ನಿಮ್ಮನ್ನು ನೀವು ಗೆಲ್ಲಿ
ಗೆಲುವು ಪ್ರತಿಯೊಬ್ಬ ಮನುಷ್ಯನ ಅಪೇಕ್ಷೆಯಾಗಿರುತ್ತದೆ. ಆದರೆ ಎಲ್ಲವನ್ನೂ ಗೆಲ್ಲುವ ಮುನ್ನ ತನ್ನನ್ನು ತಾನು ಗೆಲ್ಲು ಎಂದಾಗ ಶೂನ್ಯಭಾವ ತಾಳುತ್ತಾನೆ. ತನ್ನನ್ನು ತಾನು ಗೆಲ್ಲುವುದು ಎಂದರೇನು? ಎಂಬ ಪ್ರಶ್ನೆ ಕಾಡತೊಡಗುತ್ತದೆ. ನಮ್ಮ ಪಂಜೇಂದ್ರಿಯಗಳನ್ನು, ನಮ್ಮ ಆಸೆ-ದುರಾಸೆಗಳನ್ನು, ಪ್ರತಿಷ್ಠೆ ಮೆರೆದಾಟಗಳನ್ನು ಗೆಲ್ಲುವುದು, ಪ್ರಕೃತಿಸಹಜ ಭಾವದಲ್ಲಿ ಮನಸ್ಸನ್ನು ಹೊಂದುವುದು ನಿಜವಾಗಿಯೂ ನಮ್ಮನ್ನು ನಾವು ಗೆಲ್ಲುವುದು ಎಂಬುದರ್ಥ.
'ನಿಮ್ಮ ಮನಸ್ಸನ್ನು ನೀವು ಇಚ್ಛಾಮಾತ್ರದಿಂದಲೇ ಯಾವುದೇ ವಸ್ತುವಿನಿಂದ ಹಿಂತೆಗೆದುಕೊಳ್ಳಬಲ್ಲಿರಾದರೆ ಆಗ ಕಷ್ಟವೂ ಇರುವುದೇ ಇಲ್ಲ, ಮನುಷ್ಯ ಒಂದು ವಸ್ತುವಿಗೆ ಬಲವಾಗಿ ಅಂಟಿಕೊಂಡಿದ್ದರೂ, ಸಮಯವೊದಗಿದಾಗ ತಕ್ಷಣ ಅದರಿಂದ ದೂರವಾಗಬಲ್ಲ ಸಾಮರ್ಥ್ಯ ಹೊಂದಿರುತ್ತಾನೋ ಅವನೇ ಈ ಪ್ರಕೃತಿಯಿಂದ ಅತಿ ಹೆಚ್ಚಿನ ಲಾಭ ಪಡೆಯುತ್ತಾನೆ. ಆಗಸದ ವೈಶಾಲ್ಯದೊಂದಿಗೆ ಸಾಗರದ ಆಳ ಇದು ನಮ್ಮ ಆದರ್ಶವಾಗಿರಬೇಕು.'
'ಬಲಿಷ್ಠರಾದವರು ದುರ್ಬಲರನ್ನು ತುಳಿಯುತ್ತಿರುವುದು ಕಂಡುಬಂದರೆ ನಾವೇನು ಮಾಡಬೇಕು? ಅನುಮಾನವೇಕೆ? ನಾವು ಆ ಬಲಿಷ್ಠರನ್ನು ಬಗ್ಗುಬಡಿಯಬೇಕು. ಶಕ್ತಿಯೇ ಜೀವನ, ದೌರ್ಬಲ್ಯವೇ ಮರಣ. ದುರ್ಬಲನ ಕ್ಷಮೆಗೆ ಅರ್ಥವಿಲ್ಲ. ಅದಕ್ಕಿಂತ ಪ್ರತಿಭಟಿಸುವುದೇ ಮೇಲು. ನಿಮಗೆ ದೇವತೆಗಳ ದಂಡನ್ನೇ ದಮನಗೊಳಿಸುವ ಸಾಮರ್ಥ್ಯ ಬಂದಾಗ ಕ್ಷಮಿಸುವಿರಂತೆ. ಈ ಜಗತ್ತು ಒಂದು ರಣರಂಗ! ಇಲ್ಲಿ ನೀವು ಹೋರಾಡಿ ನಿಮ್ಮ ಗುರಿ ಸೇರಿ.'
- ಆನಂದ ಎಸ್.ಎನ್.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.