ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಚೀಫ್ ವಾರ್ಡನ್ ಜವಾಬ್ದಾರಿ

Mainashree
Updated On : 7 Jul 2013, 2:23 am

ನಾಗರಿಕ ರಕ್ಷಣಾ ಪಡೆಯಲ್ಲಿ ಚೀಫ್ ವಾರ್ಡನ್ ಪ್ರಮುಖರು. ಅಂದರೆ ಇವರು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ವಿಭಾಗದ ಪೊಲೀಸ್ ಮಹಾನಿರ್ದೇಶಕರ ಕೈಕೆಳಗೆ ಕೆಲಸ ನಿರ್ವಹಿಸುತ್ತಾರೆ.
ಚೀಫ್ ವಾರ್ಡನ್ ನಂತರ ಡಿವಿಷನಲ್ ವಾರ್ಡನ್ ಪ್ರಮುಖರು. ನಂತರ ವಾರ್ಡನ್, ಹಾಗೆಯೇ ಸ್ವಯಂಸೇವಕ ಕೊನೆಯ ಸ್ಥಾನದಲ್ಲಿರುತ್ತಾರೆ. ಅವರೇ ಆಯಾ ಪ್ರದೇಶದ ಆಗುಹೋಗುಗಳ ಬಗ್ಗೆ ಸಂಪೂರ್ಣ ಮಾಹಿತಿ ಇರುವವರು. ಈ ನಾಗರಿಕ ರಕ್ಷಣಾ ಪಡೆಯಲ್ಲಿ ರಾಜ್ಯದಲ್ಲಿ ಎಷ್ಟು ಮಂದಿ ಸ್ವಯಂಸೇವಕರಿದ್ದಾರೆ. ಅವರ ವಿಳಾಸ, ಕೆಲಸ ಇತ್ಯಾದಿ ಸಂಪೂರ್ಣ ಮಾಹಿತಿ ಚೀಫ್ ವಾರ್ಡನ್ ಕೈಯಲ್ಲಿ ಇರುತ್ತದೆ.
ಯಾವುದೇ ಅನಾಹುತ ಸಂಭವಿಸಿದರೂ ಯಾವ ಬಡಾವಣೆ ಎಂಬುದನ್ನು ಕಲೆಹಾಕಿ ನಂತರ ಆ ವಿಭಾಗದ ಸ್ವಯಂ ಸೇವಕರಿಗೆ ತಿಳಿಸಲು ಕಂಟ್ರೋಲ್ ರೂಂಗೆ ಮಾಹಿತಿ ನೀಡುತ್ತಾರೆ ಅವರು. ಅಲ್ಲಿ ಎಲ್ಲರ ಮಾಹಿತಿ ಹಾಗೂ ದೂರವಾಣಿ ಸಂಖ್ಯೆ ಇರುವುದರಿಂದ ಸ್ವಯಂಸೇವಕರಿಗೆ ಸುಲಭವಾಗಿ ಮಾಹಿತಿ ಮುಟ್ಟಿಸಲಾಗುತ್ತದೆ.
ಆದರೆ, ಇಷ್ಟೆಲ್ಲ ಜವಾಬ್ದಾರಿ ಹೊತ್ತು ಕರ್ತವ್ಯ ನಿರ್ವಹಿಸುವ ಹಿರಿಯ ಸ್ವಂಸೇವಕರಿಗೆ ಸರ್ಕಾರದಿಂದ ಯಾವುದೇ ರೀತಿಯ ವೇತನ ಇರುವುದಿಲ್ಲ. ಕಿರಿಯ ಸ್ವಯಂಸೇವಕರಿಗೆ ಕೆಲಸ ಮಾಡಿದಾಗ ಮಾತ್ರ ಸಂಬಳ ಸಿಗುತ್ತದೆ.
ಶೇಷಾದ್ರಿ ರಸ್ತೆಯಲ್ಲಿ ರಕ್ಷಣಾ ಪಡೆಯ ನಿಯಂತ್ರಣಾ ಕೊಠಡಿ ಇದೆ. ತುರ್ತು ಸಂದರ್ಭದಲ್ಲಿ ನೀವು ಸಹ ಅಲ್ಲಿಗೆ ಮಾಹಿತಿ ನೀಡಬಹುದು. ನಿಮಗೂ ಜನರ ಸೇವೆ ಮಾಡುವ ಆಸಕ್ತಿ ಇದ್ದಲ್ಲಿ, ಸಿವಿಲ್ ಡಿಫೆನ್ಸ್‌ನ ಚೀಫ್ ವಾರ್ಡನ್ ಚೇತನ್ (98450 34460) ಅವರನ್ನು ಅಥವಾ  ಬೆಂಗಳೂರಿನ ಹಲಸೂರಿನಲ್ಲಿರುವ ಮುಖ್ಯಕಚೇರಿಯನ್ನು ಸಂಪರ್ಕಿಸಬಹುದು. 'ಬನ್ನಿ ಜನಸೇವೆ ಮಾಡಿ' ಎಂಬುದು ಇವರ ಕರೆ.

-  ಶಾಂತ ತಮ್ಮಯ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement