ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಅಧ್ಯಾತ್ಮಿಕ ಶಕ್ತಿಯ ಜ್ವಲಂತ ಮೂರ್ತಿ

Lingaraj Badiger
Updated On : 5 Jul 2013, 7:01 am

'ಏನು, ನೀವೆಲ್ಲ ಮುಂದೆ ಅತಿ ಹೆಚ್ಚೆಂದರೆ ವಕೀಲರಾದೀರಿ, ವೈದ್ಯರಾದೀರಿ ಅಥವಾ ನ್ಯಾಯಾಧೀಶರಾದೀರಿ ಅಲ್ಲವೆ? ತಾಳಿ, ನನ್ನ ದಾರಿಯನ್ನು ನಾನು ಬೇರೆಯೇ ರೀತಿಯಲ್ಲಿ ರೂಪಿಸಿಕೊಳ್ಳುವುದನ್ನು ನೀವೇ ನೋಡುವಿರಿ' ನರೇಂದ್ರನು ತನ್ನ ಸ್ನೇಹಿತರಿಗೆ ಹೇಳಿದ ಮಾತುಗಳಿವು. ಆಗಲೇ ಅವನಿಗೆ 'ತಾನು ಎಲ್ಲರಂತೆ ಬದುಕಬಂದವನಲ್ಲ' ಎಂಬ ವಿಶ್ವಾಸ ಹುಟ್ಟಿತ್ತು. ಸ್ವತಃ ನರೇಂದ್ರ ತ್ಯಾಗ-ವೈರಾಗ್ಯಗಳ ಹಾಗೂ ಅಧ್ಯಾತ್ಮಿಕ ಶಕ್ತಿಯ ಜ್ವಲಂತ ಮೂರ್ತಿಯೇ ಆಗಿದ್ದ.
ರಾಮಕೃಷ್ಣರು ನರೇಂದ್ರನ ವ್ಯಕ್ತಿತ್ವವನ್ನು ಮುಕ್ತಕಂಠದಿಂದ ಘಂಟಾಘೋಷವಾಗಿ ವರ್ಣಿಸುತ್ತಿದ್ದರು. ಅವನ ನಡತೆಯಲ್ಲೇನಾದರೂ ದೋಷ ಕಂಡುಬಂದರೆ ತಕ್ಷಣ ಅದನ್ನು ತಿದ್ದದೆ ಬಿಡುತ್ತಿರಲಿಲ್ಲ. ಒಮ್ಮೆ ಅವನು ಒಬ್ಬ ವ್ಯಕ್ತಿಯೊಡನೆ ತುಂಬ ಸಲುಗೆಯಿಂದ ಓಡಾಡುತ್ತಿರುವುದನ್ನು ಕಂಡರು. ಆ ವ್ಯಕ್ತಿ ಇವರ ಭಕ್ತಿನೇ ಆದರೂ ವಿಲಾಸೀ ಜೀವನ ನಡೆಸಿದವನು. ಆದ್ದರಿಂದ ಅವರು ನರೇಂದ್ರನನ್ನು ಕರೆದು ಅವನ ಜತೆಯಲ್ಲಿ ಬೆರೆಯದಿರುವಂತೆ ಎಚ್ಚರಿಕೆ ನೀಡಿ, 'ಬೆಳ್ಳುಳ್ಳಿಯಿಟ್ಟಿದ್ದ ಪಾತ್ರೆಯನ್ನು ಎಷ್ಟೇ ತೊಳೆದರೂ ಒಂದು ಸ್ವಲ್ಪವಾದರೂ ವಾಸನೆ ಉಳಿದೇ ಉಳಿಯುತ್ತದೆ. ಹಾಗೆಯೇ ಕಾಮ-ಕಾಂಚನದಲ್ಲಿ ಒಮ್ಮೆ ಮುಳುಗಿದವರ ಹೃದಯವು ಕೂಡ' ಎಂದರು. ಆಗ ನರೇಂದ್ರನಿಗೆ ಎಚ್ಚರಿಕೆಯ ವಾಸ್ತವಾಂಶ ಮನವರಿಕೆಯಾಯಿತು.
ರಾಮಕೃಷ್ಣರ ಬಳಿಗೆ ಖ್ಯಾತ ವೈದ್ಯರು, ವಕೀಲರು, ಪಂಡಿತರು, ಧಾರ್ಮಿಕ ಮುಖಂಡರೆಲ್ಲ ಬರುತ್ತಿದ್ದರೂ ಅವರು ಈಎಲ್ಲ ಭಕ್ತರಲ್ಲಿ ನರೇಂದ್ರನೇ 'ಅತಿ ಶ್ರೇಷ್ಠನಾದವನು' ಎಂದು ಸಾರುತ್ತಿದ್ದರು. ಇದು ನರೇಂದ್ರನಲ್ಲಿ ಹೆಚ್ಚಿನ ಆತ್ಮವಿಶ್ವಾಸವನ್ನು ತುಂಬುತ್ತಿತ್ತು.

- ಆನಂದ ಎಸ್.ಎನ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement