ಒಂದಂಕಿ ಮರ!
ಪಶ್ಚಿಮಘಟ್ಟದ ದಟ್ಟ ಕಾಡುಗಲ್ಲಿನ ಜೀವವೈವಿಧ್ಯತೆ ಬಗ್ಗೆ ಕೇಳಿದ್ದೇವೆ. ನಿಬ್ಬೆರರಗಾಗಿ ನೋಡುವಂಥ ನೂರಾರು ರಹಸ್ಯಗಳು ಆಗೊಮ್ಮೆ ಈಗೊಮ್ಮೆ ಗಮನ ಸೆಳೆಯುತ್ತಲೇ ಇರುತ್ತವೆ. ಈ ನಿಗೂಢಗಳಲ್ಲಿ 'ಕನ್ನಡನ'ವೂ ಬೆರೆತುಕೊಂಡಿದೆ ಎಂದರೆ ಬಹುಶಃ ನಿಮಗೆ ನಂಬಿಕೆ ಹುಟ್ಟುವುದಿಲ್ಲ. ಅದಕ್ಕಾಗಿಯೇ ಈ ಚಿತ್ರಗಳನ್ನು ನೋಡಿ. ಇದು ಕನ್ನಡದ '1' ಅಂಕಿಯನ್ನು ಹೋಲುವ ಬೇರುಗಳು. ಪಶ್ಚಿಮಘಟ್ಟವೆಂಬ ಸಸ್ಯಕಾಶಿಯಲ್ಲಿ ಈ ಅಂಕಿ ಎಂದೂ ಬದಲಾಗಿ ಎರಡಾಗದು, ಮೂರಾಗದು. ಅಂದಹಾಗೆ, ಇದು ರಾಮ ಪತ್ರೆ ಕುಟುಂಬಕ್ಕೆ ಸೇರಿದ ಮರ. ಡೈನೋಸರ್‌ಗಳ ಯುಗದಲ್ಲಿ ಈ ಮರವೂ ಜನ್ಮತಾಳಿತು ಎನ್ನುವುದು ಪರಿಸರವಾದಿಗಳ ಒಮ್ಮತದ ಅಭಿಪ್ರಾಯ. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಸನಿಹದ ಕತ್ತಲ ಕಾನನದಲ್ಲಿ ಇಂಥ ಒಂದಂಕಿ ಮರಗಳು ಅಪರೂಪ ಎನ್ನುವಂತಿವೆ. ನೀರಿನ ಮೂಲಗಳ ಸಮೀಪದಲ್ಲೇ ಈ ಮರ ಬೆಳೆಯುವುದು ಇನ್ನೊಂದು ವಿಶೇಷ. ಮಣ್ಣಿನ ಸವಕಳಿ ತಡೆಯುವ ಮರಗಳಲ್ಲಿ ಇದೂ ಒಂದು. ಅಲ್ಲದೆ, ಮಳೆಯ ನೀರನ್ನು ಹಿಡಿದುಕೊಂಡು ಬೇಸಿಗೆಯಲ್ಲಿ ಬಿಡುವ ಸ್ಪಂಜಿನ ಕೆಲಸವನ್ನೂ ಇವು ನಿರ್ವಹಿಸುತ್ತವೆ. ಈ ಭಾಗದ ಹವ್ಯಕರು ಇದಕ್ಕೆ ಪೂಜನೀಯ ಸ್ಥಾನ ಕಲ್ಪಿಸಿ, ಆರಾಧಿಸುತ್ತಾರೆ. ಉಭಯವಾಸಿ ಜಲಚರಗಳಿಗೆ ಈ ಮರ ಆಶ್ರಯ ಒದಗಿಸುತ್ತದೆ.
ಬೇರಿಗೆ ಗಾಳಿ ಲಭಿಸುವ ಸಲುವಾಗಿ ಇವು ಒಂದಂಕಿಯಂತೆ ಬೆಳೆಯುತ್ತವೆ ಎನ್ನುವುದು ತಜ್ಞರ ಅಭಿಪ್ರಾಯ. ಇದನ್ನು ವೈಜ್ಞಾನಿಕ ಬಾಷೆಯಲ್ಲಿ 'ಜಿಮ್ನಾಕಾಂತಿಯ ಕೆನರಿಕಾ' ಅಂತಾರೆ.
- ಚಿತ್ರ, ಲೇಖನ:
ಅಚ್ಯುತಕುಮಾರ ಯಲ್ಲಾಪುರ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.