ಆಕೆಯನ್ನು ಆ ಅವತಾರದಲ್ಲಿ ನೋಡಿದವರು ದಂಗಾಗಿಹೋದರಂತೆ!
ದುಂಡಗಿದ್ದ ಹುಡುಗಿ ಸಪೂರ ಬೆತ್ತದ ಥರ ಆದರೆ ಯಾರಿಗಾದರೂ ಅರೆಕ್ಷಣ ದಿಗಿಲಾಗುವುದು ಸಹಜ. ಅನುಷ್ಕಾ ಶರ್ಮಾಳನ್ನು ಆ ಅವತಾರದಲ್ಲಿ ಕಂಡವರಿಗೆಲ್ಲ ಮೊದಲು ಅನ್ನಿಸಿದ್ದು 'ಈಕೆಗೂ ಸೈಜ್ ಝೀರೊ ಹುಚ್ಚು ಹತ್ತಿಬಿಟ್ಟಿತಾ?'. ಸಹಜ ಬಿಡಿ. ಬೆಳ್ಳನೆಯ ಪಾರದರ್ಶಕ ಉಡುಗೆ ತೊಟ್ಟು ಬಂದಿದ್ದ ಅನುಷ್ಕಾ ಬಿಳಿಚಿದ ಬೊಂಬೆಯಂತಾಗಿದ್ದಳು. ಮುಖವೂ ಸಪ್ಪೆಯಾಗಿತ್ತು. 'ಈಕೆಗೆ ಅದು ಒಪ್ಪಲ್ಲ' ಎನ್ನುವ ಪಿಸುಪಿಸು. ಕೆಲವರು, 'ಅವಳಿಗೆ ಏನೋ ಅಸೌಖ್ಯ ಆಗಿರಬೇಕು ಕಣ್ರಿ' ಎಂದುಬಿಟ್ಟರಂತೆ. ಅದನ್ನು ಕೇಳಿಸಿಕೊಂಡ ಅವಳ ಮ್ಯಾನೇಜರ್, 'ಅದೆಲ್ಲ ಏನೂ ಇಲ್ಲ ಬಿಡ್ರಿ. ಮೇಡಂ ಮತ್ತೆ ವರ್ಕೌಟ್ ಶುರು ಹಚ್ಚಿಕೊಂಡಿದ್ದಾರೆ. ಆದರೆ ಸಮಯಕ್ಕೆ ಸರಿಯಾಗಿ ಊಟ, ತಿಂಡಿ ಮಾಡೋಕ್ತಾಗಿಲ್ಲ' ಎಂದು ಸಮಜಾಯಿಷಿ ನೀಡಿದರಂತೆ.