ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಪೊಲೀಸ್ ಪರಿಶೀಲನೆ

Lingaraj Badiger
Updated On : 5 Jul 2013, 4:26 am

ಯಾವ ವಯೋವುತಿಯವರು, ಯಾರು ಬೇಕಾದರೂ ನಾಗರಿಕ ರಕ್ಷಣಾ ಪಡೆಯಲ್ಲಿ ಕೆಲಸ ನಿರ್ವಹಿಸಬಹುದು. ಆದರೆ, ಮಾಡುವ ಕೆಲಸದಲ್ಲಿ ಅವರಿಗೆ ಆಸಕ್ತಿ ಇರಬೇಕು. ಏಕೆಂದರೆ ಇದು ಜನಸೇವೆ.
ಹಾಗೆಂದ ಮಾತ್ರಕ್ಕೆ ಬಂದವರನ್ನೆಲ್ಲ ನೇಮಕ ಮಾಡಿಕೊಳ್ಳುವುದಿಲ್ಲ. ಮೊದಲು ಅವರ ಬಗ್ಗೆ ಮಾಹಿತಿ ಪಡೆದು, ನಂತರ ಪೊಲೀಸ್ ಪರಿಶೀಲನೆ ನಡೆಸಲಾಗುತ್ತದೆ. ಆತ ಯಾವುದೇ ರೀತಿಯ ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಯೇ ಇಲ್ಲವೇ ಎಂಬುದು ಇದರ ಉದ್ದೇಶ.
ಕೆಲಸಕ್ಕೆ ಸೇರುವ ಪ್ರತಿಯೊಬ್ಬರಿಗೂ ಬೆಂಗಳೂರಿನಲ್ಲಿರುವ ಮುಖ್ಯಕಚೇರಿಯಲ್ಲಿ ಉಚಿತ ತರಬೇತಿ ನೀಡಲಾಗುತ್ತದೆ. ನಂತರ ಆಯ್ದ ಪರಿಣಿತರನ್ನು ದೆಹಲಿ, ಮೈಸೂರು, ನಾಗ್ಪುರ ಸೇರಿದಂತೆ ದೇಶದಲ್ಲಿ ವಿಪತ್ತು ನಿರ್ವಹಣೆ ಬಗ್ಗೆ ತರಬೇತಿ ನೀಡುವ ತರಬೇತಿ ಕೇಂದ್ರಗಳಿಗೆ ಕಳುಹಿಸಿಕೊಡಲಾಗುತ್ತದೆ. ಅಲ್ಲಿ ಹೆಚ್ಚಿನ ತರಬೇತಿ ಸಿಗುತ್ತದೆ. ಅವರು ಕೆಲಸ ನಿರ್ವಹಿಸಲು ಮತ್ತಷ್ಟು ಶಕ್ತರಾಗಲಿ ಎಂಬುದು ಇದರ ಉದ್ದೇಶ.
ಬೇರೆ ಊರಿನಲ್ಲಿ ತಿಂಗಳುಗಳ ಕಾಲ ತರಬೇತಿ ನಡೆಯಲಿದ್ದು, ತರಬೇತಿಗೆ ಹೋಗುವವರ ಖರ್ಚನ್ನು ಅಷ್ಟು ದಿನಗಳ ಕಾಲ ಸರ್ಕಾರವೇ ಭರಿಸುತ್ತದೆ. ಹಾಗಾಗಿ ಸಿಬ್ಬಂದಿ ಚಿಂತಿಸಬೇಕಿಲ್ಲ.
ಈ ಪಡೆಗೆ ಸೇರುವವರು ಇಂತಿಷ್ಟೇ ದಿನ ಕೆಲಸ ನಿರ್ವಹಿಸಬೇಕು ಎಂದಿಲ್ಲ. ಇಚ್ಚಿಸಿದಷ್ಟು ದಿನ ಕೆಲಸ ನಿರ್ವಹಿಸಬಹುದು. ಕೆಲಸ ಬಿಡುವ ಮುನ್ನ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು.
ಸದ್ಯ ಮೂರು ಜಿಲ್ಲೆಗಳಲ್ಲಿ ಈ ಪಡೆಯ ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದು, ಮುಂದಿನ ದಿನಗಳಲ್ಲಿ 12 ಜಿಲ್ಲೆಗಳಲ್ಲಿ ಸಿಬ್ಬಂದಿ ನೇಮಕ ಮಾಡಿಕೊಳ್ಳುವ ಸಾಧ್ಯತೆ ಇದೆ.

-ಶಾಂತ ತಮ್ಮಯ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement