ಜಾಕ್ವೆಲಿನ್ ಈಗ ಸಸ್ಯಾಹಾರಿ! (ಸುಹಾಸಿನಿ)
ಬಾಲಿವುಡ್ ಬ್ಯೂಟಿ ಜಾಕ್ವೆಲಿನ್ ಈಗ ಶುದ್ಧ ಸಸ್ಯಾಹಾರಿ. ಮಾತ್ರವಲ್ಲ, ಮನೆಯ ಎಲ್ಲರೂ ಸಸ್ಯಾಹಾರಿಗಳಾಗಬೇಕು ಎಂದು ಪ್ರಯತ್ನಿಸುತ್ತಿದ್ದಾಳೆ. ಚಿಕನ್ ಸೇರಿದಂತೆ ಮಾಂಸಾಹಾರವನ್ನು ಇಷ್ಟಪಟ್ಟು ತಿನ್ನುತ್ತಿದ್ದ ಈಕೆ ಪ್ರಾಣಿ ದಯಾ ಸಂಘಟನೆ 'ಪೇಟಾ' ನಂಟು ಬೆಳೆದಿದ್ದೇ ತಡ, ತನ್ನ ಆಹಾರ ಕ್ರಮ ಬದಲಿಸಿಕೊಂಡಿದ್ದಾಳೆ.
'ಸಸ್ಯಾಹಾರಿಯಾದ ಬಳಿಕ ನನ್ನಲ್ಲಿ ಸಾಕಷ್ಟು ಬದಲಾವಣೆಗಳು ಆಗಿರುವುದು ಅರಿವಿಗೆ ಬರುತ್ತಿದೆ. ಏನೋ ಒಂದು ರೀತಿಯ ಪಾಸಿಟಿವ್ ಎನರ್ಜಿ ನನ್ನಲ್ಲಿರುವ ಹಾಗೆ ಅನ್ನಿಸುತ್ತಿದೆ' ಎನ್ನುವ ಜಾಕ್ವೆಲಿನ್, 'ಮಾಂಸಾಹಾರ ಸೇವಿಸುವುದರಿಂದ ಪ್ರಾಣಿಗಳನ್ನು ಕೊಲ್ಲಬೇಕು. ನಮ್ಮ ಆಹಾರಕ್ಕಾಗಿ ಅವುಗಳ ಜೀವ ತೆಗೆಯುವುದೇಕೆ' ಎಂದು ಬುದ್ಧಿಮಾತನ್ನೂ ಹೇಳುತ್ತಾಳೆ.