಲಿ ಡಿ.28 ರಂದು ಡಾ. ಯು.ಆರ್. ಅನಂತಮೂರ್ತಿ ಅವರ ಕಥೆಯನ್ನಾಧರಿ ಸಿದ ಚಲನಚಿತ್ರ 'ಮೌನಿ' ಪ್ರದರ್ಶನಗೊಳ್ಳಲಿದೆ. ಸ್ಥಳ: 'ಕಲಾದೇಗುಲ' 'ಶ್ರೀಕೃಷ್ಣ ದೇಗುಲ' 3ನೇ ಬಿ ಮುಖ್ಯ ರಸ್ತೆ, 2ನೇ ಹಂತ, ವಿಜಯನಗರ, ಬೆಂಗಳೂರು. ಸಂಜೆ 6.30ಕ್ಕೆ ಪ್ರವೇಶ ಉಚಿತ. ವಿವರಗಳಿಗೆ: 080-23300670.

ವಿನೋದೋತ್ಸವ
ಬೆಂಗಳೂರಿನ ಕಲಾನಿಕೇತಲ ಟ್ರಸ್ಟ್  ಪ್ರತಿ ವರ್ಷ ಜನವರಿ ತಿಂಗಳಿನಲ್ಲಿ  ವಿನೋದೋತ್ಸವ ಹಮ್ಮಿಕೊಂಡಿದ್ದು, ಆ ಸಂದರ್ಭದಲ್ಲಿ ಗಾಲಿ ಕುರ್ಚಿ, ಹೊಲಿಗೆ ಯಂತ್ರ, ಶ್ರವಣ ಯಂತ್ರ ನೀಡಲಾಗುತ್ತದೆ.  ಇದಕ್ಕಾಗಿ ನಿಧಿ ಸಂಗ್ರಹಿಸಲು  ಬೆಂಗಳೂರಿನ 'ಅಂತರಂಗ' ಹವ್ಯಾಸಿ ರಂಗತಂಡದವರು ಅಭಿನಯಿಸುವ 'ಉತ್ತರ ಭೂಪ ಬೀಚಿ' ಎಂಬ ಹಾಸ್ಯ ನಾಟಕವನ್ನು  ಡಿ. 29ರಂದು ಭಾನುವಾರ ಹಮ್ಮಿಕೊಂಡಿದೆ. ಸ್ಥಳ: ಹೆಚ್. ಎನ್. ಕಲಾಕ್ಷೇತ್ರ, ಜಯನಗರ, ಬೆಂಗಳೂರು. ಸಂಜೆ: 7 ಗಂಟೆಗೆ. ವಿವರಗಳಿಗೆ- ದೂ:080- 23300670 ಸಂಪರ್ಕಿಸಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement