ನ್ಯಾನೊಕಥೆ
ಬಾಲ್ಯದಲ್ಲಿ ಸಣ್ಣ ಸಣ್ಣ ಕಾಗದದ ಚೂರುಗಳ ಮೇಲೆ ತೋಚಿದ್ದನ್ನು ಗೀಚುತಿದ್ದವನು ಈಗ ಹೆಸರಾಂತ ಚಿತ್ರ ಸಾಹಿತಿ.
ಗಂಡನಿಗೆ ಹೊಡೆಯುತ್ತಿದ್ದ ಹೆಂಡತಿ, ಗಂಡನ ಮಾನ ಉಳಿಸುವ ಸಲುವಾಗಿ, ಸ್ವತಃ ತಾನೆ ಅಳುತ್ತಿದ್ದಳು.
ಚಿಂದಿ ಉಟ್ಟ ಪ್ರೇಯಸಿಯನ್ನು ದೂರ ತಳ್ಳಿದ ಪ್ರೇಮಿ, ತುಂಡುಡುಗೆ ಹುಡುಗಿಯ ಹಿಂದೆ ನಾಯಿಯಂತೆ ಅಲೆಯುತ್ತಿದ್ದಾನೆ ಪ್ರೀತಿಗಾಗಿ.
'ನಿಮ್ಮ ಅದ್ಭುತ ನಟನೆಯ ಹಿಂದಿರುವ ಶಕ್ತಿ ಯಾರು?' ಎಂಬ ಪತ್ರಕರ್ತನ ಪ್ರಶ್ನೆಗೆ, 'ಕನ್ನಡಿ' ಎಂದು ಉತ್ತರಿಸಿದನು ಪ್ರಸಿದ್ಧ ನಟ.
ಕಾರಿನ ಮೇಲೆ ಗೀಚಿದ ಮಗುವನ್ನು ತಳಿಸಿದ ಅಪ್ಪನಿಗೆ, ಗೀಚಿದ್ದು 'ಅಪ್ಪ ನಾನು ನಿನ್ನ ಪ್ರೀತಿಸುವೆ' ಎನ್ನುವ ಸಾಲು ಎಂದು ಕಾಣಿಸಲಿಲ್ಲ.
ರವಿಯ ಅಗಲಿಕೆಯ ವಿರಹ ತಾಪದಿಂದ ನರಳುತಿದ್ದ ವಸುಂಧರೆಯ ಕಂಡ ಮಳೆರಾಯ ಕಣ್ಣೀರು ಸುರಿಸಿದ.
ಆಧುನಿಕ ತಂತ್ರಜ್ಞಾನದಿಂದ ಕೂಡಿದ ಆಟಿಕೆಗಳ ಆಯ್ಕೆಯಲ್ಲಿ ಮುಳುಗಿದ್ದ ಮಗನ ಕಂಡ ಅಪ್ಪನಿಗೆ, ಯಾರೋ ಬಿಸಾಡಿದ ತ್ಯಾಜ್ಯಗಳನ್ನು ತಂದು ತನಗೆ ಬೇಕಾದ ಆಟಿಕೆಗಳನ್ನು ತಯಾರಿಸಿಕೊಳ್ಳುತ್ತಿದ್ದು ನೆನಪಾಯಿತು.
- ಗಂಗಾಚಾರಿ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.