ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಸತಿಯಲ್ಲಿ ಪತಿಭಾವ

Vishwanath S
Updated On : 27 Dec 2013, 7:13 am

ರತಿಕೇಳಿಯ ಸಮಯ ಎಂಬುದು ನಮ್ಮನಮ್ಮ ಮೈ ಹಾಗೂ ಮನಸ್ಸುಗಳೆರಡನ್ನೂ ಮರೆಯುವ ಕಾಲ. ಹಾಗೆ ಮರೆಯದಿದ್ದರೆ ಅದು ನಿಜವಾದ ಮಿಲನ ಆಗಿರಲು ಸಾಧ್ಯವೇ ಇಲ್ಲ. ಅಲ್ಲಿ ಸಂಗಾತಿಯ ದೇಹ ಬೇರೆ, ನಾನು ಬೇರೆ ಎಂಬ ಭಾವವೂ ಸುಳಿಯದು. ನಾನೇ ಅವನು/ಳು ಎಂಬ ಭಾವ ಒಡಮೂಡಿದಾಗಲೇ ಹೊಕ್ಕು ಬೆರೆತ ಜೀವಗಳಿಗೆ ಪರಮತೃಪ್ತಿ. ಆದಾಗ್ಯೂ, ಅಂಥ ಸನ್ನಿವೇಶವೂ ಮುಜುಗರಕ್ಕೆ ಕಾರಣವಾಗುವುದುಂಟು.

ಸೈವಾಹಂ ಪ್ರಮದಾ ನೈಣಾಮಧಿಗತಾವೇತೌ ಚ ತೌ ನೂಪುರಾ
ವೇಷಾಸ್ಮಾಕಮವೃತ್ತಿರೇವ ಸಹಜವ್ರೀಡಾಧನಃ ಸ್ತ್ರೀಜನಃ
ಇತ್ಥಂ ಲಜ್ಜಿತಯಾ ಸ್ಮ ೃತೇರುಪಗಮೇ ಮತ್ವಾತನುಂ ಸಂಭ್ರಮಾ
ತ್ವುಂಭಾವಃ ಪ್ರಥಮಂ ರತಿವ್ಯತಿಕರೇ ಮುಕ್ತಸ್ತತೋವಲ್ಲಭಃ


ನಲ್ಲೆಯೊಬ್ಬಳು ತನ್ನ ಸಖಿಗೆ ಹೇಳುತ್ತಿದ್ದಾಳೆ: ರತಿಸುಖದ ಉತ್ಕಟಾವಸ್ಥೆಯಲ್ಲಿ ಅದು ಹೇಗೋ ನನಗರಿವಿಲ್ಲದೆ ನಾನು ನಲ್ಲನ ಮೇಲೆ ಏರಿಬಿಟ್ಟೆ! ಅಥವಾ ನಲ್ಲನೇ ಅದಕ್ಕೆ ಆಸ್ಪದ ನೀಡಿದನೋ! ಏನಾದರಿರಲಿ, ಅದರ ಪರಿಣಾಮವೇನಾಯಿತೆಂದು ಕೇಳು. ಆತನ ದೇಹದ ಮೇಲೆ ನಾನು ಲಯಬದ್ಧವಾಗಿ ಚಲಿಸುತ್ತಿರಲು, ನನ್ನ ಕಾಲಿನ ಗೆಜ್ಜೆಗಳು ಘಲ್ ಘಲ್ ಎಂದು ಸದ್ದು ಮಾಡತೊಡಗಿದವು. ಆ ಸದ್ದಿನಿಂದ ನನಗೆ ಸ್ವಲ್ಪ ಮೈ ತಿಳಿಯಿತು. ಅರೆ, ನನಗೆ ನಾಚಿಕೆಯೆಂಬ ಸ್ವಭಾವವೊಂದಿದೆಯಿಲ್ಲ, ಕೋಣೆಯ ಹೊರಗಿರುವ ಮನೆಯ ಇತರ ಮಂದಿ ಈ ಸದ್ದನ್ನು ಕೇಳಿಸಿಕೊಂಡರೆನಾನು ನಾಚಿಕೆ ಬಿಟ್ಟವಳೆಂದು ತಿಳಿಯಬಹುದೋ ಏನೋ ಎಂಬ ಆತಂಕ ಮೂಡಿತು. ಅದುವರೆಗೆ ನಾಚಿಕೆ ಬಿಟ್ಟು, ನಾನೇ ಗಂಡಸು ಎಂಬ ಭಾವದಲ್ಲಿದ್ದೆ. ಈಗ ಮತ್ತೆ ನಾಚಿಕೆ ಮೂಡಿ, ಪತಿಭಾವ ಬಿಟ್ಟು ಸತಿಭಾವಕ್ಕೆ ಮರಳಿದೆ!
ಹಾಳು ಗೆಜ್ಜೆ, ಅದನ್ನೊಂದು ಯಾಕೆ ತೆಗೆಯದೆ ಬಿಟ್ಟಿದ್ದಳೋ!

- ಹರಿಹರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement