ನಿವೃತ್ತಿ
ಸರ್ಕಾರಿ ಕಚೇರಿಗಳಲ್ಲಿರುವವರ ಧಿಮಾಕು, ಸಾಮಾನ್ಯರ ಬಗೆಗಿನ ಅಸಡ್ಡೆ ನೋಡಿದರೆ, ಇವರಿಗೆ ನಿವೃತ್ತಿಯೇ ಆಗುವುದಿಲ್ಲವೇನೋ ಎಂದೆನಿಸದಿರದು..
- ಸರೋಜಮ್ಮ ಶ್ರೀನಿವಾಸ್,
ಬೆಂಗಳೂರು
ಸರ್ಕಾರಿ ಕೆಲಸದಿಂದ ನಿವೃತ್ತನಾದ ಮೇಲೆ ನಿವೃತ್ತಿ ಪಿಂಚಣಿಗೋಸ್ಕರ ಅಲೆದೂ ಅಲೆದೂ ಸುಸ್ತಾಗಿ, ಕೊನೆಯ ಪ್ರಯತ್ನವಾಗಿ, ಕ್ಯೂನಲ್ಲಿ ನಿಂತಿದ್ದೆ, ಆ ಅಧಿಕಾರಿಯೂ ಅದೇ ಕ್ಯೂನಲ್ಲಿ ನಿಂತಿದ್ದ..!!
- ಸೋಮಶೇಖರ ರೆಡ್ಡಿ, ಬೆಂಗಳೂರು
ಮನೆಯೊಡತಿಗೆಲ್ಲಿ ನಿವೃತ್ತಿ, ಸದಾ ಹಸನ್ಮುಖದಿಂದ ತನ್ನ ಕೆಲಸ ಮಾಡುತ್ತ ಜೀವನದ ಕೊನೆಯವರೆಗೂ ಗಾಣದೆತ್ತಿನ ಹಾಗೆ ದುಡಿಯುವ ಅವಳ ಪ್ರವೃತ್ತಿಗೆಲ್ಲಿಹುದು ಮಹತ್ವ..
- ವರಲಕ್ಷ್ಮಿ ನಾಗರಾಜ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.