ಸಂಕ್ಷಿಪ್ತ ಕ್ಯಾಲೆಂಡರ್
ಹೊಸ ವರ್ಷ ಆಗಮಿಸುತ್ತಿದ್ದಂತೆ ಪೇಟೆಯಲ್ಲಿ ಕ್ಯಾಲೆಂಡರ್, ಡೈರಿಗಳದ್ದೇ ಕಾರುಬಾರು. ವರ್ಷದ ಸಂಪೂರ್ಣ ವಿವರಗಳನ್ನು ನೀಡುವ ಕ್ಯಾಲೆಂಡರ್ ಹಲವು ರೀತಿಯಲ್ಲಿ ದೊರೆಯುತ್ತವೆ.
ಬಹುತೇಕ ಎಲ್ಲ ಮಾಹಿತಿಯೂ ಕ್ಯಾಲೆಂಡರ್ ಗಳಲ್ಲಿ ಲಭ್ಯವಿರುತ್ತದೆ. ಕೆಲವು ಕ್ಯಾಲೆಂಡರ್ಗಳಲ್ಲಿ ಒಂದೇ ಪುಟದಲ್ಲಿ 12 ತಿಂಗಳ ವಿವರವಿದ್ದರೆ, ಇನ್ನೂ ಕೆಲವು ಕ್ಯಾಲೆಂಡರ್ಗಳಲ್ಲಿ ಪ್ರತಿಯೊಂದು ತಿಂಗಳಿಗೆ ಒಂದೊಂದು ಪುಟದಂತೆ 12 ಪುಟ ಅಥವಾ 6 ಪುಟಗಳಲ್ಲಿ ತಿಂಗಳು, ವಾರ, ದಿನಾಂಕಗಳಲ್ಲಿ ನಮೂದಿಸಿರಲಾಗುತ್ತದೆ.
ಆದರೆ, ಇಲ್ಲೊಂದು ಕ್ಯಾಲೆಂಡರ್ ಇದೆ. ಇದರಲ್ಲಿ ಒಂದೇ ಪುಟ್ಟ ಪಟ್ಟಿಯಲ್ಲಿ ವರ್ಷದ 12 ತಿಂಗಳುಗಳ ಸಂಪೂರ್ಣ ವಾರ, ದಿನಾಂಕವನ್ನು ನೀಡಲಾಗಿದೆ. ಬೆಂಗಳೂರು ಪಿಯು ಮಂಡಳಿಯ ಮಾಜಿ ಉಪ ನಿರ್ದೇಶಕ ಹಾಗೂ ಕರ್ನಾಟಕ ಭಾಷಾ ಸಮಿತಿಯ ಸದಸ್ಯರಾಗಿರುವ ಎಂ.ವೈ. ದೊಡ್ಡಮನಿ ವಿಶಿಷ್ಟತೆಯಿಂದ ಕೂಡಿರುವ ಪುಟ್ಟ ಕ್ಯಾಲೆಂಡರ್ಅನ್ನು ತಯಾರಿಸಿದ್ದಾರೆ.
ಕಳೆದ 30 ವರ್ಷಗಳಿಂದ ಸಂಕ್ಷಿಪ್ತ ಕ್ಯಾಲೆಂಡರ್ ತಯಾರಿಸುತ್ತಿದ್ದು, ಕಳೆದ ಮೂರು ವರ್ಷಗಳಿಂದ ಪುಟ್ಟ ಕ್ಯಾಲೆಂಡರ್ ತಯಾರಿಕೆಯಲ್ಲಿ ತೊಡಗಿದ್ದಾರೆ. ಈ ಕ್ಯಾಲೆಂಡರ್ ಸರ್ಕಾರಿ ಡೈರಿಗಳಲ್ಲಿ ಮುದ್ರಿತವಾಗಿರುತ್ತದೆ.