ತೃಪ್ತಿ ಇಲ್ಲ ಅಂತಾಳೆ... (ಹಾರ್ಡ್ವರ್ಡ್)
ಮದುವೆಯಾಗಿ ಏಳು ವರ್ಷ. ಸುಖಮಯ ದಾಂಪತ್ಯ. ಆರು ತಿಂಗಳಿನಿಂದ ಈಚೆಗೆ ಹೆಂಡತಿಗೆ ಸೆಕ್ಸ್ನಲ್ಲಿ ನಿರಾಸಕ್ತಿ. 'ನಿಮ್ಮದು ಚಿಕ್ಕದು, ತೃಪ್ತಿಯಾಗುತ್ತಿಲ್ಲ' ಎನ್ನುತ್ತಾಳೆ. ತಲೆ ಕೆಟ್ಟು ಹೋಗಿದೆ. ಏನು ಮಾಡಲಿ?
- ಗವಿಯಪ್ಪ, ಗಂಗಾವತಿ
ತೃಪ್ತಿಗೂ, ಗಾತ್ರಕ್ಕೂ ಸಂಬಂಧವೇ ಇಲ್ಲ. ಅದು ನಿಮ್ಮಾಕೆಯ ಭ್ರಮೆ. ಏಳು ವರ್ಷ 'ಚಿಕ್ಕ'ದ್ದರಿಂದಲೇ ಸುಖ ಅನುಭವಿಸಿಲ್ಲವೆ? ಒಂದು ಕೆಲಸ ಮಾಡಿ. ಕೂಡುವ ಮುನ್ನ ಮುನ್ನಲವಿಗೆ ಸಾಕಷ್ಟು ಸಮಯ ಕೊಡಿ. ಆಕೆ ಭಾವೋದ್ರೇಕದ ಸ್ಥಿತಿ ತಲುಪಿದ ನಂತರ ಮುಂದುವರಿಯಿರಿ. ಕೆಲದಿನ ಹೀಗೆಯೇ ನಡೆಯಲಿ. ಆಗಲೂ ವರಾತ ತಪ್ಪದಿದ್ದರೆ ಲೈಂಗಿಕ ತಜ್ಞರು ಅಥವಾ ಮನಃಶಾಸ್ತ್ರಜ್ಞರ ಬಳಿ ಕರೆದೊಯ್ದು ಚಿಕಿತ್ಸೆ ಕೊಡಿಸಿ. <
ಡಾ. ಸ್ಯಾಟಲೈಟ್