ಪ್ರಜ್ವಲ್ ದೇವರಾಜ್ ಜನುಮ ದಿನ
1987.
ಕನ್ನಡ ಚಿತ್ರ ನಟ. 'ಡೈನಮಿಕ್ ಹೀರೊ' ಎಂದೇ ಪ್ರಖ್ಯಾತಿ.
'ಸಿಕ್ಸರ್' ಚಿತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶ. 25ಕ್ಕೂ ಹೆಚ್ಚು ಚಿತ್ರದಲ್ಲಿ ನಟಿಸಿದ್ದಾರೆ.
ಖ್ಯಾತ ಹಿರಿಯ ನಟ ದೇವರಾಜ್, ಪ್ರಜ್ವಲ್ ಅವರ ತಂದೆ.
ಮೇರಿ ಕ್ಯೂರಿ ಪುಣ್ಯತಿಥಿ
1867-1934.
ಪೋಲೆಂಡ್ ಮೂಲದ ಫ್ರೆಂಚ್ ಪ್ರಜೆ.
ಪೊಲೋನಿಯಮ್ ಹಾಗೂ ರೇಡಿಯಂ ಸಂಶೋಧಿಸಿದ ವಿಜ್ಞಾನಿ.
ರಸಾಯನಶಾಸ್ತ್ರ ಹಾಗೂ ಭೌತಶಾಸ್ತ್ರ ಎರಡೂ ವಿಭಾಗಗಳಲ್ಲಿ ನೊಬೆಲ್ ಪುರಸ್ಕಾರಕ್ಕೆ ಪಾತ್ರರಾದ ಏಕಮಾತ್ರ ವ್ಯಕ್ತಿ. ಪ್ಯಾರಿಸ್ ವಿ.ವಿ.ಯ ಪ್ರಥಮ ಮಹಿಳಾ ಪ್ರಾಧ್ಯಾಪಕಿ.
ದಿನಚರಿತೆ
1776 - ಅಮೆರಿಕ ಬ್ರಿಟನ್ನಿಂದ ಸ್ವತಂತ್ರಗೊಂಡು ತಮ್ಮದೇ ಆದ ಸಹಕಾರಿ ಒಕ್ಕೂಟ ರಚನೆ ಘೋಷಿಸಿಕೊಂಡಿತು.
1789- ಟಿಪ್ಪುವಿನ ಮೇಲೆ ಆಕ್ರಮಣ ಮಾಡಲು ಈಸ್ಟ್ ಇಂಡಿಯಾ ಕಂಪನಿ ಹೈದರಾಬಾದ್ ನಿಜಾಮರ ನಡುವೆ ಒಪ್ಪಂದ.
1996- ಸಬೀರ್ ಭಾಟಿಯಾ, ಜ್ಯಾಕ್ ಸ್ಮಿತ್ ಮೊಟ್ಟಮೊದಲ ಉಚಿತ ಇ-ಮೇಲ್ ಸೇವೆ 'ಹಾಟ್ಮೇಲ್' ಆರಂಭಿಸಿದರು.
ಟ್ವೀಟ್ಸ್ಟಾಲ್
ನನ್ನೊಂದಿಗೆ ಕೆಲಸ ಮಾಡಿದ ನಟಿಮಣಿಯರೆಲ್ಲಾ ಗ್ರೇಟ್. ಆದರೆ ಟಬು ಮಾತ್ರ ಎಲ್ಲರಿಗಿಂತ ಭಿನ್ನ. ಆಕೆಯೊಂದಿಗೆ ನನ್ನ ಸಂಬಂಧ ಸ್ವಲ್ಪ ಎಮೋಷನಲ್ ಆಗಿದೆ...
-ಮಧುರ್ ಭಂಡಾರ್ಕರ್