ನಾಟಕೋತ್ಸವ
ರಂಗಶಂಕರದ ಜುಲೈ ತಿಂಗಳ ನಾಟಕೋತ್ಸವದ ಎರಡನೇ ವಾರದ ನಾಟಕಗಳು ಪ್ರದರ್ಶನಕ್ಕೆ ಸಿದ್ಧವಾಗಿವೆ. ಈ ವಾರ ಅನೇಕ ಅದ್ಭುತ ನಾಟಕಗಳು ಪ್ರದರ್ಶನಗೊಳ್ಳಲಿವೆ. ಪೊರ್ಚುಗಲ್ ಹಾಗೂ ಆಸ್ಟ್ರೇಲಿಯಾದ ನಾಟಕಗಳೂ ಇದರಲ್ಲಿವೆ.
ಭಾನುವಾರ (7.7.2013)ದಂದು ರಂಗಶಂಕರದ ಎಎಚ್ಎ ತಂಡ ಅಭಿನಯಿಸುವ ನಾಟಕ 'ಕಾಗ ಟೇಲ್ಸ್' 40 ನಿಮಿಷದ್ದು. ಈ ಇಂಗ್ಲಿಷ್ ನಾಟಕವನ್ನು ರಚಿಸಿ ನಿರ್ದೇಶಿಸುವವರು ಪದ್ಮಾವತಿ ರಾವ್. 9.7.2013, ಮಂಗಳವಾರದಂದು ಪ್ರದರ್ಶನಗೊಳ್ಳಲಿರುವ ನಾಟಕ 'ದ ಇನ್ಕ್ರೆಡಿಬಲ್ ಮುಲ್ಲಾ ನಸ್ರುದ್ದೀನ್'. 60 ನಿಮಿಷಗಳ ಈ ನಾಟಕವನ್ನು ಇಂಗ್ಲಿಷ್ ಹಾಗೂ ಕನ್ನಡ ಎರಡು ಭಾಷೆಯಲ್ಲೂ ಪ್ರದರ್ಶಿಸಲಾಗುವುದು. ಈ ನಾಟಕವನ್ನು ರಂಗಶಂಕರದ ಎಎಚ್ಎ ತಂಡ ಅಭಿನಯಿಸಲಿದೆ. ನಾಟಕದ ರಚನೆ ಹಾಗೂ ನಿರ್ದೇಶನ ಪುಶನ್ ಕೃಪಲಾನಿ ಅವರದು. ಈ ನಾಟಕ ಮಂಗಳವಾರ ಹಾಗೂ ಬುಧವಾರ ಎರಡು ದಿನವೂ ಪ್ರದರ್ಶನಗೊಳ್ಳಲಿದೆ.
ಗುರುವಾರದ ನಾಟಕ ಪೊರ್ಚುಗಲ್ನ ಸರ್ಕ್ಯುಲರ್ ಥಿಯೇಟರ್ ತಂಡದಿಂದ 'ಸ್ಮಾಲ್ ವರ್ಲ್ಡ್ಸ್'. 60 ನಿಮಿಷಗಳ ಈ ನಾಟಕಕ್ಕೆ ಯಾವುದೇ ಭಾಷೆಯಿಲ್ಲ. ಗುರುವಾರ ಮಧ್ಯಾಹ್ನ 3.30ಕ್ಕೆ ಪ್ರಾರಂಭವಾಗುವ ಈ ನಾಟಕ ರಚನೆ ಹಾಗೂ ನಿರ್ದೇಶನ ಒ್ಟ್ಛಟಜ್ಛ್ಝ್ಟ ಆಣಜಢಜಜ್ಟ ಮತ್ತು ಖಿಜ್ಠಜಡಛ ಕ್ಠ್ಝಿಟಛ ಅವರದು. ಶುಕ್ರವಾರ ಹಾಗೂ ಶನಿವಾರ (12-7-13 ಹಾಗೂ 13-7-13) ಪ್ರದರ್ಶನಗೊಳ್ಳುವ ನಾಟಕ 'ಲುಕ್'. ಈ ನಾಟಕವನ್ನು ಆಸ್ಟ್ರೇಲಿಯಾದ ಇಮ್ಯಾಜಿನರಿ ಥಿಯೇಟರ್ ತಂಡ ಪ್ರದರ್ಶಿಸಲಿದೆ. ಶುಕ್ರವಾರ 3.30ಕ್ಕೆ ಪ್ರಾರಂಭವಾಗುವ ಈ ನಾಟಕ ಕೂಡ 60 ನಿಮಿಷದ್ದು. ಭಾನುವಾರದ (ಜುಲೈ 14) ನಾಟಕ 'ಪುರುಷಸೂಕ್ತ' ಸಂಸ್ಕೃತ, ಕನ್ನಡ ಮತ್ತು ಮಲಯಾಳಂ ಮೂರೂ ಭಾಷೆಗಳಲ್ಲಿ ಪ್ರದರ್ಶನಗೊಳ್ಳಲಿದೆ. 65 ನಿಮಿಷಗಳ ಈ ನಾಟಕವನ್ನು ಬೆಂಗಳೂರಿನ ಅಭಿಜ್ಞಾನ ಥಿಯೇಟರ್ ತಂಡ ಅಭಿನಯಿಸಲಿದೆ. ನಾಟಕ ರಚನೆ ಹಾಗೂ ನಿರ್ದೇಶನ ಡಾ.ಜೆ. ಶ್ರೀನಿವಾಸಮೂರ್ತಿ ಹಾಗೂ ಜೊಸೆಫ್ ಜಾನ್ ಅವರದು. ಈ ನಾಟಕ ಭಾನುವಾರ 3.30ಕ್ಕೆ ಪ್ರಾರಂಭವಾಗುವುದು.
ಹೆಚ್ಚಿನ ವಿವರಗಳಿಗೆ - ರಂಗಶಂಕರ, 36/2, 8ನೇ ಕ್ರಾಸ್, ಜೆ.ಪಿ. ನಗರ 2ನೇ ಹಂತ, ಬೆಂಗಳೂರು-560 078. ದೂರವಾಣಿ: 080-26494655/56.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.