ಕಲಾತ್ಮಕ ಛಾಯೆ
ಅವನು ಛಾಯಾಗ್ರಹಣ ಕಲಿಯುತ್ತಿದ್ದ ಯುವಕ. ಖ್ಯಾತ ಫೋಟೋಗ್ರಾಫರ್ ಡಾ. ಡಿ.ವಿ. ರಾವ್ ಅವರ ಅದ್ಭುತ ಚಿತ್ರವೊಂದನ್ನು ನೋಡಿ, 'ಸಾರ್... ಈ ಚಿತ್ರ ತುಂಬಾ ಚೆನ್ನಾಗಿದೆ. ಯಾವ ಕ್ಯಾಮೆರಾದಿಂದ ತೆಗೆದಿದ್ದು ಸಾರ್?' ಎಂದು ಕೇಳಿದ. ಅದಕ್ಕೆ ರಾವ್ ನಸುನಕ್ಕು, 'ನೋಡಿ ನೀವು ಕೇಳಿದ ಪ್ರಶ್ನೆ ಹೇಗಿದೆಯೆಂದರೆ, ನೀವು ಬರೆದ ಕವನ ತುಂಬಾ ಚೆನ್ನಾಗಿದೆ ಸಾರ್... ಯಾವ ಪೆನ್ನಿಂದ ಬರೆದಿರಿ? ಎಂದು ಕೇಳಿದಂತಿದೆ' ಎಂದರಂತೆ.
ಆದ್ದರಿಂದ ಕ್ಯಾಮೆರಾ ಯಾವುದಾದರೂ ಆಗಿರಲಿ, ಮೊದಲು ಫೋಟೋಗ್ರಫಿ ಜ್ಞಾನ ಮುಖ್ಯ. ಅಂಥ ಜ್ಞಾನವನ್ನು ಆಸಕ್ತರ ಕಣ್ಣಲ್ಲಿ ತುಂಬಲು ಡಿ.ವಿ. ರಾವ್ ಯಾವತ್ತೂ ರೆಡಿ. ಸಾಗರ ಫೋಟೋಗ್ರಾಫಿಕ್ ಸೊಸೈಟಿಯ ಸ್ಥಾಪಕ ಅಧ್ಯಕ್ಷರಾಗಿ ಅವರು ಇಂಥ ಕಾರ್ಯಗಳನ್ನೇ ಮಾಡಿದ್ದರು. 2013 ಅವರ ಜನ್ಮಶತಮಾನೋತ್ಸವ ವರ್ಷ. ಡಿ.ವಿ. ನಮ್ಮೊಂದಿಗೆ ಇಲ್ಲವಾದರೂ, ಅವರು ಕ್ಲಿಕ್ಕಿಸಿದ ಫೋಟೋಗಳು ಇನ್ನೂ ಮಾತನಾಡುತ್ತಿವೆ.
ಫೆ.22, 23 ಮತ್ತು 24ರಂದು ಹೆಗ್ಗೋಡಿನಲ್ಲಿ ನೀನಾಸಂ ಸಹಯೋಗದೊಂದಿಗೆ 12ನೇ ರಾಜ್ಯಮಟ್ಟದ ಛಾಯಾಚಿತ್ರ ಕಾರ್ಯಾಗಾರ- ಪ್ರದರ್ಶನ ಏರ್ಪಡಿಸಲಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತರಾದ ಎ.ಜಿ. ಲಕ್ಷ್ಮಿನಾರಾಯಣ್, ಕೆ.ಎಸ್. ರಾಜಾರಾಂ, ಹರೀಶ್, ಆಸ್ಟ್ರೋ ಮೋಹನ್, ನಾಗೇಂದ್ರ, ಪೂರ್ಣಪ್ರಜ್ಞ ಬೇಳೂರು ಮತ್ತಿತರರು ಪಾಲ್ಗೊಳ್ಳುವರು.
- ಅರುಣ್ ಬಾಪಟ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.