ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಗುರುವಿನ ಕರೆಗೆ ಓ ಗೊಡಿ (ವಿವೇಕ ವಿಚಾರ)

Rashmi Kasaragodu
Updated On : 27 Feb 2013, 1:07 am

ಸ್ವಾಮಿ ವಿವೇಕಾನಂದರು ಭಾರತೀಯರನ್ನು ಆದರ್ಶದ ಹಾದಿಗೆ ತಂದು ಧ್ಯೇಯದತ್ತ ಮುನ್ನಡೆಸುವ ಮಹಾಕಾರ್ಯಕ್ಕೆ ತಮ್ಮ ಜೀವಮಾನವನ್ನೇ ಅರ್ಪಿಸಿದರು. 'ವ್ಯಕ್ತಿತ್ವ ನಿರ್ಮಾಣವೇ ದೇಶದ ನಿರ್ಮಾಣಕ್ಕೆ ಮೂಲ' 'ನಿಮ್ಮ ಬಾಳಿನ ಶಿಲ್ಪಿಗಳು ನೀವೇ' ಎಂದು ಸಾರಿ ಸಾರಿ ಹೇಳಿ ಎಚ್ಚರಿಸಿದರು. ಶತಮಾನದಿಂದ ಎಚ್ಚರಿಸುವ ಅವರ ಮೇಘಧ್ವನಿಯ ಮೊಳಗಿಗೆ ಭಾರತೀಯರು ಓ ಗೊಡಬೇಕಾಗಿದೆ.
'ನಿಮ್ಮ ಸಣ್ಣ ಬಿಲಗಳಿಂದ ಹೊರಬಂದು ಸುತ್ತಲಿನ ಜಗತ್ತನ್ನೊಮ್ಮೆ ಕಣ್ಣುಬಿಟ್ಟು ನೋಡಿ. ಇತರ ರಾಷ್ಟ್ರಗಳು ಹೇಗೆ ಪ್ರಗತಿಪಥದಲ್ಲಿವೆ ಎಂಬುದನ್ನು ನೋಡಿ. ನೀವು ಮಾನವರನ್ನು ಪ್ರೀತಿಸುವಿರಾ? ನೀವು ನಿಮ್ಮ ರಾಷ್ಟ್ರವನ್ನು ಪ್ರೀತಿಸುವಿರಾ? ಹಾಗಾದರೆ ಬನ್ನಿ, ನಾವೆಲ್ಲ ಉನ್ನತ ಹಾಗೂ ಶ್ರೇಷ್ಠ ಧ್ಯೇಯಗಳಿಗಾಗಿ ಶ್ರಮಿಸೋಣ.'
'ಬಡವರಿಗೆ ಅನುಕಂಪವನ್ನೂ, ಅನ್ನವನ್ನೂ ಕೊಡಬಲ್ಲಂಥ ಜನಸಾಮಾನ್ಯರಿಗೆಲ್ಲ ಬೆಳಕನ್ನು ನೀಡುವಂಥ ನೂತನ ಪರಿಸರವೊಂದನ್ನು ನಿರ್ಮಿಸಲು ಜೀವನ್ಮರಣಗಳನ್ನೂ ಲೆಕ್ಕಿಸದೆ ದುಡಿಯಲಿಚ್ಛಿಸುವ ಯುವಕರು ಬೇಕು. ಈ ಶರೀರದ ಬಂಧನದಿಂದ ಹೊರಬರುವುದೇ ಮೇಲೆಂದು ನಾನು ಭಾವಿಸಬಹುದು. ಅಂತೆಯೇ ಅದನ್ನು ಜೀರ್ಣವಸ್ತ್ರ ಎಂಬಂತೆ ಎಸೆಯಲೂಬಹುದು. ಆದರೆ ನಾನು ಹಿಡಿದ ಕಾರ್ಯವನ್ನು ಬಿಡುವವನಲ್ಲ. ಈ ಸಮಸ್ತ ಜಗತ್ತೂ ತಾನು ಪರಮಾತ್ಮನೊಡನೆ ಒಂದು ಎಂದು ಅರಿತುಕೊಳ್ಳುವವರೆಗೆ ನಾನು ಜಗದ ಜನರನ್ನು ಸ್ಫೂರ್ತಿಗೊಳಿಸುತ್ತ ಹೋಗುತ್ತೇನೆ.'
'ತ್ಯಾಗ ಮಾಡಿ, ನಿಮ್ಮ ದಿವ್ಯ ಸ್ವರೂಪವನ್ನು ತಿಳಿಯಿರಿ! ಏಳಿ, ಎದ್ದೇಳಿ. ಗುರಿ ಮುಟ್ಟುವವರೆಗೂ ನಿಲ್ಲದಿರಿ!'

-ಆನಂದ ಎಸ್.ಎನ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement