ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ರಾಷ್ಟ್ರಕ್ಕಾಗಿ ಒಗ್ಗೂಡಿ (ವಿವೇಕ ವಿಚಾರ)

Mainashree
Updated On : 20 Feb 2013, 12:10 pm

ಮೌಢ್ಯಕ್ಕೆ ಸಿಲುಕಿದ ಭಾರತೀಯರು ದೇಶದ ನಿರ್ಮಾಣಕ್ಕಾಗಿ ಒಗ್ಗೂಡಲಾರರು. ವೈಚಾರಿಕ ಧರ್ಮವು ದೇಶದ ಬುನಾದಿಯಾದರೆ, ಆಚಾರಧರ್ಮವು ದೇಶವನ್ನು ಸಮಾಧಿಯಾಗಿಸುತ್ತಿರುವುದು ದುರಂತದ ವಿಷಯ.
'ಕ್ರಾಂತಿಪುರುಷರಾಗಿ, ರಾಷ್ಟ್ರ ನಿರ್ಮಾಪಕರಾಗಿ, ಸನಾತನ ಧರ್ಮದ ಪುನರುದ್ಧಾರರಕರಾಗಿ, ಭರತ ಖಂಡವು ವಿಶ್ವದ ಸಮ್ಮುಖದಲ್ಲಿ ಹೆಮ್ಮೆಯಿಂದ ತಲೆಯೆತ್ತಿ ನಿಲ್ಲಬೇಕಾದರೆ ಜನರು ಈ ಎಲ್ಲ ಕಟ್ಟುಕಟ್ಟಲೆಗಳನ್ನು ಸಂಕುಚಿತತೆಯನ್ನೂ ಮೀರಿ ನಿಂತು ಒಗ್ಗಟ್ಟಾಗಬೇಕು'.
'ಧಾರ್ಮಿಕ ಆಚರಣೆ-ಸಂಪ್ರದಾಯಗಳಲ್ಲಿ ಕಾಳು ಯಾವುದು, ಜೊಳ್ಳು ಯಾವುದೆಂಬುದನ್ನು ಗುರುತಿಸುವ ಪ್ರಜ್ಞೆಯು ಜನರಲ್ಲಿ ಉದಿಸಿದರೆ, ಸಂಕುಚಿತ ಬುದ್ಧಿಯಿಂದುಂಟಾದ ಕಹಿಭಾವನೆಗಳು ತಾವಾಗಿಯೇ ನಾಶವಾಗುತ್ತವೆ. ಆಧುನಿಕ ಅವಶ್ಯಕತೆಗಳಿಗನುಗುಣವಾಗಿ ಭಾರತದ ಪುರಾತನ ಸಂಸ್ಕೃತಿಯನ್ನು ಪುನರ್ಮೌಲ್ಯೀಕರಣಕ್ಕೊಳಪಡಿಸಿ ನವಚೇತನ ತುಂಬುವ ಮಹತ್ಕಾರ್ಯದಲ್ಲಿ ಸರ್ವರೂ ಒಂದಾಗುವುದು, ಸಮಸ್ತ ಭಾರತೀಯರಲ್ಲಿ ಪರಸ್ಪರ ಭ್ರಾತೃಭಾವವನ್ನು ಜಾಗೃತಗೊಳಿಸುವುದು, ವಿದ್ಯಾವಂತ ವರ್ಗದಲ್ಲಿ ಬಡಜನರ ಬಗೆಗಿನ ಹೊಣೆಗಾರಿಕೆಯನ್ನು ಮನವರಿಕೆ ಮಾಡಿಸುವುದು, ಎಲ್ಲ ಜನರೂ ವ್ಯವಸ್ಥಿತ ಸಮಾಜ ಜೀವನದಲ್ಲಿ ಸಹಬಾಳ್ವೆ ನಡೆಸುವುದು.'
ದಲಿತ ವರ್ಗದವರಿಗೆ ಶಿಕ್ಷಣ ನೀಡಿ, ಅವರಲ್ಲಿ ಸಮಾನತೆಯ ಭಾವನೆಯನ್ನುಂಟು ಮಾಡುವುದು ಮತ್ತು ದಬ್ಬಾಳಿಕೆಯನ್ನು ಜಾತಿಪದ್ಧತಿಯನ್ನು ನಿರ್ಮೂಲನ ಮಾಡಿ, ಉನ್ನತ ಧಾರ್ಮಿಕ ವಿಚಾರಗಳ ಬಗ್ಗೆ ತಿಳಿವಳಿಕೆ ನೀಡುವುದು- ಇದು ಪ್ರತಿಯೊಬ್ಬ ವಿದ್ಯಾವಂತ ಭಾರತೀಯನ ಮೇಲಿರುವ ಹೊಣೆ. <

-ಆನಂದ ಎಸ್.ಎನ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement