ಸೋನಾಕ್ಷಿ ಯಾರಂತೆ? (ಸುಹಾಸಿನಿ)
'ಹಿಮ್ಮತ್‌ವಾಲಾ'ದಲ್ಲಿ ಐಟಂ ಗೀತೆಗೆ ಹೆಜ್ಜೆ ಹಾಕಿದ್ದೇ ಹಾಕಿದ್ದು, ಸರಳ ಸುಂದರಿ ಸೋನಾಕ್ಷಿ ಸಿನ್ಹಾಳನ್ನು ರೀನಾ ರಾಯ್, ಪರ್ವೀನ್ ಬಾಬಿ ಜತೆ ಹೋಲಿಸುವುದು ಶುರುವಾಗಿದೆ. 'ಥ್ಯಾಂಕ್ ಗಾಡ್ ಇಟ್ಸ್ ಫ್ರೈಡೆ' ಗೀತೆಗೆ ಹೆಜ್ಜೆಹಾಕಲು ಆಕೆ ತೊಟ್ಟ ಪೋಷಾಕು ಮತ್ತು ಡಿಸ್ಕೊ ನೆನಪಿಸುವ ಕೋರಿಯೋಗ್ರಫಿ ಕಾರಣ. ಪ್ರಚಾರಕ್ಕೆ ಹೋದಲ್ಲೆಲ್ಲ ಆಕೆಗೆ ಪತ್ರಕರ್ತರಿಂದ ಎದುರಾಗುವ ಪ್ರಶ್ನೆ ಇದೇ. ಉತ್ತರಿಸುವುದು ಮಾತ್ರ ನಿರ್ದೇಶಕ ಸಾಜಿದ್ ಖಾನ್. 'ಸೋನಾಕ್ಷಿಗೆ ಅವಳದೇ ಆದ ಚೆಲುವಿದೆ. ಆಕೆ ಆಕೆಯೇ. ಅವಳನ್ನು ಬೇರೆಯವರೊಂದಿಗೆ ಏಕೆ ಹೋಲಿಸುತ್ತೀರಿ' ಎಂದು ಪ್ರತಿಪ್ರಶ್ನೆ ಕೇಳುವ ಸಾಜಿದ್‌ಗೆ, 'ಈ ಹಾಡು ಹಿಟ್ ಆಗುತ್ತದೆ. 14,15, 16 ವರ್ಷದ ಹುಡುಗಿಯರು ಇದನ್ನು ಸಿಕ್ಕಾಪಟ್ಟೆ ಇಷ್ಟಪಡುತ್ತಾರೆ' ಎನ್ನುವ ವಿಶ್ವಾಸ.
1980ರ ದಶಕದಲ್ಲಿ ಬಂದಿದ್ದ 'ಹಿಮ್ಮತ್‌ವಾಲಾ' ಅದೇ ಹೆಸರಿನಲ್ಲಿ ರೀಮೇಕ್ ಆಗುತ್ತಿದೆ. ಅಜಯ್ ದೇವಗನ್ ಮತ್ತು ತಮನ್ನಾ ಪ್ರಧಾನ ಭೂಮಿಕೆಯಲ್ಲಿದ್ದಾರೆ.