ಮೂತ್ರದಿಂದ ನಿದ್ದೆ ಹಾಳು
26 ವರ್ಷ. ನನ್ನ ಸಮಸ್ಯೆ ಎಂದರೆ ರಾತ್ರಿ ವೇಳೆ ಪದೇಪದೇ ಮೂತ್ರ ಮಾಡುವುದು. ಇದರಿಂದ ರಾತ್ರಿ ಚೆನ್ನಾಗಿ ನಿದ್ದೆ ಮಾಡಲು ಸಾಧ್ಯವಾಗುತ್ತಿಲ್ಲ. ಪರಿಣಾಮ ಮರುದಿನ ಇಡೀ ದಿನ ಮೂಡ್ ಔಟ್. ಏನು ಮಾಡಬೇಕು ತೋಚುತ್ತಿಲ್ಲ. ದಾರಿ ತೋರಿಸಿ.
- ಪ್ರಶಾಂತ್ ದಾಂಡೋಟೆ, ಗುಲ್ಬರ್ಗ
ಪ್ರಶಾಂತ್ ಅವರೆ, 'ಬೈಟು ಕಾಫಿ' ಜೂನ್ 2ರ ಸಂಚಿಕೆಯಲ್ಲಿ ಇದೇ ರೀತಿಯ ಸಮಸ್ಯೆಗೆ ಉತ್ತರ ನೀಡಲಾಗಿದೆ. ಒಮ್ಮೆ ಓದಿಕೊಂಡರೆ ನಿಮ್ಮ ಸಮಸ್ಯೆಗೂ ಉತ್ತರ ಸಿಗುತ್ತದೆ. ಆದರೂ ನಿಮ್ಮ ಸಮಾಧಾನಕ್ಕೆ ಹೇಳುವುದಿದ್ದರೆ, ರಾತ್ರಿ ಮಲಗುವ 2 ಗಂಟೆ ಮೊದಲು ನೀರು ಸೇರಿದಂತೆ ದ್ರವರೂಪದ ಆಹಾರ ಸೇವಿಸಬೇಡಿ. ಮಲಗುವ ಮುನ್ನ ಮೂತ್ರ ವಿಸರ್ಜನೆ ಮಾಡಿ, ಚೆನ್ನಾಗಿ ಅಲುಗಾಡಿಸಿ ಮೂತ್ರದ್ವಾರದಲ್ಲಿ ಮೂತ್ರದ ಹನಿಗಳು ನಿಂತಿಲ್ಲ ಎನ್ನುವುದನ್ನು ದೃಢಪಡಿಸಿಕೊಳ್ಳಿ. ಮೂತ್ರದ್ವಾರದಲ್ಲಿ ಒಂದೆರಡು ಹನಿಗಳು ಉಳಿದುಕೊಂಡರೂ ಮೂತ್ರಕ್ಕೆ ಹೋಗುವ ಒತ್ತಡ ಉಂಟಾಗುತ್ತದೆ.
-ಡಾ. ಸ್ಯಾಟಲೈಟ್
anekaby2@gmail.com
ನಿಮ್ಮ ಏನೇ ಪ್ರಶ್ನೆಗೆ ಸ್ಯಾಟಲೈಟ್ ಉತ್ತರಿಸುತ್ತದೆ. ಇಲ್ಲಿ ಎಲ್ಲವೂ ನೇರಾನೇರ. ನಿಮ್ಮ ಸಮಸ್ಯೆಗಳನ್ನು ನಮಗೆ ಈಮೇಲ್ ಮಾಡಿ...