ಆನೆ ಎಲ್ಲರಿಗೂ ಇಷ್ಟದ ಪ್ರಾಣಿ. ಗಾಂಭೀರ್ಯಕ್ಕೂ ಸೈ, ಗಲಾಟೆಗೂ ಸೈ ಎಂಬಂತಿರುವ ಇದನ್ನು ಪಳಗಿಸಿದರೆ, ಪ್ರೀತಿಸಿದರೆ, ಇದರಿಂದ ಏನೇನು ಮಾಡಿಸಬಹುದು ಎಂಬುದಕ್ಕೆ ಥಾಯ್ಲೆಂಡ್‌ನ ಎಲಿಫೆಂಟ್ ಶೋ ಸಾಕ್ಷಿ.
ಇಲ್ಲಿ... ಆನೆ ಕಲಾವಿದ, ಫುಟ್‌ಬಾಲ್ ಆಟಗಾರ, ಸೈಕಲ್ ಸವಾರ, ಡ್ಯಾನ್ಸರ್ ಎಲ್ಲವೂ ಆಗುತ್ತದೆ. ಬ್ರಶ್ ಅನ್ನು ಬಣ್ಣದಲ್ಲಿ ಅದ್ದಿ ಕೊಟ್ಟರೆ ಕಲಾವಿದ ಆನೆ ಮರದ ಚಿತ್ರ ಬಿಡಿಸುತ್ತಾನೆ. ನಾಲ್ಕು ಸಲ ಬ್ರಶ್‌ನಲ್ಲಿ 'ದಪ್ ದಪ್' ಅಂತ ಬಣ್ಣ ಹಾಕುವಷ್ಟರಲ್ಲಿ ಮರದ ಚಿತ್ರ ರೆಡಿ, ಅದೂ ಟಿ ಶರ್ಟ್ ಮೇಲೆ! ಈ ಟಿ ಶರ್ಟ್ 300 ಬಾತ್, ಅಂದರೆ 600 ರುಪಾಯಿ ಬೆಲೆಗೆ ದೊರೆಯುತ್ತದೆ. ಸ್ಕರ್ಟ್ ಹಾಕಿದ ಮರಿ ಆನೆಗಳು ರಿಂಗ್‌ನಲ್ಲಿ ಆಡುತ್ತವೆ. ಸ್ಪೋರ್ಟ್ಸ್‌ಮ್ಯಾನ್ ಆನೆ ಸೈಕಲ್ ಸವಾರಿ ಮಾಡುತ್ತಾನೆ.
ಬಾಸ್ಕೆಟ್‌ಬಾಲ್ ಅವನಿಗಿಷ್ಟದ ಆಟ. ಎರಡು ಕಾಲಲ್ಲಿ ನಿಂತು ನಮಸ್ಕಾರ ಮಾಡೋದೂ ಗೊತ್ತು, ಹಾಡಿಗೆ ಕುಣಿಯೋದೂ ಗೊತ್ತು. ಇದನ್ನು ನೋಡಲು ಟಿಕೆಟ್ ತಗೊಂಡು ಮುಗಿಬೀಳುತ್ತಾರೆ. ನಮ್ಮ ದುಬಾರೆ ಮುಂತಾದ ಆನೆ ಕ್ಯಾಂಪ್‌ಗಳಲ್ಲಿ ಇದನ್ನು ಪ್ರಯೋಗಿಸಿ ನೋಡಬಹುದು!
-ವೀಣಾ ಅನಂತ್