ಮಯೂರ ವರ್ಣ
ಆಗಸಕ್ಕೆ ಗರಿಯಿಂದಲೇ ಪೇಂಟಿಂಗ್ ಮಾಡುವ ಧಾವಂತದಲ್ಲಿದೆ ಗಂಡು ನವಿಲು. ಇನ್ನೇನು ಸುಳಿವಿಲ್ಲದೆ ಒಂದೆರಡು ಮಳೆ ಮುತ್ತಿನಂತೆ ಉದುರುವ ಹೊತ್ತು. ಕೆಲವೆಡೆ ಬಿದ್ದೂ ಆಗಿದೆ. ನಿಸರ್ಗದ ನೀರನಾದಕ್ಕೆ ಪುಳಕಗೊಂಡ ಗಂಡು ನವಿಲು, ಹೊಸ ಹುರುಪಿನೊಂದಿಗೆ ನರ್ತನಕ್ಕೆ ಗೆಜ್ಜೆಕಟ್ಟುತ್ತದೆ. ವ್ಯಾಲೆಂಟೈನ್ಸ್ ಡೇ ಮುಗಿದಿರುವ ಈ ವೇಳೆ ಹೆಣ್ಣು ನವಿಲನ್ನು ಆಕರ್ಷಿಸಲು, ಅದಕ್ಕೆ ಪ್ರಪೋಸ್ ಮಾಡಲೆಂದೇ ಇಂಥ ಬಣ್ಣಬಣ್ಣದ ಕಸರತ್ತು ನಡೆಸುತ್ತಿದೆ ಅಂತನ್ನಿಸದೇ ಇರದು. ಪ್ರಾಯ ಅಥವಾ ಯವ್ವನ ಎಂದರೆ ಹಾರಾಟ ಎಂಬುದನ್ನು ಬಹುಶಃ ನವಿಲನ್ನು ನೋಡಿಯೇ ವ್ಯಾಖ್ಯಾನಿಸದರೇನೋ ನಮ್ಮ ಕವಿಹೃದಯದ ಪಂಡಿತರು. ನವಿಲುಗರಿಯೊಳಗೆ ಮುದ್ರೆಯಾದ ಹೃದಯದ ಚಿಹ್ನೆಯಲ್ಲೂ ಪ್ರೇಮದ ನೆರಳಿದೆಯೆಂಬುದು ಇನ್ನೊಂದು ಸಿರಿಗನ್ನಡಿ.
ಹೆಚ್ಚಾಗಿ ಪರ್ಣಪಾತಿ, ಕುರುಚಲು ಕಾಡು, ಮೈದಾನ ಪ್ರದೇಶಗಳಲ್ಲಿ ಗಂಡುನವಿಲಿನ ಇಂಥ ಮೈಮಾಟ ಸಾಮಾನ್ಯ. ಗರಿಯಲ್ಲಿನ ಗಾಢ ಹಸಿರಿನ ನಡುವೆ ಬಂಗಾರದ ಎಳೆಗಳು ಮುಖ್ಯಾಕರ್ಷಣೆ. ಚಿನ್ನದ ರೇಟು ಹೆಚ್ಚಿರುವ ಈ ದಿನಗಳಲ್ಲಿ ಪುಕ್ಕಟೆ ನೋಡಿ, ಮೊಗವನ್ನು ಹೊಳಪೇರಿಸಿಕೊಳ್ಳಿ....
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.