ಫ್ಯಾಮಿಲಿ ಬಿಸಿನೆಸ್ ಇಷ್ಟವಿಲ್ಲ
ನಾನು 1ನೇ ವರ್ಷದ ಬಿ.ಕಾಂ. ಮುಗಿಸಿ ಬಿಟ್ಟುಬಿಟ್ಟೆ. ನನಗೆ ನನ್ನ ಕುಟುಂಬದ ಉದ್ಯಮವಿದೆ. ಆದರೆ ಈಗ ಗ್ರ್ಯಾಜುಯೇಷನ್ ಮುಗಿಸಿ, ನೌಕರಿ ಮಾಡಬೇಕೆಂದೆನಿಸುತ್ತದೆ. ನನಗೆ ಫ್ಯಾಮಿಲಿ ಬಿಸಿನೆಸ್ನಿಂದ ಹೊರನಡೆದು ನನ್ನ ಕಾಲಮೇಲೆ ನಿಂತುಕೊಳ್ಳಬೇಕೆಂಬಾಸೆ. ಏನು ಮಾಡಲಿ?
- ಅಜಯ್ ಕಾಮತ್
ನಿಮ್ಮ ಗ್ರ್ಯಾಜುಯೇಷನ್ ಮುಗಿಸಬೇಕೆನ್ನುವ ನಿರ್ಧಾರ ಒಳ್ಳೆಯದೇ. ಆದರೆ ನಿಮ್ಮ ಕುಟುಂಬದ ಬಿಸಿನೆಸ್ ಇರುವುದರಿಂದ ಅದರಲ್ಲೇ ತೊಡಗಿಸಿಕೊಳ್ಳಬಹುದಲ್ಲ? ಆ ಉದ್ಯಮವನ್ನೇ ಇನ್ನಷ್ಟು ಬೆಳೆಸುವ ಬಗ್ಗೆ ಯೋಚಿಸಬಹುದು. ಕುಟುಂಬದ ಬಿಸಿನೆಸ್ ಅಂದರೆ ಸ್ವಂತ ಬಿಸಿನೆಸ್ ತಾನೇ? ಯಾರದೋ ಕೈಕೆಳಗೆ ದುಡಿಯುವುದಕ್ಕಿಂತ ಕುಟುಂಬದ ಉದ್ಯಮವನ್ನು ಉತ್ತಮಪಡಿಸುವತ್ತ ಗಮನ ಹರಿಸಿ.
ಡಾ. ಸ್ಯಾಟಲೈಟ್
anekaby2@gmail.com
ನಿಮ್ಮ ಏನೇ ಪ್ರಶ್ನೆಗೆ ಸ್ಯಾಟಲೈಟ್ ಉತ್ತರಿಸುತ್ತದೆ. ಇಲ್ಲಿ ಎಲ್ಲವೂ ನೇರಾನೇರ. ನಿಮ್ಮ ಸಮಸ್ಯೆಗಳನ್ನು ನಮಗೆ ಈಮೇಲ್ ಮಾಡಿ...