ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಮಹಾಗುರುವಿನಿಂದ ಮಹಾಶಿಷ್ಯನ ನಿರ್ಮಾಣ

Mainashree
Updated On : 1 Jul 2013, 1:33 am

ಮಹಾಗುರುವಿನಿಂದ ಮಹಾಶಿಷ್ಯನ ನಿರ್ಮಾಣಕಾರ್ಯ ಸಾಗುತ್ತಿತ್ತು. ಭಗವಂತನ ವಿಷಯವನ್ನು ತಿಳಿಸಹೊರಟಾಗ ರಾಮಕೃಷ್ಣರು ಉಪಯೋಗಿಸುತ್ತಿದ್ದ ಭಾಷೆಯೆಂದರೆ 'ಸಾಕ್ಷಾತ್ಕಾರದ ಭಾಣೆ' ಉಳಿದವರೆಲ್ಲ ಭಗವಂತನ ಅಸ್ಥಿತ್ವದ ಕುರಿತಾಗಿ ಶಾಸ್ತ್ರಗಳ ಭಾಷೆಯಿಂದ ವಿಶ್ಲೇಷಿಸಿ ವಿವರಿಸಹೊರಟರೆ, ರಾಮಕೃಷ್ಣರು ನೇರವಾದ ತಮ್ಮ ಸಾಕ್ಷಾತ್ಕಾರದ ಭಾಷೆಯಲ್ಲಿ ಹೇಳಿಬಿಡುತ್ತಿದ್ದರು.
ರಾಮಕೃಷ್ಣರು ಶಾಸ್ತ್ರ ಸಿದ್ಧಾಂತಗಳನ್ನು ಬಗೆದು ನೋಡುವಂತಹ ತರ್ಕ-ವಿತರ್ಕಗಳಿಗೆ ಗಮನಕೊಡುತ್ತಿರಲಿಲ್ಲ. ಅಲ್ಲದೆ, ನಿಜವಾದ ಆಧ್ಯಾತ್ಮಿಕತೆಯೆಂಬುದು ದೊಡ್ಡ ಸಿದ್ಧಾಂತಗಳನ್ನು ರಮ್ಯವಾದ ಶಬ್ದಗಳ ಮೂಲಕ ವರ್ಣಿಸುವುದರಲ್ಲಿಲ್ಲ ಅಥವಾ ಶಾಸ್ತ್ರ ವ್ಯಾಖ್ಯಾನ ಕೌಶಲದಲ್ಲಿಲ್ಲ. ನಿಜವಾದ ಆಧ್ಯಾತ್ಮಿಕತೆಯಿರುವುದು ಭಗವಂತನ ಸಾಕ್ಷಾತ್ಕಾರದಲ್ಲಿ ಎನ್ನುತ್ತಿದ್ದರು.
ಅವರು ವಾದ-ವಿವಾದವನ್ನು ಸಂಪೂರ್ಣ ನಿರಾಕರಿಸಿದವರಲ್ಲ. ಅವುಗಳ ಉಪಯುಕ್ತತೆಯನ್ನು ಚೆನ್ನಾಗಿ ಅರಿತಿದ್ದರು. ವಿಚಾರಶಕ್ತಿ ಹರಿತವಾಗಲು ಮತ್ತು ವಿಷಯ ಸ್ಪಷ್ಟತೆಗಾಗಿ ಕೆಲವೊಮ್ಮೆ ವಾದ ಮಾಡಲು ಹೇಳುತ್ತಿದ್ದರು. ಶಿಷ್ಯರಿಗೆ ರಾಮಕೃಷ್ಣರ ಸಾನಿಧ್ಯವೇ ಒಂದು ಉನ್ನತ ಆಧ್ಯಾತ್ಮಿಕ ಶಿಕ್ಷಣ ಕೇಂದ್ರ ಎನಿಸಿತ್ತು.
ರಾಮಕೃಷ್ಣರ ಜೀವನ ಒಂದು ದಿವ್ಯ ಗ್ರಂಥದಂತೆ. ನರೇಂದ್ರ ಆ ಗ್ರಂಥದ ಸಂಪುಟ ಸಂಪುಟಗಳನ್ನೇ ಅರಗಿಸಿಕೊಳ್ಳುತ್ತಿದ್ದ. ಅವರ ದಿವ್ಯ ಶಿಕ್ಷಣವನ್ನು ನಿಧಾನವಾಗಿಯಾದರೂ ನಿಶ್ಚಯವಾಗಿ ಅರ್ಥಮಾಡಿಕೊಳ್ಳತೊಡಗಿದ. ನಿಜವಾದ ಧರ್ಮವೆಂದರೆ ಅದು ಸಾಕ್ಷಾತ್ಕಾರ. ಭಗವಂತನನ್ನು ಪ್ರತ್ಯಕ್ಷವಾಗಿ ಕಾಣುವುದೇ ಅತ್ಯುನ್ನತವಾದದ್ದು, ಶ್ರೇಷ್ಠವಾದದ್ದು ಎಂಬುದು ಅವನಿಗೆ ಮನದಟ್ಟಾಯಿತು.
-ಆನಂದ ಎಸ್.ಎನ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement