ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಮನೆಯಲ್ಲಿರಲಿ ಪುಟ್ಟ ಸಿಸಿಟಿವಿ

Vishwanath S
Updated On : 29 Dec 2013, 4:09 am

ಅಪರಾಧ ನಿಯಂತ್ರಿಸುವಲ್ಲಿ ಸಾರ್ವಜನಿಕರ ಪಾತ್ರ ಬಹಳ ಪ್ರಮುಖವಾದುದು. ಅದಕ್ಕೆ ಸಾರ್ವಜನಿಕರಿಗೆ ಒಂದಷ್ಟು ಮಾಹಿತಿ ಇಲ್ಲಿದೆ.
ನೀವು ಮನೆಗೆ ಬೀಗ ಹಾಕಿಕೊಂಡು ಬೇರೆ ಊರುಗಳಿಗೆ ಹೋಗುವಾಗ, ಬೆಳಗ್ಗೆ ಕೆಲಸಕ್ಕೆ ಹೋಗಿ ರಾತ್ರಿ ತಡವಾಗಿ ಮನೆಗೆ ಬರುವುದಿದ್ದರೆ ನಿಮ್ಮ ಮನೆಯಲ್ಲಿ ನಗದು, ಚಿನ್ನಾಭರಣ ಬೆಲೆಬಾಳುವ ವಸ್ತುಗಳನ್ನು ಇಟ್ಟುಹೋಗಬೇಡಿ. ಬದಲಿಗೆ ಅವುಗಳನ್ನು ಬ್ಯಾಂಕ್ ಲಾಕರ್‌ನಲ್ಲಿ ಸುರಕ್ಷಿತವಾಗಿ ಇಡುವುದು ಒಳಿತು.
ಅನಿವಾರ್ಯ ಸಂದರ್ಭಗಳಲ್ಲಿ ಕುಟುಂಬ ಸದಸ್ಯರೆಲ್ಲರೂ ಮನೆಯಿಂದ ಹೆಚ್ಚು ದಿನಗಳ ಕಾಲ ಹೊರಗಡೆ ಹೋಗುವುದಾದರೆ ನಂಬಿಕಸ್ಥರನ್ನು ಅಥವಾ ಸಂಬಂಧಿಕರನ್ನು ಮನೆಯಲ್ಲಿ ಇರಿಸಿ ಹೋಗುವುದು ಸೂಕ್ತ.
ಇಲ್ಲವಾದಲ್ಲಿ ಭದ್ರತಾ ಸಿಬ್ಬಂದಿ ನೇಮಿಸಿಕೊಳ್ಳುವುದು, ಅಥವಾ ಅಕ್ಕಪಕ್ಕದ ಮನೆಯವರಿಗೆ ವಿಷಯ ತಿಳಿಸಿ ಹೋಗುವುದು ಅಥವಾ ಮನೆಮುಂದಿನ ಭಾಗದಲ್ಲಿ ಸಿಸಿಟಿವಿ ಅಳವಡಿಸುವುದು, ಸೈರನ್ ಅಳವಡಿಸುವ ಮೂಲಕ ಮುನ್ನೆಚ್ಚರಿಕಾ ಕ್ರಮ ವಹಿಸುವುದು ಸೂಕ್ತ.
ಪತಿ ಪತ್ನಿ ಇಬ್ಬರೂ ಕೆಲಸಕ್ಕೆ ಹೋಗುವವರಿದ್ದರೆ ಯಾವುದೇ ಕಾರಣಕ್ಕೂ ಮನೆಯ ಕಿಟಕಿಯಲ್ಲಿ, ಚಪ್ಪಲಿ ಸ್ಟ್ಯಾಂಡ್ ಕೆಳಗೆ, ಶೂ ಒಳಗೆ ಬೀಗ ಇಡುವುದು ಮಾಡಬೇಡಿ. ಎಲ್ಲರಿಗೂ ಕಾಣುವಂತೆ ಬೀಗ ಹಾಕಿ ಬೀಗವನ್ನು ಅಲ್ಲಿಯೇ ಇಟ್ಟು ಹೋಗಬೇಡಿ.
ಮನೆಯಲ್ಲಿ ಎಷ್ಟು ಮಂದಿ ಇದ್ದರೂ ಅವರೆಲ್ಲರೂ ಪ್ರತ್ಯೇಕವಾಗಿ ಒಂದೊಂದು ಬೀಗವನ್ನು ಬಳಸಿ. ಆಗ ಬೀಗವನ್ನು ಮನೆಮುಂದೆ ಅಥವಾ ಅಲ್ಲಿಲ್ಲಿ ಇಟ್ಟು ಹೋಗುವುದು ತಪ್ಪುತ್ತದೆ.


-  ಶಾಂತ ತಮ್ಮಯ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement