ಪೊಲೀಸ್ ಕಂಪ್ಲೇಂಟ್ ಕೊಡಿ
ಒಬ್ಬ ವ್ಯಕ್ತಿ ನಮ್ಮಿಂದ ಒಂದು ಲಕ್ಷ ರುಪಾಯಿ ಪಡೆದು ಮೋಸ ಮಾಡಿದ್ದಾನೆ. ಆದರೆ ಹಣ ಕೊಟ್ಟಿರುವುದಕ್ಕೆ ನಮ್ಮ ಹತ್ತಿರ ಯಾವುದೇ ದಾಖಲೆಗಳಿಲ್ಲ. ಆತ ಪ್ರತಿಸಾರಿ ಫೋನ್ ಮಾಡಿದಾಗಲೂ 'ನಿಮ್ಮ ಹಣವನ್ನು ಕೊಟ್ಟುಬಿಡುತ್ತೇನೆ. ಇಟ್ಟುಕೊಳ್ಳುವುದಿಲ್ಲ' ಎಂದೇ ಹೇಳುತ್ತಿದ್ದ. ಆದರೆ ಈಗ ಫೋನ್ ಮಾಡಿದರೆ ಸ್ವಿಚ್ಆಫ್ ಬರುತ್ತಿದೆ. ಆತನಿಂದ ಹಣ ಪಡೆದುಕೊಳ್ಳಲು ಏನು ಮಾಡಬೇಕು?
- ಹೆಸರು ಬೇಡ, ಊರು ಬೇಡ
ನೀವು ನಿಮ್ಮ ಮೂರ್ಖತನದಿಂದ ಮೋಸಹೋಗಿದ್ದೀರಿ. ಅಷ್ಟು ದೊಡ್ಡ ಮೊತ್ತದ ಹಣ ಕೊಡುವಾಗ ದಾಖಲೆಗಳನ್ನಿಟ್ಟುಕೊಳ್ಳಬೇಕಿತ್ತು. ಹೋಗಲಿ, ಈಗ ಪೊಲೀಸ್ ಕಂಪ್ಲೇಂಟ್ ಕೊಡಿ. ಆತನ ಮೊಬೈಲ್ ನಂಬರ್ ಇರುವುದರಿಂದ ಪೊಲೀಸರು ಖಂಡಿತ ನಿಮಗೆ ಸಹಾಯ ಮಾಡುತ್ತಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.