ಪೇರಳೆಹಣ್ಣು
ರಾಜ್ಯದ ಹೆಚ್ಚಿನೆಲ್ಲಾ ಪ್ರದೇಶಗಳಲ್ಲಿ ಆರಾಮವಾಗಿ ಬೆಳೆಸಬಹುದಾದಂತಹ ಲಾಭದಾಯಕ ತೋಟಗಾರಿಕಾ ಹಣ್ಣಿನ ಬೆಳೆಗಳಲ್ಲಿ ಪೇರಳೆಯೂ ಒಂದು. ಸಾಮಾನ್ಯವಾಗಿ ಎಲ್ಲೆಡೆಯೂ ಬೆಳೆಯಲಾಗುತ್ತದೆ.
- ಪೇರಳೆ ಮೂಲತಃ ಅಮೆರಿಕದ ಉಷ್ಣವಲಯದ ಬೆಳೆ. ತಿನ್ನಲು ಹಾಗೂ ಸಂಸ್ಕರಿತ ಉತ್ಪನ್ನ ತಯಾರಿಸಲು ಇದು ಬಳಕೆಯಾಗುತ್ತದೆ. ಇದರ ಆರೋಗ್ಯಕರ ಗುಣ ಅಗಣಿತ.
- ಭಾರತದಲ್ಲಿ ಪೇರಳೆಹಣ್ಣನ್ನು ನಾಲ್ಕನೇ ಅತಿ ದೊಡ್ಡ ಹಣ್ಣಿನ ಬೆಳೆಯಾಗಿ ಗುರುತಿಸಲಾಗಿದೆ. ಕರ್ನಾಟಕವೂ ಸೇರಿದಂತೆ ದೇಶದ ಏಳಕ್ಕೂ ಹೆಚ್ಚಿನ ರಾಜ್ಯಗಳಲ್ಲಿ ಪೇರಳೆಯನ್ನು ವಿಸ್ತೃತವಾಗಿಬೆಳೆಯಲಾಗುತ್ತದೆ.
- ಬಿಹಾರವು ಪೇರಳೆ ಬೆಳೆಯುವ ಅತಿದೊಡ್ಡ ರಾಜ್ಯವಾದರೆ, ಉತ್ತರಾಂಚಲದಲ್ಲಿ ಅತ್ಯಧಿಕ ಇಳುವರಿ ಪಡೆಯಲಾಗುತ್ತಿದೆ. ಆದರೆ, ಉತ್ತಮ ಗುಣಮಟ್ಟದ ಪೇರಳೆಹಣ್ಣು ಪಟ್ಟ ಕರ್ನಾಟಕದ್ದು.
- ಒಂದು ಪೇರಳೆ ಗಿಡದಿಂದ ಒಂದು ಬಾರಿಗೆ 25 ಕಿಲೋಗಳಿಗೂ ಹೆಚ್ಚಿನ ಇಳುವರಿಯನ್ನು ಅತಿ ಕಡಿಮೆ ಖರ್ಚಿನಲ್ಲಿ ಪಡೆಯಬಹುದು.
- ಸುಮಾರು 3 ಮೀಟರ್ನಿಂದ 10 ಮೀಟರ್ ಎತ್ತರಕ್ಕೆ ಬೆಳೆಯುವ ಪೇರಳೆಮರದ ಕಾಂಡ 120 ಸೆಂ.ಮೀ.ನಿಂದ 360 ಸೆಂ.ಮೀ. ಸುತ್ತಳತೆ ಹೊಂದಿರುತ್ತದೆ.
- ಸದ್ಯ ದೇಶದಲ್ಲಿ 17,000 ಟನ್ಗೂ ಅಧಿಕ ಪೇರಳೆಹಣ್ಣಿನ ಉತ್ಪಾದನೆಯಾಗುತ್ತಿದೆ. ಪೇರಳೆಯಲ್ಲಿ 150ಕ್ಕೂ ಅಧಿಕ ತಳಿಗಳನ್ನು ಗುರುತಿಸಲಾಗಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.