ಪರಿಸ್ಥಿತಿಯನ್ನು ಅರ್ಥಮಾಡಿಸಿ (ಹಾರ್ಡ್ವರ್ಡ್)
ನಾನು ಸ್ಮಿತಾ ಎನ್ನುವ ಹುಡುಗಿಯನ್ನು ಪ್ರೀತಿಸುತ್ತಿದ್ದೇನೆ. ಆದರೆ ಈಗ ಕೆಲವು ದಿನಗಳಿಂದ ನಮ್ಮಿಬ್ಬರ ಮಧ್ಯೆ ಮನಸ್ತಾಪ ಉಂಟಾಗಿದೆ. ಅದೆಂದರೆ ಅವಳು 50 ಸಾವಿರ ರೂ.ಗಳನ್ನು ಕೇಳಿದ್ದಳು. ನನಗೆ ಕೊಡಲು ಸಾಧ್ಯವಾಗಲಿಲ್ಲ. ಏಕೆಂದರೆ ನನ್ನ ಬಳಿ ಅಷ್ಟೊಂದು ಹಣ ಇರಲಿಲ್ಲ. ಈಗೇನು ಮಾಡಲಿ?
- ಸಂತೋಷ್ಕುಮಾರ್ ತಿಪ್ಪಾಪುರದ್
ನೀವಿಬ್ಬರೂ ಒಬ್ಬರನ್ನೊಬ್ಬರು ಸರಿಯಾಗಿ ಅರಿತು ಕೊಳ್ಳಲೇ ಇಲ್ಲ. ನಿಮ್ಮ ಪರಿಸ್ಥಿತಿಯನ್ನು ಆಕೆಗೆ ಅರ್ಥವಾಗುವಂತೆ ತಿಳಿಸಿ ಹೇಳಿ. ಕೇವಲ 50 ಸಾವಿರ ರು.ಗಳಿಗೋಸ್ಕರ ನಿಮ್ಮ ಪ್ರೀತಿಯನ್ನು ಬಲಿಕೊಡಬೇಡಿ. ನೀವೇ ಮುಂದಾಗಿ ಮಾತನಾಡಿ, ಪರಿಸ್ಥಿತಿಯನ್ನು ತಿಳಿಗೊಳಿಸಿ. <
-ಡಾ. ಸ್ಯಾಟಲೈಟ್