ಬೈಟುಕಾಫಿ

ತಿಪ್ಪೂರ ಪು ರಾವೆ

ಬೆಳಗೊಳದ ಗೊಮ್ಮಟನಿಗಿಂತ ಪ್ರಾಚೀನವಾಗಿರುವ ಬಾಹುಬಲಿ ಮೂರ್ತಿಯೊಂದು ಮಂಡ್ಯ ಜಿಲ್ಲೆ ತಿಪ್ಪೂರಿನಲ್ಲಿದೆ. ಇವತ್ತಿಗೂ ಈ ಸ್ಥಳ ಅಜ್ಞಾತವಾಗಿಯೇ ಉಳಿದಿರುವುದು ಸೋಜಿಗ.

ಗೊಮ್ಮಟೇಶ್ವರ ಎಂದಾಕ್ಷಣ ಕಣ್ಮುಂದೆ ಬರುವುದು ಶ್ರವಣಬೆಳಗೊಳದ ಗೊಮ್ಮಟಮೂರ್ತಿ. ಶ್ರವಣಬೆಳಗೊಳಕ್ಕೂ ಮೊದಲೇ ಪ್ರತಿಷ್ಠಾಪನೆಯಾಗಿರುವ ಬಾಹುಬಲಿ ಮೂರ್ತಿ ಅಜ್ಞಾತವಾಗಿಯೇ ಉಳಿದಿದೆ.
ಮಂಡ್ಯ ಜಿಲ್ಲೆ ತಿಪ್ಪೂರಿನಲ್ಲಿದೆ 12 ಅಡಿ ಎತ್ತರದ ಗೊಮ್ಮಟಮೂರ್ತಿ. ಇದು 1,094 ವರ್ಷಗಳಷ್ಟು ಪುರಾತನವಾದದ್ದು (ಕ್ರಿ.ಶ. 918ರಲ್ಲಿ ಸ್ಥಾಪನೆ). ಶ್ರವಣಬೆಳಗೊಳದಲ್ಲಿರುವ ಗೊಮ್ಮಟಮೂರ್ತಿಗಿಂತ (ಕ್ರಿ.ಶ.981ರಲ್ಲಿ ಪ್ರತಿಷ್ಠಾಪನೆ) ಹಳೆಯದು ಮಾತ್ರವಲ್ಲ, ಗಂಗರ ಕಾಲದ ಶಿಲ್ಪಗಳಿಗೆ ಉತ್ತಮ ಉದಾಹರಣೆ ಎನ್ನುವುದು ಇತಿಹಾಸಕಾರರ ಅಭಿಮತ.
ಗಂಗ ಮತ್ತು ಹೊಯ್ಸಳ ಶಾಸನಗಳಲ್ಲಿ ತಿಪ್ಪೂರು, ತಿಪ್ಪೆಯೂರು ಎಂದು ಉಲ್ಲೇಖಿತವಾಗಿದೆ. ಇಲ್ಲಿಗೆ ಮೂರ್ನಾಲ್ಕು ಕಿ.ಮೀ. ದೂರವಿರುವ ಕೂಳಗೆರೆಯ ಕ್ರಿ.ಶ. 917 ಶಾಸನದಲ್ಲಿ, ಸಗರ ಕುಲದ ಮಣಲಾರನು ಕನಕಗಿರಿ ತೀರ್ಥದ (ಊರಿಗೆ ಹೊಂದಿಕೊಂಡಂತಿದೆ) ಮೇಲೆ ಬಸದಿ ನಿರ್ಮಿಸಿದ ವಿವರಣೆ ಸಿಗುತ್ತದೆ. ಇಲ್ಲಿ ಜೈನ ಕವಿಗಳಾದ ಕಂದರ್ಪದೇವ ಮತ್ತು ಬಾಲಚಂದ್ರದೇವರ ಶಾಸನಗಳಿವೆ.
ಕನಕಗಿರಿ ಬೆಟ್ಟದಲ್ಲಿ ಗಂಗರ ಕಾಲದ ನಾಲ್ಕು ಬಸದಿಗಳು ಇರಬಹುದು ಎಂಬ ವಿದ್ವಾಂಸರ ಅಭಿಪ್ರಾಯಕ್ಕೆ ಅಲ್ಲಿನ ಇಟ್ಟಿಗೆಯ ರಾಶಿ ಸಾಕ್ಷಿಯಾಗಿದೆ. ಪಾರ್ಶ್ವನಾಥನ ಎರಡು,  ಸುಪಾರ್ಶ್ವನಾಥ, ರುಂಡರಹಿತ ಮಹಾವೀರರನ ಒಂದೊಂದು ಶಿಲ್ಪಗಳಿವೆ. ಇದು, ಅಲ್ಲಿ ಬಸದಿಗಳು ಇದ್ದವೆಂಬುದಕ್ಕೆ ಕುರುಹು.
ಈ ಬೆಟ್ಟದಲ್ಲಿಯೇ ಒಂದು ಪುಟ್ಟ ಕೊಳವಿದೆ. ಕೊಳದ ಒಂದು ಭಾಗದ ಬಂಡೆಯ ಮೇಲೆ ತೀರ್ಥಂಕರರನ್ನು (24) ಕೆತ್ತುವ ಪ್ರಯತ್ನ ಅಪೂರ್ಣವಾಗಿದೆ. ಏಳು ತೀರ್ಥಂಕರರ ಉಬ್ಬು ಶಿಲ್ಪಗಳಿವೆ. ಬೆಟ್ಟದ ತಪ್ಪಲಿನಲ್ಲಿ ಎರಡು ಕೊಳಗಳಿವೆ.

ಈಗ ಹೇಗಿದೆ?
ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಸುಪರ್ದಿಗೆ ಒಳಪಟ್ಟಿದ್ದರೂ ಈ ಐತಿಹಾಸಿಕ ನೆಲ ಉಪೇಕ್ಷೆಗೆ ಒಳಗಾಗಿದೆ. ಸೂಕ್ತ ಸಂರಕ್ಷಣೆ ಇಲ್ಲದ ಈ ಸ್ಥಳದ ಕುರುಹಗಳೆಲ್ಲವೂ ನಿತ್ಯ ಒಂದೊಂದಾಗಿ ಕರಗುತ್ತಿದೆ. ಬೆಟ್ಟದ ತಪ್ಪಲಿನಲ್ಲಿ ನಡೆದಿರುವ ಕಲ್ಲು ಗಣಿಗಾರಿಕೆ ಬಾಹುಬಲಿಯ ಪಾದವನ್ನು ಅಲುಗಾಡಿಸುತ್ತಿದೆ. ಗೊಮ್ಮಟಮೂರ್ತಿಯನ್ನು ಹೊತ್ತಿ ನಿಂತಿರುವ ಸವಣಪ್ಪನ ಗುಡ್ಡವೂ  ಕರಗುತ್ತಿದೆ. ಪ್ರಾಚೀನ ಪರಂಪರೆಯ ಅಮೂಲ್ಯ ಕೊಂಡಿಯೊಂದು ನಾಶವಾಗುವ ಭೀತಿ ಎದುರಾಗಿದೆ.
ಕನಕಗಿರಿ ತೀರ್ಥ ಬೆಟ್ಟ ಬಯಲು ಶೌಚಾಲಯವಾಗಿ ಮಾರ್ಪಟ್ಟಿದೆ. ಅಳಿದುಳಿದ ವಿಗ್ರಹಗಳ ತುಂಡುಗಳು ಅಲ್ಲಲ್ಲಿ ಬಿದ್ದಿದ್ದು ಭೂಗರ್ಭ ಸೇರುತ್ತಿವೆ. ಶಾಸನವು ಸುಸ್ಥಿತಿಯಲ್ಲಿದ್ದರೂ ಸಂರಕ್ಷಣೆ ಮಾಡಿಲ್ಲ. ಬೆಟ್ಟದಲ್ಲಿ ಪೂರ್ತಿ ಗಿಡಗಂಟಿ ಬೆಳದಿದೆ.

ಎಲ್ಲಿದೆ?
ಶ್ರವಣಬೆಳಗೊಳದಷ್ಟೇ ಮಹತ್ವ ಪಡೆದ ಪುಟ್ಟ ಊರು ತಿಪ್ಪೂರು. ರೆ ತಿಪ್ಪೂರು, ಬಸ್ತಿ ತಿಪ್ಪೂರು ಎಂದೂ ಕರೆಯುತ್ತಾರೆ. ಮದ್ದೂರಿನಿಂದ 18 ಕಿ.ಮೀ., ಕೊಕ್ಕರೆ ಬೆಳ್ಳೂರಿನಿಂದ 4 ಕಿ.ಮೀ. ದೂರದಲ್ಲಿದೆ.

ಸಂರಕ್ಷಣೆ ಅಗತ್ಯ
ಶ್ರವಣಬೆಳಗೊಳಕ್ಕೂ ಮೊದಲೇ ಪ್ರತಿಷ್ಠಾಪಿಸಲಾಗಿರುವ ಅರೆ ತಿಪ್ಪೂರಿನ ಬಾಹುಬಲಿ ಮೂರ್ತಿಯ ರಕ್ಷಣೆ ತುರ್ತಾಗಿ ಆಗಬೇಕು. ಇಂದು - ನಾಳೆ ಎಂದು ದಿನಗಳನ್ನು ದೂಡುತ್ತಾ ಹೋದರೆ ಸ್ಮಾರಕ ಮತ್ತು ಶಾಸನಗಳು ಕಣ್ಮರೆಯಾಗುತ್ತವೆ. ಸರ್ಕಾರ ತಕ್ಷಣ ಕಾರ್ಯೋನ್ಮುಖವಾಗಿ ಈ ಸ್ಥಳವನ್ನು ಪ್ರವಾಸೋದ್ಯಮ ಕ್ಷೇತ್ರವಾಗಿ ರೂಪಿಸಬೇಕು.
- ತೈಲೂರು ವೆಂಕಟಕೃಷ್ಣ, ಇತಿಹಾಸ ಸಂಶೋಧಕ

ರಾಜ್ಯದಲ್ಲಿ ಎಲ್ಲೆಲ್ಲಿವೆ ಬಾಹುಬಲಿ ಮೂರ್ತಿಗಳು?
ಸ್ಥಳ                              ಕಾಲ       ಎತ್ತರ (ಅಡಿಗಳಲ್ಲಿ)
ಅರೆ ತಿಪ್ಪೂರು (ಮಂಡ್ಯ ಜಿಲ್ಲೆ)   ಕ್ರಿ.ಶ. 918      12
ಶ್ರವಣಬೆಳಗೊಳ              ಕ್ರಿ.ಶ. 981      57.5
ಗೊಮ್ಮಟಗಿರಿ(ಮೈಸೂರು)     12ನೇ ಶತಮಾನ     20
ಕಾರ್ಕಳ                    ಕ್ರಿ.ಶ. 1432     42
ವೇಣೂರು                    ಕ್ರಿ.ಶ. 1604     35
ಧರ್ಮಸ್ಥಳ                   ಕ್ರಿ.ಶ. 1973     39


-ಎಂ.ಅಫ್ರೋಜ್ ಖಾನ್
afroz2020zgmail.com

ಚಿತ್ರಗಳು: ಎಚ್.ಕೆ.ಅಶ್ವಥ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!