ರಿಪೇರಿ ಹೊತ್ತಲ್ಲಿ ಗಂಡಸರೂ ಇರಲಿ
ನೀವು ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದರೆ ಅಲ್ಲಿ ಕೆಲಸ ನಿರ್ವಹಿಸುವ ಪ್ರತಿಯೊಬ್ಬ ಭದ್ರತಾ ಸಿಬ್ಬಂದಿ ಮನೆಕೆಲಸಕ್ಕೆ ಬರುವ ಮಹಿಳೆಯರು, ಪೇಪರ್, ಹಾಲು ಹಾಕಲು ಬರುವವರ ಬಗ್ಗೆಯೂ ಬಹಳ ಎಚ್ಚರ ವಹಿಸಬೇಕಾಗುತ್ತದೆ.
ಮನೆಯಲ್ಲಿ ಒಬ್ಬರೇ ಇರುವಾಗ ವಿದ್ಯುತ್ ರಿಪೇರಿ, ಗ್ಯಾಸ್ ರಿಪೇರಿ, ಟೆಲಿಪೋನ್ ರಿಪೇರಿ ಮಾಡುವವರನ್ನು ಮನೆಗೆ ಕರೆಸಬೇಡಿ.
ಒಂದು ವೇಳೆ ಅಂತಹ ಕೆಲಸಗಳು ಅಗತ್ಯಬಿದ್ದಲ್ಲಿ ಅವರ ಬಗ್ಗೆ ನಿಖರವಾದ ಮಾಹಿತಿ ಪಡೆದು ನಂತರ ರಿಪೇರಿಗೆ ಕರೆತನ್ನಿ. ಆಗ ಮನೆಯಲ್ಲಿ ನಿಮ್ಮ ಇತರೆ ಕುಟುಂಬ ಸದಸ್ಯರು ಇರಲಿ. ಇಲ್ಲವಾದಲ್ಲಿ ಗಂಡಸರು ಮನೆಯಲ್ಲಿರುವ ವೇಳೆ ಬರುವಂತೆ ಸೂಚಿಸಿ.
ಸೇಲ್ಸ್‌ಮನ್‌ಗಳ ನೆಪದಲ್ಲಿ, ಚಿನ್ನಾಭರಣ ಪಾಲಿಷ್ ಮಾಡುವ ನೆಪದಲ್ಲಿ ಯಾರಾದರೂ ಬಂದರೆ ಅವರನ್ನು ಮನೆಗೆ ಸೇರಿಸಬೇಡಿ. ಅವರ ಮೇಲೆ ಅನುಮಾನ ಬಂದರೆ ಪೊಲೀಸರಿಗೆ ತಿಳಿಸಿ.
ಮನೆಯಲ್ಲಿ ಇಟ್ಟಿರುವ ಬೆಲೆಬಾಳುವ ವಸ್ತುಗಳು ನಿಮ್ಮ ಮನೆಯವರಿಗೆ ಹೊರತುಪಡಿಸಿ ಮನೆಕೆಲಸದವರಿಗೆ ಹಾಗೂ ಹೊರಗಿನವರಿಗೆ ತಿಳಿಯದಂತೆ ಎಚ್ಚರವಹಿಸಿ.
ಮನೆಗೆ ಕೆಲಸಕ್ಕೆ ಬಂದವರ ಮೇಲೆ ಒಂದು ವೇಳೆ ಅನುಮಾನ ಬಂದರೆ ತಕ್ಷಣ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ.
ಮನೆಯ ಮುಂದಿನ ರಸ್ತೆಗಳಲ್ಲಿ ವಾಹನಗಳನ್ನು ನಿಲ್ಲಿಸಬೇಡಿ. ನಿಲ್ಲಿಸಿದರೂ ಕಳವಾಗದಂತೆ ಅವುಗಳಿಗೆ ಸೂಕ್ತ ರಕ್ಷಣೆ ಕೊಡಿ. ದ್ವಿಚಕ್ರ ವಾಹನಗಳಿಗೆ ವ್ಹೀಲ್ ಲಾಕ್‌ಗಳನ್ನು ಹಾಗೂ ನಾಲ್ಕು ಚಕ್ರದ ವಾಹನಗಳಿಗೆ ಸ್ಟೇರಿಂಗ್ ಲಾಕ್‌ಗಳನ್ನು ಅಳವಡಿಸಿರಿ. ಇದರಿಂದ ವಾಹನ ಕಳವಾಗುವುದನ್ನು ತಡೆಗಟ್ಟಬಹುದು.
-ಶಾಂತ ತಮ್ಮಯ್ಯ