ಎಂ.ಬಾಲಮುರಳಿಕೃಷ್ಣ ಜನುಮ ದಿನ
1930.
ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕ; ಕೊಳಲು, ವಯಲಿನ್, ವೀಣಾ ವಾದಕ.
'ಪದ್ಮ ವಿಭೂಷಣ' ಪುರಸ್ಕೃತ.
6ನೇ ವರ್ಷದಿಂದ ಈವರೆಗೆ ಜಗತ್ತಿನಾದ್ಯಂತ 25 ಸಾವಿರಕ್ಕೂ ಹೆಚ್ಚು ಕಛೇರಿ ನೀಡಿದ್ದಾರೆ.
ಧೀರೂಬಾಯಿ ಅಂಬಾನಿ ಪುಣ್ಯತಿಥಿ
1932-2002.
ರಿಲಯನ್ಸ್ ಇಂಡಸ್ಟ್ರೀಸ್ ಸ್ಥಾಪಕ.
2007ರಲ್ಲಿ ಜಗತ್ತಿನ ಸಿರಿವಂತರ ಪಟ್ಟಿಯಲ್ಲಿ 2ನೇ ಸ್ಥಾನ.
ಸ್ವಂತ ಉದ್ಯಮ ಆರಂಭಕ್ಕೆ ಮುನ್ನ ಯೆಮನ್ನ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು.
ದಿನಚರಿತೆ
1785- ಡಾಲರ್ ಅನ್ನು ತನ್ನ ಕರೆನ್ಸಿಯಾಗಿ ಅಮೆರಿಕ ಘೋಷಿಸಿಕೊಂಡಿತು.
1892- ದಾದಾಭಾಯಿ ನೌರೋಜಿ ಅವರು ಬ್ರಿಟನ್ ಸಂಸತ್ತಿಗೆ ಆಯ್ಕೆಯಾದ ಮೊದಲ ಭಾರತೀಯ ಎನ್ನುವ ಗೌರವಕ್ಕೆ ಪಾತ್ರರಾದರು.
1947- ಸೋವಿಯತ್ ಒಕ್ಕೂಟ ಎ.ಕೆ.47 ಉತ್ಪಾದನೆಗೆ ಹಸಿರು ನಿಶಾನೆ ತೋರಿಸಿತು.
ಟ್ವೀಟ್ಸ್ಟಾಲ್
ನಾವು ಏನೆಲ್ಲವನ್ನು ಕಂಡುಹಿಡಿದಿದ್ದೇವೆ, ಭವಿಷ್ಯವನ್ನು ನಿಖರವಾಗಿ ಪತ್ತೆ ಮಾಡುವಂಥ ವ್ಯವಸ್ಥೆಯೊಂದನ್ನು ಬಿಟ್ಟು!
-ಪ್ರಿಯಾಂಕಾ ಚೋಪ್ರಾ