ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ತಿಳ್ಕೊಳೊ ವಿಷ್ಯ

Lingaraj Badiger
Updated On : 2 Jul 2013, 3:27 am

ಸಿವಿಲ್ ಡಿಫೆನ್ಸ್ ಸದಸ್ಯರು ಭೂಕಂಪ, ಪ್ರವಾಹ, ಅಗ್ನಿ ಅನಾಹುತ, ಕಟ್ಟಡ ಕುಸಿತದಂತಹ ದುರಂತ ಸಂಭವಿಸಿದಾಗ ಜನರಿಗೆ ಸಹಾಯ ಮಾಡುತ್ತಾರೆ. ಅವರನ್ನು ಅಪಾಯದಿಂದ ಮಾರು ಮಾಡುತ್ತಾರೆ. ಇವರು ಪೊಲೀಸರು, ಅಗ್ನಿಶಾಮಕ ದಳ ಸಿಬ್ಬಂದಿ, ಗೃಹರಕ್ಷಕ ಸಿಬ್ಬಂದಿಯಂತೆ ಕೆಲಸ ಮಾಡುತ್ತಾರೆ. ಆದರೆ, ಸಮವಸ್ತ್ರ ಇರುವುದಿಲ್ಲ. ಅರಿಶಿಣ ಬಣ್ಣದ ಒಂದು ಜಾಕೆಟ್ ಮಾತ್ರ ನೀಡಲಾಗುತ್ತದೆ. ಪ್ರತಿದಿನ ಕಚೇರಿಗೆ ಹೋಗಬೇಕೆಂದಿಲ್ಲ. ಕೆಲಸಕ್ಕೆ ಸೇರಲು ವಿದ್ಯಾರ್ಹತೆ ಬೇಕಿಲ್ಲ. ವಯಸ್ಸಿನ ಅಂತರವಿಲ್ಲ. ಕೆಲಸಕ್ಕೆ ಅರ್ಜಿ ಕರೆದಾಗ ಅರ್ಜಿ ಹಾಕಿ ನೇಮಕಗೊಳ್ಳುವವರಿಗೆ ಒಮ್ಮೆ ತರಬೇತಿ ನೀಡಲಾಗುತ್ತದೆ. ಪದೇಪದೇ ತರಬೇತಿ ನೀಡುವುದಿಲ್ಲ.
ಇವರಿಗೆ ಕೆಲಸವಿದ್ದಲ್ಲಿ ದಿನವೊಂದಕ್ಕೆ ರು. 150 ಹಣ ನೀಡಲಾಗುತ್ತದೆ. ಈ ಹಿಂದೆ ರು. 75 ನೀಡಲಾಗುತ್ತಿತ್ತು.

ಎಲ್ಲಾ ಜಿಲ್ಲೆಗಳಲ್ಲೂ ಸಿವಿಲ್ ಡಿಫೆನ್ಸ್ ಸಿಬ್ಬಂದಿ ಇಲ್ಲ. ಕಾರವಾರದ ಮಲ್ಲಾಪುರದಲ್ಲಿ ಕೈಗಾ ಅಣುವಿದ್ಯುತ್ ಸ್ಥಾವರ ಹಾಗೂ ರಾಯಚೂರಿನ ಶಕ್ತಿ ನಗರದಲ್ಲಿ ಅಣುವಿದ್ಯುತ್ ಸ್ಥಾವರ ಇರುವುದರಿಂದ ಅಲ್ಲಿ ಸಿವಿಲ್ ಡಿಫೆನ್ಸ್‌ನ ಎರಡ ಕೇಂದ್ರಗಳಿವೆ. ಉಳಿದ ಜಿಲ್ಲೆಗಳಲ್ಲಿ ಸಿಬ್ಬಂದಿ ಇಲ್ಲ. ಅಗತ್ಯ ಬಿದ್ದಲ್ಲಿ ಹೆಚ್ಚುವರಿ ಸಿಬ್ಬಂದಿಯನ್ನು ಕಳುಹಿಸಿಕೊಡಲಾಗುತ್ತದೆ.
ಸಿವಿಲ್ ಡಿಫೆನ್ಸ್‌ನ ಮುಖ್ಯಕಚೇರಿ ಬೆಂಗಳೂರಿನ ಹಲಸೂರು ಕೆರೆ ಸಮೀಪದಲ್ಲಿರುವ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಕಚೇರಿಯಲ್ಲೇ ಇದೆ. ಅಲ್ಲಿಯೇ ತರಬೇತಿ ನೀಡಲಾಗುತ್ತದೆ.

ಒಂದು ದಿನ, ಎರಡು ದಿನ.... ಹೀಗೆ 15 ದಿನದ 15 ಬಗೆಯ ತರಬೇತಿ ನೀಡಲಾಗುತ್ತದೆ. ಅಗತ್ಯಬಿದ್ದಾಗ ಎಷ್ಟು ದಿನ ಬೇಕೋ ಅಷ್ಟು ದಿನಗಳು ತರಬೇತಿ ಪಡೆಯಬಹುದು. ವಿಪತ್ತಿನ ವೇಳೆ ಕೆಲಸ ನಿರ್ವಹಣೆ ಬಗ್ಗೆ ತರಬೇತಿ ನೀಡಲಾಗುತ್ತದೆ. ಮುಖ್ಯಕಚೇರಿಯಲ್ಲೇ ತರಬೇತಿ ಕೊಡಲಾಗುತ್ತದೆ.

-ಶಾಂತ ತಮ್ಮಯ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement