ಗುರುದತ್ತ ಜನುಮ ದಿನ
1925.
ಕನ್ನಡ ಮೂಲದ ಬಾಲಿವುಡ್ ನಟ, ನಿರ್ದೇಶಕ, ನಿರ್ಮಾಪಕ.
ಅವರ ನಿರ್ದೇಶನದ ಪ್ಯಾಸಾ, ಕಾಗಜ್ ಕೀ ಪೂಲ್, ಸಾಹಿಬ್ ಬೀಬಿ ಔರ್ ಗುಲಾಮ್, ಚೌಧವಿ ಕಾ ಚಾಂದ್ ಚಿತ್ರಗಳು 'ಸಾರ್ವಕಾಲಿಕ 100 ಶ್ರೇಷ್ಠ ಹಿಂದಿ ಸಿನಿಮಾ' ಪಟ್ಟಿಯಲ್ಲಿವೆ.
ಕಿಂಗ್ ಸಿ. ಜಿಲ್ಲೆಟ್ ಪುಣ್ಯತಿಥಿ
1855-1932.
ಅಮೆರಿಕನ್ ಉದ್ಯಮಿ. ಜಿಲ್ಲೆಟ್ ಸೇಫ್ಟಿ ರೇಜರ್ ಕಂಪನಿ ಸ್ಥಾಪಕ.
ಬಳಸಿ ಬಿಸಾಡುವ ಸೇಫ್ಟಿ ರೇಜರ್ ವಿನ್ಯಾಸಕ. ಇದೇ ಇವತ್ತಿನ ಎಲ್ಲ ರೇಜರ್ಗಳ ಮೂಲ ವಿನ್ಯಾಸ.
ದಿವಾಳಿ ಎದ್ದಿದ್ದರಿಂದ ತೀವ್ರ ಖಿನ್ನತೆ. ಅದೇ ಸಾವಿಗೆ ಕಾರಣ ಎನ್ನಲಾಗುತ್ತದೆ.
ದಿನಚರಿತೆ
1877- ಲಂಡನ್ನಲ್ಲಿ ವಿಂಬಲ್ಡನ್ ಟೆನ್ನಿಸ್ ಚಾಂಪಿಯನ್ಶಿಪ್ನ ಮೊದಲ ಪಂದ್ಯ ನಡೆಯಿತು.
1922- ಅಮೆರಿಕದ ಈಜುಪಟು ಜಾನಿ ವೀಸ್ಮುಲ್ಲರ್ 100 ಮೀ. ಫ್ರೀ ಸ್ಟೈಲ್ ಈಜುಸ್ಪರ್ಧೆಯಲ್ಲಿ ಈ ದೂರವನ್ನು 58.6 ಸೆಕೆಂಡ್ಗಳಲ್ಲಿ ಕ್ರಮಿಸಿ ವಿಶ್ವ ದಾಖಲೆ ಬರೆದರು.
1981- ಜಪಾನ್ನ ನಿಂಟೆಂಡೊ ಕಂಪನಿ ವಿಡಿಯೋ ಗೇಮ್ 'ಡಾಂಕಿ ಕಾಂಗ್' ಅನ್ನು ಬಿಡುಗಡೆ ಮಾಡಿತು.
ಟ್ವೀಟ್ಸ್ಟಾಲ್
ಸಂಖ್ಯೆ ಮತ್ತು ಗುಣಮಟ್ಟ ಎರಡೂ ದೃಷ್ಟಿಯಿಂದ ಭಾರತದಲ್ಲಿ ಶಿಕ್ಷಣ ಎನ್ನುವುದು ಸವಾಲಿನ ಸಂಗತಿಯೇ ಆಗಿದೆ. ಗುಣಮಟ್ಟದ ಶಿಕ್ಷಣ ನೀಡುವ ಶಾಲೆ, ಕಾಲೇಜುಗಳ ಕೊರತೆ ನಮ್ಮಲ್ಲಿ ವಿಪರೀತ ಇದೆ.
-ಕಿರಣ್ ಮುಜುಮ್ದಾರ್ ಶಾ