ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಸುಕುಮಾರಿ ನಾರಿ

Lingaraj Badiger
Updated On : 31 Dec 2013, 4:28 am

ಸುಕುಮಾರತೆ ಎಂಬುದು ಸ್ತ್ರೀಯರ ಒಂದು ಸ್ವಭಾವ. ಅದು ದೇಹಸ್ವಭಾವವೂ ಹೌದು, ಮನೋಭಾವವೂ ಹೌದು. ಪ್ರಿಯತಮೆ 'ಅಯ್ಯೋ ನನ್ನ ಕಾಲಿಗೆ ಮುಳ್ಳು ಚುಚ್ಚಿದೆ' ಎಂದರೆ, ಬಾಗಿ ಕುಳಿತು ಆಕೆಯ ಕಾಲನ್ನು ತನ್ನ ಮಡಿಲಲ್ಲಿಟ್ಟು ಮುಳ್ಳು ತೆಗೆಯಲು ಪ್ರಿಯಕರ ಸದಾ ಸಿದ್ಧನಿರಬೇಕಾಗುತ್ತದೆ. ಅಂಥ ಸೂಚನೆಗಳನ್ನು ಅರ್ಥ ಮಾಡಿಕೊಳ್ಳದ ಪುರುಷ ಪುಂಗವ, ಒರಟನೆಂದೂ ಶಟನೆಂದೂ ಹೆಸರಿಸಿಕೊಳ್ಳಬೇಕಾಗುತ್ತದೆ. ಹಾಗೆಯೇ, ಅಲ್ಲಿ ಆಕೆಯ ಕಾಲಿಗೆ ಮುಳ್ಳು ನಿಜವಾಗಿಯೂ ಮೆಟ್ಟಿರಬೇಕಾಗಿಯೂ ಇಲ್ಲ. ಅದು ತನ್ನ ಸೌಕುಮಾರ್ಯವನ್ನು ತರುಣಿ ತೋರಿಸಿಕೊಳ್ಳುವ ಪರಿ. ತಾನು ಅಬಲೆಯೆಂದೂ, ನಿನ್ನ ಪೌರುಷವನ್ನು ಸ್ವಲ್ಪ ಅದುಮಿಟ್ಟುಕೊಂಡು ನಯವಾಗಿ ನನ್ನ ದೇಹದ ಜತೆ ವ್ಯವಹರಿಸೆಂದೂ ಆಕೆ ಹೇಳುವ ರೀತಿಯದು.
ಬಾಣಭಟ್ಟನ 'ಕಾದಂಬರಿ'ಯಲ್ಲಿ ಆತ ಗಂಧರ್ವ ಸ್ತ್ರೀಯರನ್ನು ವರ್ಣಿಸುವ ಪರಿ ಈ ಸುಕುಮಾರತೆಗೊಂದು ನಿದರ್ಶನ. ಅದು ಹೀಗೆ:
ಯತ್ರ ಚಾಲಕ್ತಕರಸೋಪಿ ಚರಣಾತಿಭಾರಃ
ಬಕುಲಮಾಲಿಕಾ ಮೇಖಲಾಕಲನಮಪಿ ಗಮನ ವಿಘ್ನಕರಮ್
ಅಂಗರಾಗಗೌರವಮಪಿ ಅಧಿಕ ಶ್ವಾಸನಿಮಿತ್ತಮ್
ಅಂಶುಕಭಾರೋಂಪಿ ಗ್ಲಾನಿಕಾರಣಮ್
ಆವತಂಸ ಕುಸುಮಧಾರಣಮಪಿ ಶ್ರಮಃ
ಕರ್ಣಪೂರಕಮಲರತಲ ಮಧುಕರ ಪಕ್ಷಪನೋಪ್ಯಾಯಾಸಕರಃ
ಕಾಲು ತಂಪಿರಲಿ ಎಂದು ಹಚ್ಚಿದ ಆಲಕ್ತಕ ರಸ ಆಕೆಗೆ ಭಾರವೆನಿಸುತ್ತಿದ್ದಿತು. ಬಕುಲದ ಹೂಗಳಿಂದ ಮಾಡಿ ಕಟ್ಟಿದ ಮೇಖಲೆಯು ಓಡಾಟಕ್ಕೆ ತೊಡಕಾಗುತ್ತಿತ್ತು. ದೇಹಕ್ಕೆ ಹಚ್ಚಿದ ಅಂಗರಾಗ ಪ್ರಸಾಧನಗಳು ಏದುಬ್ಬಸ ಉಂಟುಮಾಡುತ್ತಿದ್ದವು. ತೆಳುವಾದ ವಸ್ತ್ರವನ್ನು ಧರಿಸಿದ್ದಳು ನಿಜ, ಆದರೆ ಅದೇ ಮಹಾ ಭಾರವೆನಿಸುತ್ತಿತ್ತು. ಕಿವಿಗೆ ಅಲಂಕಾರವೆಂದಿಟ್ಟ ಕಮಲಕ್ಕೆ ದುಂಬಿಗಳು ಮುತ್ತಿಕೊಂಡು ಕಿರಿಕಿರಿ ಮಾಡುತ್ತಿದ್ದವು.
ಇಂಥ ಸುಕುಮಾರಿಯನ್ನು ಯದ್ವಾತದ್ವಾ ಬಳಸಿಕೊಂಡರೆ ಆಕೆ ಸೀತ್ಕಾರ ಮಾಡದೆ ಇದ್ದಾಳೆಯೇ?

= ಹರಿಹರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments