KNOWನಿ
ಹಸಿರು ಸಸ್ಯಗಳೆಲ್ಲವೂ ಒಂದಿಲ್ಲೊಂದು ರೀತಿಯ ಔಷಧೀಯ ಗುಣವನ್ನು ಹೊಂದಿವೆ. ಆದರೆ ಅವುಗಳಲ್ಲಿ ಕೆಲವನ್ನು ಬಳಸುವ ವಿಧಾನದ ಸಂಶೋಧನೆ ಇನ್ನೂ ಪೂರ್ಣಗೊಂಡಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಪ್ರಬಲ ಆರೋಗ್ಯವರ್ಧಕವಾಗಿ ಆಯುರ್ವೇದದಲ್ಲಿ ಅತ್ಯಂತ ಹೆಚ್ಚು ಬಳಸುವ ಸಸ್ಯಗಳ ಗುಂಪಿನಲ್ಲಿ ನೋನಿ ಗಿಡಕ್ಕೆ ಅಗ್ರಸ್ಥಾನವಿದೆ. ನೋನಿ ಸಸ್ಯವನ್ನು 'ಭಾರತದ ಮಲ್ಬರ್ರಿ' ಎಂದೂ ಕರೆಯುತ್ತಾರೆ. ಇದರ ಸಸ್ಯಶಾಸ್ತ್ರೀಯ ಹೆಸರು Morinda citrifolia. B¥Úß Rubiaceae ಕುಟುಂಬಕ್ಕೆ ಸೇರಿದೆ.
ಪೊದೆಯ ರೂಪದಲ್ಲಿ ಬೆಳೆಯುವ ಸಸ್ಯ. ಸುಮಾರು 5ರಿಂದ 8 ಅಡಿ ಎತ್ತರಕ್ಕೆ ಬೆಳೆಯುತ್ತದೆ. ಕೆಲವೊಮ್ಮೆ ರಸ್ತೆಯ ಇಕ್ಕೆಲಗಳಲ್ಲಿ, ಸಮುದ್ರದ ತಟದಲ್ಲಿ, ಅರೆಜೌಗು ಪ್ರದೇಶದಲ್ಲಿ ತಾನಾಗಿಯೇ ಹುಟ್ಟಿ ಬೆಳೆದಿರುತ್ತದೆ. ಇತ್ತೀಚಿಗೆ ಇದರ ಪ್ರಾಮುಖ್ಯತೆ ಮತ್ತು ಬೇಡಿಕೆ ಅರಿತವರು ದೊಡ್ಡ ಪ್ರಮಾಣದಲ್ಲಿ ಕೃಷಿ ಮಾಡುತ್ತಿದ್ದಾರೆ. ನೋನಿ ಗಿಡದ ಎಲೆ, ತೊಗಟೆ, ಬೇರು ಮತ್ತು ಹಣ್ಣನ್ನು ವಿವಿಧ ರೋಗಗಳ ನಿವಾರಣೆಗೆ ಬಳಸಬಹುದಾಗಿದೆ. ಆದರೆ ದುರ್ನಾತ ಬೀರುವ ಬಲಿತ ಹಣ್ಣಿನ ರಸವನ್ನು ಹೆಚ್ಚಾಗಿ ಬಳಸಲಾಗುತ್ತದೆ.
ಹಣ್ಣಿನ ರಸ ಶೋಧಿಸುವಿಕೆ
ಹಣ್ಣಿನ ರಸವನ್ನು ಅತ್ಯಂತ ಸುಲಭ ರೀತಿಯಲ್ಲಿ ಬೇರ್ಪಡಿಸಬಹುದು. ಬಲಿತ ಹಣ್ಣುಗಳನ್ನು ಗಾಜಿನ ಪಾತ್ರೆಯಲ್ಲಿಟ್ಟು ಗಟ್ಟಿಯಾಗಿ ಮುಚ್ಚಳ ಹಾಕಿಡಬೇಕು. ಹಣ್ಣು ವಿಘಟನೆ ಹೊಂದಿ ಅದರ ರಸ ಪಾತ್ರೆಯಲ್ಲಿ ಶೇಖರಣೆ ಯಾಗುತ್ತದೆ. ಕೆಲವೊಮ್ಮೆ ಹಣ್ಣಿಟ್ಟ ಪಾತ್ರೆಯನ್ನು ಸೂರ್ಯನ ಬೆಳಕಿನಲ್ಲಿಟ್ಟು ರಸವನ್ನು ಶೋಧಿಸಲಾಗುತ್ತದೆ.
ರಸ ಸೇವಿಸುವ ಕ್ರಮ
ನೋನಿ ಹಣ್ಣಿನ ರಸವಿರಲಿ ಅಥವಾ ಎಲೆಯಿಂದ ತೆಗೆದ ರಸವಿರಲಿ, ಔಷಧವಾಗಿ ಸೇವಿಸಬಯಸುವವರು ಬೆಳಗ್ಗೆ 1 ಟೀ ಸ್ಪೂನ್ ಮತ್ತು ಮಧ್ಯಾಹ್ನ 2 ಟೀ ಸ್ಪೂನ್ ಖಾಲಿ ಹೊಟ್ಟೆಗೆ ಸೇವಿಸಬಹುದು. ಮಾರುಕಟ್ಟೆಯಲ್ಲೂ ನೋನಿ ರಸ ದೊರೆಯುತ್ತದೆ. ದೇಹದ ಸ್ಥಿತಿಗೆ ಅನುಗುಣವಾಗಿ ವೈದ್ಯರ ಸಲಹೆ ಪಡೆದು ಸೇವಿಸುವುದು ಸೂಕ್ತ.
ಪೊದೆಯ ರೂಪದಲ್ಲಿ ಬೆಳೆಯುವ ಸಸ್ಯ. ಸುಮಾರು 5ರಿಂದ 8 ಅಡಿ ಎತ್ತರಕ್ಕೆ ಬೆಳೆಯುತ್ತದೆ. ಕೆಲವೊಮ್ಮೆ ರಸ್ತೆಯ ಇಕ್ಕೆಲಗಳಲ್ಲಿ, ಸಮುದ್ರದ ತಟದಲ್ಲಿ, ಅರೆಜೌಗು ಪ್ರದೇಶದಲ್ಲಿ ತಾನಾಗಿಯೇ ಹುಟ್ಟಿ ಬೆಳೆದಿರುತ್ತದೆ. ಇತ್ತೀಚಿಗೆ ಇದರ ಪ್ರಾಮುಖ್ಯತೆ ಮತ್ತು ಬೇಡಿಕೆ ಅರಿತವರು ದೊಡ್ಡ ಪ್ರಮಾಣದಲ್ಲಿ ಕೃಷಿ ಮಾಡುತ್ತಿದ್ದಾರೆ. ನೋನಿ ಗಿಡದ ಎಲೆ, ತೊಗಟೆ, ಬೇರು ಮತ್ತು ಹಣ್ಣನ್ನು ವಿವಿಧ ರೋಗಗಳ ನಿವಾರಣೆಗೆ ಬಳಸಬಹುದಾಗಿದೆ. ಆದರೆ ದುರ್ನಾತ ಬೀರುವ ಬಲಿತ ಹಣ್ಣಿನ ರಸವನ್ನು ಹೆಚ್ಚಾಗಿ ಬಳಸಲಾಗುತ್ತದೆ.
ಪ್ರಯೋಜನಗಳು
= ಬೆನ್ನು ಮತ್ತು ಗಂಟು ನೋವು ಇರುವವರು ಸೇವಿಸಿದರೆ ಕ್ರಮೇಣ ಅದು ವಾಸಿಯಾಗುತ್ತದೆ.
= ಡಯಾಬಿಟಿಸ್, ರಕ್ತದೊತ್ತಡ ಮತ್ತು ಉಸಿರಾಟದ ಸಮಸ್ಯೆ ಇರುವವರು ವೈದ್ಯರ ಸಲಹೆಯೊಂದಿಗೆ ಬಳಸಿ ಗುಣಮುಖರಾಗಬಹುದು.
= ತಜ್ಞರ ಸಲಹೆಯೊಂದಿಗೆ ಕ್ರಮಬದ್ಧವಾಗಿ ದೀರ್ಘಕಾಲ ನೋನಿ ರಸ ಸೇವಿಸಿ ಮಲಬದ್ಧತೆಯ ಸಮಸ್ಯೆ ಪರಿಹರಿಸಿಕೊಳ್ಳಬಹುದು.
= ನೋನಿ ಗಿಡದ ಎಲೆಯನ್ನು ಬಳಸಿ ತಯಾರಿಸಿದ ಕಷಾಯ ದೇಹದ ತಾಪವನ್ನು ಶಮನಗೊಳಿಸುತ್ತದೆ.
= ಸದ್ಯಕ್ಕೆ ನೋನಿ ರಸ ಬಳಸಿ ಕ್ಯಾನ್ಸರ್, ಏಡ್ಸ್ನಂತಹ ರೋಗಗಳನ್ನು ನಿಯಂತ್ರಿಸುವ ಕುರಿತು ಸಂಶೋಧನೆಗಳು ನಡೆಯುತ್ತಿವೆ.
ಪ್ರೊ. ಶಿವಾನಂದ ಭಟ್ಟ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.