ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಹೀಗೊಂದು ಮೌನ

Vishwanath S
Updated On : 30 Dec 2013, 3:26 am

*    ಬುದ್ಧಿ ಬಲಿಯುತ್ತಿರುವ ಹುಡುಗನೊಬ್ಬ ವಾಹನ ಚಾಲನೆಯ ಬಗ್ಗೆ ಕುತೂಹಲಿಗನಾಗಿ ರಸ್ತೆಯ ನಿಯಮಗಳನ್ನು ಓದಿಕೊಂಡ ದಿನವೇ, ಅವನ ತಂದೆಯೇ ಒನ್‌ವೇಯಲ್ಲಿ ಚಲಿಸಿರುತ್ತಾರೆ ಮತ್ತು ನಿಲ್ಲಿಸಬಾರದೆಂದ ಬೋರ್ಡಿನ ಎದುರೇ ನಿಲ್ಲಿಸಿರುತ್ತಾರೆ.
*    ಅಮ್ಮನೊಂದಿಗೆ ಹಟ ಮಾಡಿ, ಅಪ್ಪನೊಂದಿಗೆ ಕಚೇರಿಗೆ ಹೋದ ಪುಟ್ಟನ ಎದುರೇ ಲಜ್ಜೆಗೆಟ್ಟು ಈ ಕೆಲಸಕ್ಕೆ ಇಷ್ಟೆಂದು ರೇಟು ಮಾತಾಡುವಾಗ ಪುಟ್ಟನಿಗೆ ಶಾಲೆಯಲ್ಲಿ ಕೇಳಿಸಿಕೊಂಡ ಕರ್ತವ್ಯನಿಷ್ಠೆ, ಶ್ರದ್ಧೆ ಎಂಬ ಪದಗಳು ಅರ್ಥ ಕಳೆದುಕೊಂಡು ಬಿಡುತ್ತವೆ.
*    ತರಲೆ ವಿಷಯಕ್ಕಾಗಿ ಸ್ನೇಹಿತನೊಂದಿಗೆ ಜಗಳವಾಡಿ ಮುನಿಸಿಕೊಂಡಿರುವಾಗ ಅಮ್ಮ ದಿನನಿತ್ಯ ಹೋಂವರ್ಕ್ ಮಾಡಿಸುತ್ತಾ ನೋಡುವ ಧಾರಾವಾಹಿಗಳ ನೆರಳಲ್ಲಿ ಅಮ್ಮ ಹೇಳುವ ಪ್ರೀತಿ, ಅನ್ಯೋನ್ಯತೆ, ಸ್ನೇಹ ಸಂಬಂಧ ಯಾವುದೂ ಚೆಂದವಾಗಿ ಕಾಣುವುದಿಲ್ಲ.
ಮೇಲೆ ಹೇಳಿರುವ ಸಂಗತಿಗಳಿಗೆ ನೀವು ದೃಶ್ಯ, ಚಿತ್ರಣ, ಸಂಗತಿ ಹೀಗೆ ಯಾವುದಾದರೂ ನಾಮಕರಣ ಮಾಡಬಹುದು. ಆದರೆ ನಾನು ಅದಕ್ಕೆ ವಾಸ್ತವವೆಂದು ಹೆಸರಿಡುತ್ತೇನೆ ಮತ್ತು ಅದೇ ಹೆಚ್ಚು ಸೂಕ್ತ. ನಮ್ಮ ಸಾಮಾನ್ಯ ಬದುಕಿನ ರಿಯಲ್ ಹೀರೋಗಳಂತೆ ನಾವು ನಮ್ಮಲ್ಲಿ ಕಂಡುಕೊಳ್ಳುವ, ಕಣ್ಣೆದುರಿನ ಅಪ್ಪ, ಹೆತ್ತ ಅಮ್ಮ, ಸಲಹುವ ಶಿಕ್ಷಕ, ಪಕ್ಕದ್ಮನೆ ಅಂಕಲ್, ಆಚೆಮನೆ ಅಣ್ಣಯ್ಯ, ಹಿಂದಿನ ಮನೆ ಅಜ್ಜಿ ಹೀಗೇ ಸಾಲು ಸಾಲಾಗಿ ನಮ್ಮ ಮುಂದೆ ಒಂದು ತಪ್ಪು ಉದಾಹರಣೆಗಳನ್ನು ಪೋಣಿಸುತ್ತಾ ಸಾಗುತ್ತಾರೆ. ಅವರ ನಡೆಯು ತಪ್ಪೆಂದು ಅವರಿಗೆ ತಿಳಿದಿದ್ದರೂ ಅದಕ್ಕೊಂದು ರೆಡಿಮೇಡ್ ಕಾರಣ ಕೊಟ್ಟು ವಾಸ್ತವದ ಅನಿವಾರ್ಯತೆ ಎಂದು ಅವಸರದ ನೆಪವೊಡ್ಡಿ ಮೌನ ವಹಿಸುತ್ತಾರೆ.
ಇಪ್ಪತ್ತು ವರ್ಷದಿಂದ ದಿನನಿತ್ಯ ಕುಡಿದು ತಡರಾತ್ರಿಯಲ್ಲಿ ಮನೆಗೆ ಬರುವ ತಂದೆಯು ಅದೊಂದು ದಿನ ತಡರಾತ್ರಿಯಲ್ಲಿ ಮಗ ಕುಡಿದು ಬಂದಾಗ ಗದರಿಸುವ ನೈತಿಕತೆಯ ಹಕ್ಕನ್ನು ಕಳೆದುಕೊಂಡಂತೆ, ಭ್ರಷ್ಟರಾಗಿ ಬದುಕುವ ಶೈಲಿಗೆ ಅಡಿಕ್ಟ್ ಆಗಿ ಬದುಕುತ್ತಿರುವ ನಮ್ಮಲ್ಲಿ ನಮ್ಮ ಕಿರಿಯರ ತಪ್ಪನ್ನು ಗದರಿಸುವ ನೈತಿಕತೆ ಉಳಿದುಕೊಂಡಿರುತ್ತದಾ?
ನನ್ನ ಆಲೋಚನೆಗಳಲ್ಲಿ ಬಹು ದಿನಗಳಿಂದ ನಲುಗುತ್ತಿದ್ದ ಹೀಗೊಂದು ಯೋಚನೆಯನ್ನ ನಿಮ್ಮ ಪಟಲದಲ್ಲಿ ಮೂಡಿಸುವ ಈ ಪ್ರಯತ್ನದಲ್ಲಿ ನನ್ನನ್ನು ಕಾಡುವ ಮೌನವೊಂದೇ. ನನ್ನ ಕಿರಿಯರಿಗೆ ನಾನು ಎಂಥ ಮಾದರಿಯಾಗಿ ರೂಪಿತನಾಗುತ್ತೀದ್ದೇನೆ? ಅದಕ್ಕುತ್ತರ ನನ್ನ ಕಿರಿಯರು ಹೇಳಬೇಕು ಮತ್ತು ಹೀಗೊಂದು ಮೌನ ನಿಮ್ಮನ್ನೂ ಕಾಡಬೇಕು.


- ಕೆ.ವಿಶಾಂತ್ ರಾವ್


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments