ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಶ್ರೀಗುರುವಿನ ಅಧ್ಯಾತ್ಮ ಶಿಕ್ಷಣ

Lingaraj Badiger
Updated On : 2 Jul 2013, 3:34 am

ಭಾವಾವೇಶ, ಭಾವೋತ್ಕಟತೆಯ ಬಗ್ಗೆ ನರೇಂದ್ರನ ಮನಸ್ಸಿನಲ್ಲಿದ್ದ ತಪ್ಪು ಕಲ್ಪನೆಯನ್ನು ತಿದ್ದಲೋಸುಗ ಒಂದು ದಿನ ರಾಮಕೃಷ್ಣರು ಅವನನ್ನು 'ನೋಡು ಭಗವಂತ ಪಾನಕದ ಸಾಗರವಿದ್ದಂತೆ. ಅದರೊಳಗೆ ಮುಳುಗಲು ನೀನು ಇಷ್ಟಪಡುವುದಿಲ್ಲವೆ? ಈಗ ಒಂದು ದೊಡ್ಡ ಪಾತ್ರೆಯ ತುಂಬ ಪಾನಕವಿದೆ ಎಂದಿಟ್ಟುಕೊ. ನೀನು ಆ ಪಾನಕವನ್ನು ಹೀರಲು ತವಕಿಸುತ್ತಿರುವ ಒಂದು ನೊಣ ಎಂದು ಭಾವಿಸು. ಈಗ ಹೇಳು ಆ ರಸವನ್ನು ಹೇಗೆ ಹೀರುತ್ತೀಯಾ?' ಎಂದು ಕೇಳಿದಾಗ ನರೇಂದ್ರ, 'ಪಾತ್ರೆಯ ಅಂಚಿನಲ್ಲಿ ಕುಳಿತುಕೊಂಡು ಎಚ್ಚರಿಕೆಯಿಂದ ನಿಧಾನವಾಗಿ ಹೀರುತ್ತೇನೆ' ಎಂದ.

ರಾಮಕೃಷ್ಣರು 'ಏಕೆ, ಅದರೊಳಗೇ ಮುಳುಗಿಬಿಡುವುದಿಲ್ಲವೆ?' 'ಅದು ಹೇಗಾದೀತು? ಅದರೊಳಗೆ ಇಳಿದರೆ ಮುಳುಗಿ ಸತ್ತೇ ಹೋದೇನು!' ಆಗ ರಾಮಕೃಷ್ಣರು ವಿವರಿಸಿದರು. 'ಓ, ಅದು ಹಾಗಲ್ಲ, ಭಗವಂತನೆಂದರೆ ಸಚ್ಚಿದಾನಂದ ಸಾಗರ, ಅಮೃತ ಸಾಗರ! ಅದರಲ್ಲಿ ಮುಳುಗಿದರೆ ಮರಣದ ಭಯವಿಲ್ಲ, ಭಗವಂತನನ್ನು ಪ್ರೀತಿಸಿ ಅದು ಅತಿರೇಕವಾಗುವುದು ಎಂಬುದೇನಾದರೂ ಇದೆಯೇನು? ಆದ್ದರಿಂದ ನಿರ್ಭೀತಿಯಿಂದ ಸಚ್ಚಿದಾನಂದ ಸಾಗರದಲ್ಲಿ ಮುಳುಗಿಬಿಡು.'

ಈ ಮಾತು ನರೇಂದ್ರನಿಗೆ ತುಂಬಾ ಸಹಾಯಕವಾಯಿತು. ಈ ಜಗತ್ತಿನಲ್ಲಿ ಯಾವುದು ಅತಿರೇಕವಾದರೂ ಅದು ದುಃಖಕ್ಕೆ, ನಾಶಕ್ಕೆ ಕಾರಣವಾಗುತ್ತದೆ. ಆಹಾರ, ಪಾನೀಯ, ಮನರಂಜನೆ, ಸುಖಭೋಗಗಳಾಗಲಿ ಯಾವುದು ಅತಿಯಾದರೂ ಕೇಡು ತಪ್ಪಿದ್ದಲ್ಲ. ಆದರೆ ಭಗವಂತನನ್ನು ಪ್ರೀತಿಸುವಲ್ಲಿ ಅತಿರೇಕವಾದರೆ ಆನಂದವೂ ಅಧಿಕವಾಗುತ್ತದೆಯೇ ಹೊರತು ಅದರಿಂದ ದುಃಖದ ಭಯವಿಲ್ಲ. ಈ ವಿಷಯ ಮನವರಿಕೆಯಾದ ಮೇಲೆ ಸಾಧನೆಯಲ್ಲಿ ಆಳವಾಗಿ ಮುಳುಗಲು ನರೇಂದ್ರನಿಗೆ ಹೊಸ ಶಕ್ತಿ ದೊರಕಿದಂತಾಯಿತು.
-ಆನಂದ ಎಸ್.ಎನ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement