ಇಂದೇ ನಿರ್ಧಾರ ಕೈಗೊಳ್ಳಿ (ಹಾರ್ಡ್‌ವರ್ಡ್)
ನನಗೆ ಬುದ್ಧಿ ಬಂದಾಗಿನಿಂದಲೂ ಎಲ್ಲಾ ವಿಷಯದಲ್ಲೂ ಹಿಂಜ ರಿಕೆ, ಹೆದರಿಕೆ ಕಾಡುತ್ತಿದೆ. ನನಗೆ ಎಲ್ಲ ವಿಷಯಗಳಲ್ಲೂ ತುಂಬಾ ತಿಳಿದುಕೊಂಡಿದ್ದೇನೆ, ವಿಷಯ ಜ್ಞಾನವಿದೆ. ಆದರೆ ಎಲ್ಲವನ್ನೂ ಮುಂದೂಡುವ ಪ್ರವೃತ್ತಿ, ನಿರಾಸಕ್ತಿ, ಸೋಂಬೇರಿತನ ನನ್ನನ್ನು ಕಾಡುತ್ತಿದೆ. ಇದಕ್ಕೆ ಪರಿಹಾರವೇನು?
- ಶಿವಮೂರ್ತಿ
ನೀವು ಹೇಳುವ ಸಮಸ್ಯೆಯಲ್ಲೇ ಉತ್ತರವಿದೆ. ನಿಮಗೆ ಎಲ್ಲ ವಿಷಯಗಳ ಜ್ಞಾನವಿದೆ ಎನ್ನುತ್ತೀರಿ, ಹೆದರಿಕೆ, ಹಿಂಜರಿಕೆ, ಕೆಲಸವನ್ನು ಮುಂದೂಡುವ ಪ್ರವೃತ್ತಿ, ನಿರಾಸಕ್ತಿ, ಸೋಂಬೇರಿ ತನವಿದೆ ಎನ್ನುತ್ತೀರಿ. ಇದನ್ನೆಲ್ಲ ಬಿಟ್ಟುಬಿಡಿ. ಇಂದಿನ ಕೆಲಸವನ್ನು ಇಂದೇ ಮಾಡುತ್ತೇನೆ, ಹಿಂಜರಿಕೆಯನ್ನು ಇಂದೇ ಬಿಟ್ಟುಬಿಡುತ್ತೇನೆ ಎಂಬ ಗಟ್ಟಿ ನಿರ್ಧಾರ ತೆಗೆದುಕೊಳ್ಳಿ. ಸಮಸ್ಯೆ ಬಗೆಹರಿಯಿತಲ್ಲ?
-ಡಾ. ಸ್ಯಾಟಲೈಟ್