ಪೋಷಕರಲ್ಲಿ ಹೇಳಿಕೊ (ಹಾರ್ಡ್ವರ್ಡ್)
ನಾನು ಒಂಬತ್ತನೇ ತರಗತಿಯಲ್ಲಿ ಓದುತ್ತಿದ್ದೇನೆ. ನಾನು ಓದಲು ಕುಳಿತರೆ ನನ್ನ ಮನಸ್ಸಿನಲ್ಲಿ ಹತ್ತಾರು ಬೇರೆ ಬೇರೆ ವಿಚಾರಗಳು ಬರುತ್ತವೆ. ಇದರಿಂದ ನನಗೆ ಓದಿನಲ್ಲಿ ಆಸಕ್ತಿ ಕಡಿಮೆಯಾಗು ತ್ತಿದೆ. ದಯವಿಟ್ಟು ಪರಿಹಾರ ತಿಳಿಸಿ.
- ವೀರೇಶ್ ಮ. ತೋರಲಿ, ಬಾದಾಮಿ
ವೀರೇಶ್, ನೀನೀಗ 9ನೇ ತರಗತಿ ಯಲ್ಲಿ ಓದುತ್ತಿದ್ದೀಯಾ. ಮುಂದಿನ ವರ್ಷ 10ನೇ ತರಗತಿ. ವಿದ್ಯಾರ್ಥಿ ಬದುಕಿನಲ್ಲಿ ಮಹತ್ವದ ತಿರುವು ಪಡೆದುಕೊಳ್ಳುವ, ಜೀವನಕ್ಕೆ ಒಂದು ಸ್ಪಷ್ಟ ದಾರಿ ಕಂಡುಕೊಳ್ಳುವ ಹಂತ. ಈ ಸಮಯದಲ್ಲಿ ಓದನ್ನು ಬಿಟ್ಟು ಬೇರೆ ಯೋಚನೆ ಮಾಡುವುದು ಸರಿಯಲ್ಲ. ದಿನದ ಸ್ವಲ್ಪ ಹೊತ್ತು ಧ್ಯಾನ ಮಾಡು. ಪ್ರಾಣಾಯಾಮ ಮಾಡು. ಎರಡೂ ಆಗದಿದ್ದರೆ ಒಂದರ್ಧ ಗಂಟೆ ಬೇರಾವುದರ ಬಗ್ಗೆಯೂ ಯೋಚಿಸದೆ ದೇವರ ಜಪ ಮಾಡು. ಏಕಾಗ್ರತೆ ತಾನಾಗಿ ಬರುತ್ತದೆ.
-ಡಾ. ಸ್ಯಾಟಲೈಟ್
anekaby2@gmail.com
ನಿಮ್ಮ ಏನೇ ಪ್ರಶ್ನೆಗೆ ಸ್ಯಾಟಲೈಟ್ ಉತ್ತರಿಸುತ್ತದೆ. ಇಲ್ಲಿ ಎಲ್ಲವೂ ನೇರಾನೇರ. ನಿಮ್ಮ ಸಮಸ್ಯೆಗಳನ್ನು ನಮಗೆ ಈಮೇಲ್ ಮಾಡಿ...