ಟಾಲಿವುಡ್ಗೆ ಸೋನಾಕ್ಷಿ ಸಿನ್ಹಾ
ಸೋನಾಕ್ಷಿ 'ದಕ್ಷಿಣ'ಮುಖಿ ಆಗ್ತಿದ್ದಾಳೆ. ತೆಲುಗು ಚಿತ್ರವೊಂದಕ್ಕೆ ಬಾಲಿವುಡ್ನ ಈ ಬಂಪರ್ ತಾರೆಯನ್ನು ಕರೆತರಲಾಗುತ್ತಿದೆ.
ತಮಿಳು ಚಿತ್ರಲೋಕಕ್ಕೆ ಎಂಟ್ರಿ ಕೊಡ್ತಾಳೆ ಎಂಬ ಮಾತು ಕೇಳಿ ಬರ್ತಿತ್ತು. ಆದರೆ, ಟಾಲಿವುಡ್ನ ಸಕ್ಸಸ್ಫುಲ್ ಡೈರೆಕ್ಟರ್ ರಾಧಾಕೃಷ್ಣ ಜಗರ್ಲಮುಡಿ ಸೋನಾಕ್ಷಿಯ ಅಕ್ಷಿಯನ್ನು ತೆಲುಗು ಕಡೆಗೆ ತಿರುಗಿಸಿದ್ದಾರೆ. ಈಗಾಗಲೇ 'ವೇದಂ', 'ವಾನಂ', 'ಕೃಷ್ಣಂ ವಂದೇ ಜಗದ್ಗುರುಂ'ನಂಥ ಹಿಟ್ ಚಿತ್ರಗಳನ್ನು ಕೊಟ್ಟ ರಾಧಾಕೃಷ್ಣ ಈಗ ಇಂಥ ಸಾಹಸಕ್ಕೆ ಮುಂದಾಗಿದ್ದು ಎಲ್ಲರ ಹುಬ್ಬೇರಿಸಿದೆ. ಅಂದಹಾಗೆ, ತೆಲುಗು ಚಿತ್ರದಲ್ಲಿ ಸೋನಾಕ್ಷಿ ಜತೆ ನಟಿಸುತ್ತಿರುವ ನಾಯಕ ಮಹೇಶ್ಬಾಬು. ಹೆಸರಿನ್ನೂ ಇಟ್ಟಿಲ್ಲ. ಸೋನಾಕ್ಷಿ ಹಿಂದಿಯ ಹೊರತಾಗಿ ಬೇರೆ ಭಾಷೆಯಲ್ಲಿ ನಟಿಸುತ್ತಿರುವುದು ಇದೇ ಮೊದಲು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.