ಇಂದು- ನಾಳೆ 'ಸಾಹೇಬ್ರ ಸರ್ಕೀಟು' (ಬನ್ನಿಮಂಟಪ)
ಬೆಂಗಳೂರಿಗರ ದಣಿದ ಮನಸ್ಸುಗಳನ್ನು ಉತ್ತಮ ಅಭಿರುಚಿಯ ನಾಟಕಗಳ ಮೂಲಕ ರಂಜಿಸುತ್ತಲೇ ಕನ್ನಡದ ಅತ್ಯುತ್ತಮ ಸಾಹಿತ್ಯವನ್ನು ಪರಿಚಯಿಸುವುದು, ನಮ್ಮ ಸುತ್ತಲಿನ ಸಮಸ್ಯೆಗಳತ್ತ ಅವರ ಗಮನ ಸೆಳೆಯುವುದು, ಈ ಸಮಸ್ಯೆಗಳಿಗೆ ಪರಿಹಾರ ಹುಡುಕುವುದು 'ಕ್ರಿಯೆಟಿವ್ ಥಿಯೇಟರ್' ತಂಡದ ಧ್ಯೇಯಗಳಲ್ಲಿ ಕೆಲವು. ತಂಡದ ಹೊಸ ಪ್ರಯೋಗ, 'ಸಾಹೇಬರ ಸರ್ಕೀಟು' ಇದೇ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ. ಖ್ಯಾತ ಸಾಹಿತಿ ಎಂ. ಆರ್. ಶ್ರೀನಿವಾಸಮೂರ್ತಿ ಅವರ 'ರಂಗಣ್ಣನ ಕನಸಿನ ದಿನಗಳು' ಎಂಬ ಜನಪ್ರಿಯ ಕೃತಿಯ ರಂಗರೂಪವಿದು. ಪ್ರೇಕ್ಷಕರನ್ನು ನಗಿಸುತ್ತಲೇ ನಾಡಿನ ಬಹುತೇಕ ಪ್ರಾಥಮಿಕ ಶಾಲೆಗಳ ಸ್ಥಿತಿಗತಿ, ಶಿಕ್ಷಣಕ್ರಮ, ಶಿಕ್ಷಕರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುತ್ತದೆ. ನಾಟಕದ ವಿನ್ಯಾಸ ಮತ್ತು ನಿರ್ದೇಶನದ ಹೊಣೆ ಹೊತ್ತಿರುವವರು ಪ್ರಮೋದ್ ಶಿಗ್ಗಾಂವ್. ಡುಂಡಿರಾಜ್ ಹಾಗೂ ಗೋಪಾಲ್ ವಾಜಪೇಯಿ ಈ ನಾಟಕಕ್ಕಾಗಿಯೇ ರಚಿಸಿರುವ ಗೀತೆಗಳಿಗೆ ಸಂಗೀತ ನೀಡಿರುವವರು ಗಜಾನನ ಟಿ. ನಾಯ್ಕ. ಗಾಯಕಿಯರು ಸ್ನೇಹಾ ಹಾಗೂ ಪ್ರಗತಿ. ಅವರಿಗೆ ಸಾಥ್ ನೀಡಿರುವವರು ರಾಜಗುರು. ರಂಗಪರಿಕರ: ಪ್ರಶಾಂತ ಕಮ್ಮಾರ. ಬೆಳಕು: ಮುದ್ದಣ್ಣ ರಟ್ಟೆಹಳ್ಳಿ. ಪ್ರಸಾಧನ: ರಾಮಕೃಷ್ಣ ಕನ್ನರಪಾಡಿ. ಕಿರುತೆರೆ ಹಾಗೂ ರಂಗಭೂಮಿ ಕಲಾವಿದರಾದ ಅಶೋಕ್, ಸುಂದರ್, ಲಕ್ಷ್ಮೀ ಚಂದ್ರಶೇಖರ್, ನಾರಾಯಣ ಭಟ್, ಪ್ರಸಾದ್ ಜೈನ್, ಚಂದ್ರಕೀರ್ತಿ ಮುಂತಾದವರು ಅಭಿನಯಿಸುತ್ತಿದ್ದಾರೆ. ಟಿಕೆಟ್ ದರ: ರು.100. ವಿವರಗಳಿಗೆ: 9620604479.
ಸ್ಥಳ: ರಂಗಶಂಕರ, ಜೆ.ಪಿ.ನಗರ, ಬೆಂಗಳೂರು.
ಸಮಯ: ಸಂಜೆ 7.30.
ದಿನಾಂಕ: ಫೆ.28 ಮತ್ತು ಮಾರ್ಚ್ 1.